ಮೈಸೂರು: ಕಲಾಮಂದಿರದ ಕಿರು ರಂಗಮಂದಿರದಲ್ಲಿ ಚಾರ್ವಾಕ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 2ರಂದು ಆರಂಭವಾಗುವ ನಾಟಕೋತ್ಸವದ ಅಂಗವಾಗಿ ವೈಚಾರಿಕ ಚಿಂತನೆ ಮತ್ತು ಚಿಂತಕರ ಕಗ್ಗೊಲೆ ಎಂಬ ವಿಚಾರ ಸಂಕಿರಣವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧು ಸೂದನ್ ಅವರು ಉದ್ಘಾಟಿಸಲಿದ್ದು, ವಿಚಾರವಾದಿ ಪ್ರೊ.ಕಾಳೇಗೌಡ ನಾಗವಾರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನ್ಯಾಯವಾದಿ ಹೆಚ್. ಮೋಹನ್ಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪರಿ ವರ್ತನಾ ಪತ್ರಿಕಾ ಸಂಪಾದಕ ಡಾ. ಕೃಷ್ಣಮೂರ್ತಿ ಚಮರಂ, ವಿಚಾರವಾದಿ ಮಲ್ಕುಂಡಿ ಮಹದೇವಸ್ವಾಮಿ ಭಾಗವಹಿಸಲಿದ್ದು, ಚಾರ್ವಾಕ ಸಂಸ್ಥೆ ಅಧ್ಯಕ್ಷ ಗಿರೀಶ್ ಮಂಚಳ್ಳಿ ಉಪಸ್ಥಿತರಿರಲಿದ್ದಾರೆ. ನಾಟಕೋತ್ಸವವು ಜೂನ್ 2ರಿಂದ ಜೂನ್ 5ರವರೆಗೆ ಪ್ರತಿ ದಿನ ಸಂಜೆ 6.30ಕ್ಕೆ ನಡೆಯಲಿದ್ದು, ಕಲಾಮಂದಿರದ ಕಿರು ರಂಗಮಂದಿರದಲ್ಲಿ ಜೂನ್ 2ರಂದು `ಷರೀಫ್’, 3ರಂದು `ಮತ್ತೊಬ್ಬ ಮಹಮಾಂಬ’, 4ರಂದು `ಪ್ಲೀಸ್ ಅರೆಸ್ಟ್ ಮಿ’ ಹಾಗೂ ಜೂನ್ 5ರಂದು `ಕುರುಕ್ಷೇತ್ರ’ ನಾಟಕಗಳನ್ನು ಪ್ರದರ್ಶಿಸಲಾಗುವುದು.
