ನಿಖಿಲ್ ಕುಮಾರಸ್ವಾಮಿ ಪರ ಮುಸ್ಲಿಂ ಮುಖಂಡರ ಸಭೆ
ಮಂಡ್ಯ

ನಿಖಿಲ್ ಕುಮಾರಸ್ವಾಮಿ ಪರ ಮುಸ್ಲಿಂ ಮುಖಂಡರ ಸಭೆ

April 15, 2019

ಮಂಡ್ಯ: ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಮಂಡ್ಯದ ಮುಸ್ಲಿಂ ಮುಖಂಡರು ಸಭೆ ನಡೆಸಿದರು.

ಜಿಲ್ಲಾ ಮಸೀದಿ ಸಮಿತಿಗಳ ಸಭೆಯಲ್ಲಿ ಅಲ್ಪ ಸಂಖ್ಯಾತರ ಸಮುದಾಯದ ವತಿ ಯಿಂದ ನಗರದ ಕೆ.ವಿ.ಶಂಕರಗೌಡ ಶತಮಾ ನೋತ್ಸವ ಭವನದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಾಫ್ರುಲ್ಲಾಖಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿಖಿಲ್ ಬೆಂಬಲಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮಾತನಾಡಿ, ದೇಶದಲ್ಲಿ ಮೋದಿ 56 ಇಂಚಿನ ಎದೆಯನ್ನು ತೋರಿ ಸುತ್ತಾರೆ. ಆದರೆ ಅದರಲ್ಲಿ ದೇಶದ ಎಲ್ಲಾ ವರ್ಗದ ಜನರಿಗೆ ಒಳಿತು ಮಾಡುವ ಹೃದಯ ವಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೊಡ್ಡ ಎದೆ ಇಟ್ಟುಕೊಂಡಿದ್ದರೆ, ರಾಜಕಾರಣ ಬಿಟ್ಟು ಕುಸ್ತಿ ಆಡಲು ಹೋಗಲಿ. 70 ವರ್ಷದಲ್ಲಿ ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ಎಂದರೆ ಮೋದಿಯವರಾಗಿದ್ದಾರೆ. ನಮ್ಮ ಪರವಾಗಿ ಯಾರು ಬೆಂಬಲವಾಗಿ ನಿಂತಿದ್ದಾರೆ ಎಂಬುದನ್ನು ತಿಳಿದುಕೊಂಡು ಮತ ನೀಡಬೇಕು ಎಂದರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿ ವೃದ್ಧಿ ನಿಗಮದ ಅಧ್ಯಕ್ಷ ಜಾಫ್ರುಲ್ಲಾಖಾನ್ ಮಾತನಾಡಿ, ಬುರ್ಖಾ, ತಲಾಖ್ ಹಾಗೂ ಆಹಾರ ಪದ್ಧತಿ ಕುರಿತ ಸ್ವಾತಂತ್ರವನ್ನು ಬಿಜೆಪಿ ಕಿತ್ತುಕೊಳ್ಳುತ್ತಿದೆ. ಹೀಗಾಗಿ ಜಾತ್ಯಾ ತೀತವಾಗಿ ರಾಜ್ಯದಲ್ಲಿ ಅಧಿಕಾರ ಮಾಡುತ್ತಿರುವ ಜೆಡಿಎಸ್ ಬೆಂಬಲಿಸಬೇಕಿದೆ. ಸುಮಲತಾ ಪಕ್ಷೇತರ ಅಭ್ಯರ್ಥಿಯಲ್ಲ ಅವರು ನೇರವಾಗಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದರು.

ಶಾಸಕಿ ಅನಿತಾ ಕುಮಾರಸ್ವಾಮಿ ಮಾತ ನಾಡಿ, ದೇವೇಗೌಡರು ಹಾಗೂ ಕುಮಾರ ಸ್ವಾಮಿ ಅವರು ಬಡವರ, ಎಲ್ಲಾ ವರ್ಗದ ಜನರ ಪರವಾಗಿ ಕೆಲಸ ಮಾಡಿದ್ದಾರೆ. ಮುಂದೆ ನಿಮ್ಮ ಸೇವೆ ಮಾಡಲು ನಮ್ಮ ಕುಟುಂಬ ಸಿದ್ಧವಿದ್ದು ನಮ್ಮ ಪುತ್ರ ನಿಖಿಲ್ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದರು.

ಅಸಾದುಲ್ಲಾಖಾನ್ ಪ್ರಚಾರ: ಸಭೆ ಬಳಿಕ ಕಾಂಗ್ರೆಸ್‍ನ ಮುಸ್ಲಿಂ ಮುಖಂಡ, ಮೂಡಾ ಮಾಜಿ ಅಧ್ಯಕ್ಷ ಅಸಾದುಲ್ಲಾ ಖಾನ್ ಅವರು ತಮ್ಮ ಬೆಂಬಲಿಗರೊಟ್ಟಿಗೆ ನಗರದ ಗಾಂಧಿನಗರ,ಗುತ್ತಲು, ವಿವೇಕಾ ನಂದ ನಗರ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಡಾವಣೆಗಳಲ್ಲಿ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಬಿಬಿಎಂ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷಾ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಜೆಡಿಎಸ್ ಅಲ್ಪ ಸಂಖ್ಯಾತರ ರಾಜ್ಯ ಘಟಕ ಉಪಾಧ್ಯಕ್ಷ ರಫೀವುಲ್ಲಾ, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮೊಹಿದ್ದೀನ್ ಸಾಬ್, ಸಮುದಾಯದ ಮುಖಂಡ ರಾದ ಉಜ್ವಾನ್ ಮುಫ್ತಿ ಸಾಬ್, ಜಬೀವುಲ್ಲಾ ಖಾನ್ ಮತ್ತಿತರರು ಇದ್ದರು.

Translate »