ಮನೆ ಮನೆಯಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಆಚರಣೆ
ಮೈಸೂರು

ಮನೆ ಮನೆಯಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಆಚರಣೆ

March 21, 2020

ಮೈಸೂರು, ಮಾ.20- ರಾಷ್ಟ್ರೀಯ ಪೋಷಣಾ ಅಭಿ ಯಾನ ಎಂಬುದು ಕಾರ್ಯಕ್ರಮ ವಲ್ಲ, ಅದೊಂದು ಆಂದೋಲನ ಮತ್ತು ಸಹಭಾಗಿತ್ವವಾಗಿದೆ. ಭಾರತ ವನ್ನು ಅಪೌಷ್ಟಿಕತೆಯಿಂದ ಮುಕ್ತ ಗೊಳಿಸುವುದು ಇದರ ಉದ್ದೇಶ ವಾಗಿದ್ದು, ದೇಶದೆಲ್ಲೆಡೆ ರಾಷ್ಟ್ರೀಯ ಪೋಷಣಾ ಅಭಿಯಾನವನ್ನು ಆಚರಿಸಲಾಗುವುದು.

ಗರ್ಭಿಣಿಯರು, ಮಕ್ಕಳು, ಬಾಲಕಿ ಯರು ಗಮನದಲ್ಲಿಡಬೇಕಾದ ಅಂಶ: ದೇಹ ದಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಮಗು ಹುಟ್ಟುವಾಗ ತೂಕ ಕಡಿಮೆಯಿ ರುವ ಶಿಶುಗಳ ಸಂಖ್ಯೆ ಇಳಿಕೆ ಇವುಗಳನ್ನು ಸಾಧಿಸಲು ವಿವಿಧ ಇಲಾಖೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಷ್ಟ್ರೀಯ ಪೋಷಣಾ ಅಭಿಯಾನದ ಮೂಲಕ ‘ನಿಮ್ಮ ಪೋಷಣೆ ನಮ್ಮ ಕರ್ತವ್ಯ’ ಧ್ಯೇಯ ವಾಕ್ಯ ದೊಂದಿಗೆ ಗರ್ಭಿಣಿ ಮಹಿಳೆಯರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ.

ಗರ್ಭಿಣಿಯರು ಗಮನದಲ್ಲಿಡಬೇಕಾದ ಅಂಶ: ಹುಟ್ಟುವ ಮಗು ಆರೋಗ್ಯಕರ ವಾಗಿರಲು ಗರ್ಭಿಣಿಯರು ಪೋಷಕಾಂಶ ಯುಕ್ತÀ ಆಹಾರವನ್ನು, ಪುಷ್ಟಿಗೊಳಿಸಿದ ಹಾಲು, ಎಣ್ಣೆ, ಅಯೋಡಿನ್‍ಯುಕ್ತ ಉಪ್ಪು ಹೆಚ್ಚಾಗಿ ಸೇವಿಸಬೇಕು. ನಾಲ್ಕು ತಿಂಗಳಿ ನಿಂದ 180 ದಿನಗಳವರೆಗೆ ಪ್ರತಿದಿನ ಐಎಫ್‍ಎ ಒಂದು ಕೆಂಪು ಮಾತ್ರೆಯನ್ನು, ಕ್ಯಾಲ್ಸಿಯಂ ನಿಗದಿತ ಡೋಜ್ó ತೆಗೆದು ಕೊಳ್ಳಬೇಕು. ಎರಡನೇ ತ್ರೈಮಾಸಿಕದಲ್ಲಿ ಒಂದು ಎಲ್ಮಿಂಡನೋಲ್ ಮಾತ್ರೆಯನ್ನು ತೆಗೆದುಕೊಳ್ಳುವುದು, ಹೆರಿಗೆಯ ಮುನ್ನ ಕನಿಷ್ಠ 4ಎ.ಎನ್.ಸಿ ಚೆಕ್ ಅಪ್ ಅನ್ನು ವೈದ್ಯರಿಂದ ಪಡೆಯುವುದು. ಹತ್ತಿರದ ಆಸ್ಪತ್ರೆಗಳಲ್ಲಿ ಅಥವಾ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಬೇಕು. ವೈಯಕ್ತಿಕ ಸ್ವಚ್ಛತೆ ಕಡೆ ಗಮನ ನೀಡು ವುದು ಒಳ್ಳೆಯದು.

