ಭಯ ಬೇಡ… ಇದು ಅಣಕು ಪ್ರದರ್ಶನ
ಮೈಸೂರು, ಜ.20(ಆರ್‍ಕೆ)- ಭಯೋ ತ್ಪಾದಕರು ದಾಳಿ ನಡೆಸಿದಾಗ ಬಗ್ಗು ಬಡಿಯುವ ಕಾರ್ಯಾಚರಣೆ ಅಣಕು ಪ್ರದರ್ಶನ ಇಂದು ರಾತ್ರಿ ಮೈಸೂರಿನ ಅರಮನೆಯಲ್ಲಿ ನಡೆಯಿತು.
ಸಂಜೆ 6 ಗಂಟೆಗೆ ಅರಮನೆ ಮಂಡಳಿ ಕಚೇರಿಯಿಂದ ಮೈಸೂರು ನಗರ ಪೊಲೀಸ್ ಕಂಟ್ರೋಲ್ ರೂಂಗೆ ಹಾಗೂ ಅರಮನೆ ಭದ್ರತಾ ಕಚೇರಿಗೆ ಭಯೋತ್ಪಾ ದಕರು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಬರುತ್ತದೆ. ತಕ್ಷಣ ಕಾರ್ಯಪ್ರವೃತ್ತರಾದ ಡಿಸಿಪಿ ಎಂ.ಮುತ್ತುರಾಜ್, ಬೆಂಗಳೂರಿನ ಗರುಡ ಕಮಾಂಡೋ ಪಡೆ ಮತ್ತು ಚೆನ್ನೈನ ಎನ್‍ಎಸ್‍ಜಿ ದಕ್ಷಿಣ ವಲಯ ಭದ್ರತಾ ಪಡೆ ಕಚೇರಿಗೆ ಸಂದೇಶ ರವಾನಿಸಿ ಅರಮನೆ ಆವ ರಣಕ್ಕೆ ಸಿಬ್ಬಂದಿಗಳೊಂದಿಗೆ ಧಾವಿಸುತ್ತಾರೆ.
ಮೊದಲು ಅರಮನೆಯ ಎಲ್ಲಾ ದ್ವಾರ ಗಳನ್ನು ಬಂದ್ ಮಾಡಿ ಸಿವಿಲ್ ಪೊಲೀಸರ ಸರ್ಪಗಾವಲು ಹಾಕುತ್ತಾರೆ. ನಂತರ ಧ್ವನಿ ವರ್ಧಕದ ಮೂಲಕ ಪ್ರಕಟಣೆ ನೀಡಿ ಯಾರೂ ಅತ್ತಿತ್ತ ಕದಲಬಾರದೆಂಬ ಮಾಹಿತಿ ನೀಡುವ ಪೊಲೀಸ್ ಅಧಿಕಾರಿಗಳು, ಮೈಸೂರಿ ನಲ್ಲಿರುವ ತರಬೇತು ಪಡೆದ ಕಮಾಂಡೋ ಪಡೆಯ 200ಕ್ಕೂ ಹೆಚ್ಚು ಸಿಬ್ಬಂದಿ ಹೆಲ್ಮೆಟ್, ರಕ್ಷಾ ಕವಚ ಹಾಗೂ ಶಸ್ತ್ರಾಸ್ತ್ರ ಸಜ್ಜಿತರಾಗಿ ಮುನ್ನುಗ್ಗುತ್ತಾರೆ. ಅರಮನೆ ತಾರಸಿ, ಗೋಪುರಗಳು, ನೆಲಮಹಡಿಯ ಎಲ್ಲಾ ಕಾರ್ನರ್‍ಗಳು, ಒಳ ಹಾಗೂ ಹೊರ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ಸುತ್ತು ವರಿದು ನಿಲ್ಲುತ್ತಾರೆ. ಭಯೋತ್ಪಾದಕರು ಅಡಗಿರುವ ಸ್ಥಳಗಳನ್ನು ಸೂಕ್ಷ್ಮವಾಗಿ ತಿಳಿದುಕೊಂಡು ವೈಯರ್ ಲೆಸ್ ಮೂಲಕ ಅರಮನೆ ಭದ್ರತಾ ಕಚೇರಿ, ಕಂಟ್ರೋಲ್ ರೂಂ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಕ್ಷಣಕ್ಷಣದ ಮಾಹಿತಿ ರವಾನಿಸುತ್ತಿರುತ್ತಾರೆ.
