ಜಂಬೂ ಸವಾರಿ ವೀಕ್ಷಿಸಿದ ಡಾ.ಶಿವರಾಜ್ ಕುಮಾರ್ ದಂಪತಿ
ಮೈಸೂರು, ಮೈಸೂರು ದಸರಾ

ಜಂಬೂ ಸವಾರಿ ವೀಕ್ಷಿಸಿದ ಡಾ.ಶಿವರಾಜ್ ಕುಮಾರ್ ದಂಪತಿ

October 20, 2018

ಮೈಸೂರು: ಈ ಬಾರಿ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯನ್ನು ನಟ ಶಿವರಾಜ್‍ಕುಮಾರ್ ದಂಪತಿ ವೀಕ್ಷಿಸಿದರು. ಸಯ್ಯಾಜಿರಾವ್ ರಸ್ತೆಯ ಹೈವೇ ವೃತ್ತ ಬಳಿಯಿರುವ ಪ್ರತಿಷ್ಟಿತ ಖಾಸಗಿ ಹೋಟೆಲ್ ಬಳಿ ನಿರ್ಮಿಸಿದ್ದ ವೇದಿಕೆಯಲ್ಲಿ ಇತರೆ ಗಣ್ಯರೊಂದಿಗೆ ಕುಳಿತು, ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿ ಹೊತ್ತ ಜಂಬೂ ಸವಾರಿಯನ್ನು ವೀಕ್ಷಣೆ ಮಾಡಿದರು.

ಎಪಿಎಂಸಿಯಿಂದ ವಿಶೇಷ ಪೂಜೆ: ಸಯ್ಯಾಜಿರಾವ್ ರಸ್ತೆಯಲ್ಲಿನÀ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಬಳಿ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಹಣ್ಣು ಹಂಪಲು ನೀಡಲಾಯಿತು. ಈ ವೇಳೆ ಅಧ್ಯಕ್ಷ ಸಿದ್ದೇಗೌಡ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ನೀರು, ಮಜ್ಜಿಗೆ ವಿತರಣೆ: ಬಿಸಿಲನ್ನು ಲೆಕ್ಕಿಸದೆ ಸೇರಿದ್ದ ಅಪಾರ ಜನಸ್ತೋಮಕ್ಕೆ ವಾಸವಿ ಯುವಜನ ಸಂಘ, ಮುಖರ್ಜಿ ಫೌಂಡೇಷನ್, ಶ್ರೀ ರಾಜೇಶ್ವರಿ ಪಟೇಲ್ ಗ್ರೂಪ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಕುಡಿಯುವ ನೀರು, ಮಜ್ಜಿಗೆ, ಲಸ್ಸಿ ಹಾಗೂ ಬಿಸ್ಕತ್‍ಗಳನ್ನು ವಿತರಣೆ ಮಾಡಲಾಯಿತು. ನಾಡ ಹಬ್ಬದ ಇತಿಹಾಸ ಹಾಗೂ ವೈಭವ ವನ್ನು ಜನಸಾಮಾನ್ಯರಿಗೆ ತಿಳಿಸುವ ದೃಷ್ಟಿಯಿಂದ ಅರಮನೆ ಆವರಣ, ಜಯಚಾಮ ರಾಜ ಒಡೆಯರ್ ವೃತ್ತ, ಕೆ.ಆರ್.ವೃತ್ತ, ಆಯುರ್ವೇದಿಕ್ ಸರ್ಕಲ್, ಆರ್‍ಎಂಸಿ ಬಸ್ ನಿಲ್ದಾಣ ಹಾಗೂ ಹೈವೇ ಸರ್ಕಲ್‍ಗಳಲ್ಲಿ ವಿಕ್ಷಕ ವಿವರಣೆಗಾರರನ್ನು ನಿಯೋಜಿಸಲಾಗಿತ್ತು.

Translate »