ಮೈಸೂರು: ಮಹಾ ರಾಜ ಕಾಲೇಜು ಶತಮಾನೋತ್ಸವ ಭವನ ದಲ್ಲಿ ಗುರುವಾರ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ 10 ಮಂದಿಗೆ `ನಂದಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಮೈಸೂರು ಜಿಲ್ಲಾ ಅಥ್ಲೆಟಿಕ್ ಅಸೋಸಿ ಯೇಷನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ರೀಡಾ ಪತ್ರಕರ್ತ ಮಹ ಮದ್ ನೂಮನ್, ಕ್ರೀಡಾ ಛಾಯಾ ಗ್ರಾಹಕ ನಾಗೇಶ್ ಪಣತ್ತಲೆ, ಕ್ರೀಡಾಪಟು ಗಳಾದ ಸುಹಾಸ್ ಎಸ್.ಗೌಡ, ಅಪ್ಸನಾ ಬೇಗಂ, ಬಿ.ಮನುಷ್, ಎಸ್.ರಾಹುಲ್ ಕಶ್ಯಪ್, ಎನ್.ರಾಹುಲ್ ನಾಯಕ್, ಲಿಖಿತ ಯೋಗೇಶ್, ಹೆಚ್.ಎಸ್.ಹರ್ಷಿತಾ ಹಾಗೂ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಿಗೆ `ನಂದಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ನಂತರ ಮಾಜಿ ಶಾಸಕ ವಾಸು ಮಾತ ನಾಡಿ, ಮೈಸೂರು ಸಾಂಸ್ಕøತಿಕ, ಶೈಕ್ಷಣಿಕ, ಕೈಗಾರಿಕಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗು ತ್ತಿದ್ದು, ಸಾಕಷ್ಟು ಮಂದಿ ಕ್ರೀಡಾಪಟುಗಳಿ ದ್ದಾರೆ. ಅವರಿಗೆ ಉತ್ತಮ ಮಾರ್ಗದರ್ಶನ, ಪ್ರೋತ್ಸಾಹ ಸಿಗಬೇಕಿದೆ. ಅದಕ್ಕಾಗಿಯೇ ನಾನು ಮೈಸೂರಲ್ಲಿ ಕ್ರೀಡಾ ವಿವಿ ಸ್ಥಾಪಿಸ ಬೇಕೆಂದು ಹಲವು ಬಾರಿ ಸರ್ಕಾರವನ್ನು ಒತ್ತಾಯಿಸಿದ್ದೇನೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗಲೂ ಮನವಿ ಮಾಡಿದ್ದೆ. ಆದರೆ ಯಾವುದೇ ಪ್ರಯೋಜನ ವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನೊಬ್ಬ ಒತ್ತಾಯಿಸಿದರೆ ಸಾಲದು, ಕ್ರೀಡಾಪಟುಗಳು, ಪೋಷಕರು ಎಲ್ಲರೂ ಒಗ್ಗೂಡಿ ಕ್ರೀಡಾ ವಿವಿ ಸ್ಥಾಪಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಪ್ರತಿಭಟನಾ ಮನೋಭಾವ, ಹಕ್ಕಿಗಾಗಿ ಒತ್ತಾ ಯಿಸುವ ಗುಣ ಮರೆಯಾಗಿದೆ. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ನಮ್ಮ ವರೇ ಆಗಿದ್ದು, ವಿವಿ ಸ್ಥಾಪಿಸುವಂತೆ ಮನವಿ ಮಾಡಬೇಕು ಎಂದು ತಿಳಿಸಿದರು.
ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ವಿ.ಆರ್.ಬೀಡು, ಮೈವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪಿ.ಕೃಷ್ಣಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಕೆ.ಸುರೇಶ್, ಎಂಡಿಎಎ ಅಧ್ಯಕ್ಷ ಎಸ್.ಸೋಮಶೇಖರ್, ಉಪಾ ಧ್ಯಕ್ಷ ಮಹೇಶ್ ಬಲ್ಲಾಳ್, ಕಾರ್ಯದರ್ಶಿ ಬಿ.ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.