ಅದೇ ವೇಳೆ ದೇವರಾಜ ಉಪವಿಭಾಗದ ಎಸಿಪಿ ಶಶಿಧರ್ ನೇತೃತ್ವದ ಮತ್ತೊಂದು ತಂಡವು ಕಾಡಾ ಕಚೇರಿ ಎದುರಿನ ದ್ವಾರದ ಬಳಿ ಕಾರ್ಯಾಚರಣೆ ನಡೆಸಿ ಸಿಬ್ಬಂದಿಗೆ ಕಾರ್ಯತಂತ್ರದ ಬಗ್ಗೆ ಸಲಹೆ-ಸೂಚನೆ ನೀಡುತ್ತಿದ್ದಂತೆಯೇ ಅರಮನೆಯಲ್ಲಿ ಅಡಗಿರುವ ಉಗ್ರರ ದುಷ್ಕøತ್ಯಗಳ ಬಗ್ಗೆ ಮಾಹಿತಿ ಬರುತ್ತದೆ.
ರಾತ್ರಿ ಸುಮಾರು 7.45 ಗಂಟೆ ವೇಳೆಗೆ ಎನ್‍ಎಸ್‍ಜಿಯ 4 ತಂಡಗಳು ಬಂದು ಅರಮನೆ ಪೂರ್ವ ದ್ವಾರದ ಮೂಲಕ ಪ್ರತಿದಾಳಿ ನಡೆಸಿ ಉಗ್ರರೊಂದಿಗೆ ಸುಮಾರು 45 ನಿಮಿಷ ಸೆಣಸಾಟ ನಡೆಸಿ ಗರುಡ ಮತ್ತು ಚಾಮುಂಡಿ ಕಮಾಂಡೋ ಪಡೆಯ ಸಿಬ್ಬಂದಿ ಸಹಕಾರದೊಂದಿಗೆ ಬಗ್ಗು ಬಡಿದು ದುಷ್ಕರ್ಮಿಗಳನ್ನು ವಶಕ್ಕೆ ಪಡೆದು ಯಾವುದೇ ದುಷ್ಕøತ್ಯ ನಡೆಯದಂತೆ ತಡೆದು ಅರಮನೆ ಯನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತಾರೆ.
ಅಗ್ನಿಶಾಮಕ ಠಾಣೆ ವಾಹನಗಳು, ಆಂಬುಲೆನ್ಸ್‍ಗಳು, ವಿಪತ್ತು ನಿರ್ವಹಣಾ ವಾಹನ, ಪಾಲಿಕೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಹನ, ಪೊಲೀಸ್ ಇಲಾಖೆ ವಾಹನಗಳು ಈ ಕಾರ್ಯಾಚರಣೆಯ ಅಣಕು ಪ್ರದರ್ಶನಕ್ಕೆ ಸಾಥ್ ನೀಡಿದವು.
ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲ ಕೃಷ್ಣ, ಡಿಸಿಪಿ ಎಂ.ಮುತ್ತುರಾಜ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಗೆ 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಳ್ಳಲಾ ಗಿತ್ತು. ಯಶಸ್ವಿ ಅಣಕು ಪ್ರದರ್ಶನ ತಡರಾತ್ರಿ ವರೆಗೂ ನಡೆಯಿತು. ಬಳಿಕ ಎನ್‍ಎಸ್‍ಜಿ, ಕಮಾಂಡೋ ಪಡೆ ಸ್ವಸ್ಥಾನಕ್ಕೆ ಹಿಂದಿರುಗಿದವು.
ಈ ಅಣಕು ಪ್ರದರ್ಶನದ ವೇಳೆ ಅರಮನೆ ಸುತ್ತ ಪೊಲೀಸರು, ವಾಹನಗಳ ಕಾರ್ಯಾಚರಣೆ ಕಂಡು ಸಾರ್ವಜನಿಕರಿಗೆ ಆತಂಕ, ಆಶ್ಚರ್ಯ. ಈ ವೇಳೆ ಅರಮನೆಗೆ ಪ್ರವೇಶ ನಿಷೇಧಿಸಲಾಗಿತ್ತು.
ಅಣಕು ಪ್ರದರ್ಶನ ಕಾರ್ಯಾಚರಣೆ ಯಲ್ಲಿ ಭಾಗವಹಿಸಿ ಸಹಕಾರ ನೀಡಿದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲ ಕೃಷ್ಣ, ಕೃತಜ್ಞತೆ ಸಲ್ಲಿಸಿ ಬೀಳ್ಕೊಟ್ಟರು. ನಿನ್ನೆ (ಜ.19) ಇನ್‍ಫೋಸಿಸ್ ಮತ್ತು ವಿಪ್ರೋ ದಲ್ಲಿ ಭಯೋತ್ಪಾದಕರ ದಾಳಿ ನಿಗ್ರಹ ಕಾರ್ಯಾಚರಣೆಯನ್ನು ಹೆಲಿಕಾಪ್ಟರ್ ಬಳಸಿ ಯಶಸ್ವಿಗೊಳಿಸಲಾಗಿತ್ತು.ಅದರ ಬೆನ್ನಲ್ಲೇ ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿರುವುದು ಕಾಕತಾಳೀಯ.