ಎಚ್ಚರಿಕೆ ನೀಡಿದ್ದರೂ ಅಪಾಯವನ್ನೂ ಲೆಕ್ಕಿಸದೆ ಕಟ್ಟಡ, ಮರ ಏರಿ ಮೆರವಣಿಗೆ ವೀಕ್ಷಣೆ
ಮೈಸೂರು, ಮೈಸೂರು ದಸರಾ

ಎಚ್ಚರಿಕೆ ನೀಡಿದ್ದರೂ ಅಪಾಯವನ್ನೂ ಲೆಕ್ಕಿಸದೆ ಕಟ್ಟಡ, ಮರ ಏರಿ ಮೆರವಣಿಗೆ ವೀಕ್ಷಣೆ

October 20, 2018

ಮೈಸೂರು:  ದಸರಾ ಮೆರವಣಿಗೆ ವೇಳೆ ಪಾರಂಪರಿಕ ಕಟ್ಟಡ ಗಳು ಹಾಗೂ ಶಿಥಿಲಗೊಂಡ ಕಟ್ಟಡಗಳ ಮೇಲೆ ಹತ್ತಬಾರದು ಎಂಬ ನಗರಪಾಲಿಕೆ ಆಯುಕ್ತರ ಎಚ್ಚರಿಕೆ ಆದೇಶವನ್ನೂ ಜನತೆ ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣಲಿಲ್ಲ. ಜಂಬೂ ಸವಾರಿ ಮಾರ್ಗದ ಬಹುತೇಕ ಕಟ್ಟಡಗಳು ಅದರಲ್ಲೂ ಮುಖ್ಯವಾಗಿ ಶಿಥಿಲಗೊಂಡಿರುವ ದೇವರಾಜ ಮಾರುಕಟ್ಟೆ ಕಟ್ಟಡದ ಮೇಲೂ ಅಪಾಯವನ್ನೂ ಲೆಕ್ಕಿಸದೆ ಭಾರೀ ಜನ ಕುಳಿತು ಮೆರವಣಿಗೆ ವೀಕ್ಷಿಸಿದರು.

ಮರ, ಕಾಂಪೌಂಡ್, ಪೆಟ್ಟಿಗೆ ಅಂಗಡಿ, ಜಾಹೀರಾತು ಫಲಕಗಳ ಮೇಲೂ ಹತ್ತಿ ಕುಳಿತು ಮೆರವಣಿಗೆ ವೀಕ್ಷಿಸಿದರು. ಟೌನ್ ಹಾಲ್ ಆವರಣದಲ್ಲಿರುವ ಮರಗಳು, ಡಾ. ರಾಜ್‍ಕುಮಾರ್ ಉದ್ಯಾನ, ಡಾ.ವಿಷ್ಣು ವರ್ಧನ್ ಉದ್ಯಾನದ ಮರಗಳು, ಉದ್ಯಾನ ಗಳ ಫಲಕಗಳ ಮೇಲೂ ಕುಳಿತು ಮೆರ ವಣಿಗೆಯನ್ನು ಕಣ್ತುಂಬಿಕೊಂಡರು. ಸಯ್ಯಾಜಿರಾವ್ ರಸ್ತೆಯ ಇಕ್ಕೆಲಗಳಲ್ಲಿನ ಕಟ್ಟಡಗಳ ಮೇಲೂ ಜನರು ಕುಳಿತು ಮೆರವಣಿಗೆ ನೋಡಿದರು.

ತಳ್ಳಾಟ, ನೂಕಾಟದಲ್ಲಿ ಸಿಲುಕಿದ ಮಹಿಳೆಯರು: ಕೆ.ಆರ್.ವೃತ್ತ, ಚಾಮರಾಜ ವೃತ್ತ, ವಿಶ್ವೇಶ್ವರಯ್ಯ ವೃತ್ತ, ಚಿಕ್ಕ ಗಡಿಯಾರ, ಧನ್ವಂತರಿ ರಸ್ತೆ ಇನ್ನಿತರ ಕಡೆಗಳಲ್ಲಿ ಮೆರ ವಣಿಗೆ ವೀಕ್ಷಿಸಲು ಕುಳಿತಿದ್ದ ಮಹಿಳೆಯರು, ಮಕ್ಕಳು ಹಿಂದಿನಿಂದ ಉಂಟಾದ ನೂಕಾಟ, ತಳ್ಳಾಟದಲ್ಲಿ ಸಿಲುಕಿ ಚೀರಾಡುತ್ತಿದ್ದ ದೃಶ್ಯ ಕಂಡು ಬಂತು. ಮಹಿಳೆಯರು, ಮಕ್ಕಳು ಪೊಲೀಸರ ಸಹಾಯ ಕೋರುತ್ತಿದ್ದರು. ನಮ್ಮನ್ನು ಬ್ಯಾರಿಕೇಡ್‍ನಿಂದ ಹೊರ ಬರಲು ಅವಕಾಶ ನೀಡಿ ಎಂದು ಅಂಗಲಾಚುತ್ತಿದ್ದ ದೃಶ್ಯ ಕೆಲವೆಡೆ ಕಂಡು ಬಂದಿತು. ತಳ್ಳಾ ಡುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀ ಸರು ಹರಸಾಹಸಪಡುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

ಸಿಕ್ಕಿದ್ದನ್ನು ತಿಂದು ಹಸಿವು ನೀಗಿಸಿ ಕೊಂಡರು: ಬೆಳಿಗ್ಗೆಯಿಂದಲೇ ಜಂಬೂ ಸವಾರಿ ವೀಕ್ಷಣೆಗೆ ಕಾದು ಸುಸ್ತಾಗಿದ್ದ ಜನರು ಮೆರವಣಿಗೆ ಮುಗಿದು ಕೆ.ಆರ್. ವೃತ್ತದಿಂದ ಚಾಮುಂಡೇಶ್ವರಿಯನ್ನು ಹೊತ್ತ ಅಂಬಾರಿ ಮುಂದೆ ಸಾಗುತ್ತಿದ್ದಂತೆ ಜನ ಅಲ್ಲಲ್ಲಿ ಚದುರತೊಡಗಿದರು. ಹಿಂದೆ ಇನ್ನಷ್ಟು ಜನಪದ ನೃತ್ಯಗಳು, ಸ್ಥಬ್ಧ ಚಿತ್ರಗಳಿದ್ದರೂ ಜನ ಚದುರಿದರು. ದೇವರಾಜ ಅರಸು ರಸ್ತೆ, ಧನ್ವಂತರಿ ರಸ್ತೆಗಳಲ್ಲಿ ಸಿಕ್ಕ ಸಿಕ್ಕಲ್ಲಿ ತಿಂಡಿ ಗಾಡಿಗಳತ್ತ ಮುಗಿಬಿದ್ದರು. ಹೋಟೆಲ್‍ಗಳಿಗೆ ಲಗ್ಗೆ ಇಟ್ಟು ಸಿಕ್ಕಿದ್ದನ್ನು ತಿಂದು ಹಸಿವು ನೀಗಿಸಿಕೊಂಡರು.

Translate »