ಹಾಲುಣಿಸುವ ತಾಯಂದಿರ ಗಮನಕ್ಕೆ: ನವಜಾತ ಶಿಶು ಹುಟ್ಟಿದ ಗಂಟೆಯೊಳಗೆ ಕುಡಿಸಲು ಆರಂಭಿಸಬೇಕು ಹಾಗೂ ತಾಯಿಯ ಮೊದಲ ಗಾಢವಾದ ಹಳದಿ ಬಣ್ಣದ ಹಾಲು ಮಗುವಿನ ಮೊದಲ ಲಸಿಕೆ ಯಾದ್ದರಿಂದ ನಿಮ್ಮ ಶಿಶುವಿಗೆ ಹಳದಿ ಬಣ್ಣದ ಹಾಲುಣಿಸಿ. ಮಗುವಿಗೆ ಆರಂ ಭದ 6 ತಿಂಗಳು ನಿಮ್ಮ ಹಾಲನ್ನೇ ಕುಡಿಸಿ. ಬೇರೆ ಏನನ್ನೂ ಕೊಡಬಾರದು. ನಿಮ್ಮ ಮತ್ತು ಮಗುವಿನ ವೈಯಕ್ತಿಕ ಸ್ವಚ್ಛತೆ ಕಡೆ ಗಮನವಿರುವುದು ಅವಶ್ಯಕ. ಅಡುಗೆ ಮತ್ತು ಊಟ ಮಾಡುವ ಮೊದಲು ಸಾಬೂನಿನಿಂದ ಕೈಗ ಳನ್ನು ತೊಳೆಯುವುದು.

ಮಕ್ಕಳಿಗೆ ಆರು ತಿಂಗಳು ಪೂರ್ಣವಾದ ಬಳಿಕ ಹಾಲಿನ ಜೊತೆ ಚೆನ್ನಾಗಿ ಅರೆದ ಮತ್ತು ದಪ್ಪನೆಯ ಮೇಲಾಹಾರವನ್ನು ನೀಡಲು ಆರಂಭಿಸಬೇಕು. ಐಎಫ್‍ಐ ಸಿರಪ್ ವಾರದಲ್ಲಿ ಎರಡು ಸಲ, ಹೊಟ್ಟೆಯಲ್ಲಿನ ಜಂತು ಹುಳು ನಿವಾರಣೆಗೆ ಎಲ್ಬೆಂಡಜೋಲ್‍ನ ಒಂದು ಮಾತ್ರೆ ವರ್ಷದಲ್ಲಿ ಎರಡು ಬಾರಿ ಹಾಗೂ ಕಾಲ ಕಾಲಕ್ಕೆ ರೋಗ ನಿರೋ ಧಕ ಲಸಿಕೆಯನ್ನು ನೀಡುವುದು. ಇದರ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳ ವಣಿಗೆಯ ಕಾಲದ ನಿಗಾವಣೆ ಅವಶ್ಯಕ.

ಬಾಲಕಿಯರ ಗಮನಕ್ಕೆ: ಮುಟ್ಟಿನ ವೇಳೆ ನಿಯಮಿತ ಸ್ವಚ್ಛತೆ, ಮುಚ್ಚಿಟ್ಟ ಶುದ್ಧ ನೀರು ಕುಡಿಯುವುದು, ಐರನ್ ವಿಟಮಿನ್ ಯುಕ್ತ ನಾರಿನ ಅಂಶವಿರುವ ತರಕಾರಿ ಗಳನ್ನು ತಿನ್ನುವುದು. ಐಎಫ್‍ಎ ನ ನೀಲಿ ಬಣ್ಣದ ಮಾತ್ರೆಯನ್ನು ವಾರಕ್ಕೆ ಒಂದು ಬಾರಿ ನುಂಗುವುದು. ಒಟ್ಟಿನಲ್ಲಿ ದೇಶದೆ ಲ್ಲೆಡೆ ಪೌಷ್ಟಿಕಾಂಶವನ್ನು ತುಂಬಿಸಿ ಅಪೌಷ್ಠಿ ಕತೆಯನ್ನು ಅಳಿಸಿಹಾಕುವುದು ರಾಷ್ಟ್ರೀಯ ಅಭಿಯಾನದ ಧ್ಯೇಯವಾಗಿದ್ದು, ಇದಕ್ಕೆ ಸಾರ್ವಜನಿಕರು, ವಿವಿಧ ಇಲಾಖೆಯವರ ಸಹಕಾರ ಅವಶ್ಯಕ.

Translate »