ಮಾಜಿ ಸ್ಪೀಕರ್ ಕೃಷ್ಣರ ಸಹಕಾರ ಕೋರಿದ ನಿಖಿಲ್ ಕುಮಾರಸ್ವಾಮಿ
ಮೈಸೂರು

ಮಾಜಿ ಸ್ಪೀಕರ್ ಕೃಷ್ಣರ ಸಹಕಾರ ಕೋರಿದ ನಿಖಿಲ್ ಕುಮಾರಸ್ವಾಮಿ

March 17, 2019

ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ತಾಯಿ ಅನಿತಾ ಕುಮಾರಸ್ವಾಮಿ ಶನಿವಾರ ಮೈಸೂರಿನ ಕುವೆಂಪುನಗರ ದಲ್ಲಿರುವ ಮಾಜಿ ಸ್ಪೀಕರ್ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ, ಚುನಾವಣೆಗೆ ಸಹಕಾರ ಕೋರಿದರು. ಇದೇ ವೇಳೆ ತಮ್ಮ ಆಶೀರ್ವಾದ ಇರುವುದಾಗಿ ಕೃಷ್ಣ ಅವರು ನಿಖಿಲ್‍ಗೆ ಅಭಯ ನೀಡಿದರು.

ನಂತರ ಮಾಧ್ಯಮದವರೊಂದಿಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನಾವು ಹೋದ ಕಡೆಯೆಲ್ಲಾ ಮಂಡ್ಯ ಜನತೆ ಪ್ರೀತಿ, ವಿಶ್ವಾಸ ತೋರಿಸುತ್ತಿದ್ದಾರೆ. ನನ್ನ ಮೇಲೆ ನಂಬಿಕೆಯಿಟ್ಟು ಆಶೀರ್ವದಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ನಿಖಿಲ್ ಹಾಗೂ ನಾನು ಒಳ್ಳೆ ಸ್ನೇಹಿ ತರು. ಆದರೆ ಸ್ನೇಹ ಬೇರೆ, ರಾಜಕೀಯವೇ ಬೇರೆ ಎಂಬ ಅಂಬರೀಷ್ ಅವರ ಪುತ್ರ ಅಭಿಷೇಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್, ನಾನು ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಇದನ್ನು ಗುರುತಿಸಿ ಟಿಕೆಟ್ ನೀಡಿದ್ದಾರೆ. ಹಾಗಾಗಿ ಅಭಿಷೇಕ್ ಹೇಳುತ್ತಿರುವುದು ಸತ್ಯ. ರಾಜಕೀಯವೇ ಬೇರೆ, ಸ್ನೇಹವೇ ಬೇರೆ. ಸಂಬಂಧಗಳನ್ನು ಮುರಿಯಲು ನಾನು ಬಿಡುವುದಿಲ್ಲ, ಉಳಿಸಿಕೊಳ್ಳುತ್ತೇನೆ. ನಾವಿ ಬ್ಬರೂ ಜೊತೆಗಿದ್ದೇವೆ. ಮುಂದೆಯೂ ಅಣ್ಣ- ತಮ್ಮಂದಿರಂತೆ ಇರುತ್ತೇವೆ ಎಂದರು.

ಸಚಿವ ಸಾರಾ ಮಹೇಶ್ ಹೇಳಿಕೆ ಕುರಿತು ನಾನು ಪ್ರತಿಕ್ರಿಯಿಸಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದು ನಮಗೆ ಗೊತ್ತಿಲ್ಲ. ಇದನ್ನು ಅವರ ಬಳಿಯೇ ಕೇಳ ಬೇಕು. ನಾನು ಮೈತ್ರಿ ಅಭ್ಯರ್ಥಿಯಾಗಿ ಕಣ ದಲ್ಲಿದ್ದೇನೆ. ಈಗಾಗಲೇ ನಾನು ಎಲ್ಲ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದು ಕೊಂಡಿದ್ದೇನೆ. ಎಲ್ಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಅಣ್ಣ-ತಮ್ಮಂದಿ ರಂತೆ ಕೆಲಸ ಮಾಡುತ್ತಿದ್ದೇವೆ ಎಂದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ, 2 ಕ್ಷೇತ್ರಗಳಲ್ಲಿ ಅಂತಿಮವಾಗಿ ಯಾವ ಕ್ಷೇತ್ರದಿಂದ ಕಣಕ್ಕಿ ಳಿಯುತ್ತಾರೆ ಎಂಬುದು ಇನ್ನು 2 ದಿನಗಳಲ್ಲಿ ನಿರ್ಧಾರವಾಗಲಿದೆ ಎಂದರು. ಇನ್ನು 8 ಜನ ಶಾಸಕರಿದ್ದರೂ ಜೆಡಿಎಸ್‍ಗೆ ಭಯ ವೇಕೆ? ಎಂಬ ಸುಮಲತಾ ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ ಎಂದರು.
ಶಾಸಕಿ ಅನಿತಾ ಕುಮಾರಸ್ವಾಮಿ ಮಾತ ನಾಡಿ, ಹಿಂದಿನಿಂದಲೂ ಪಕ್ಷದ ವರಿಷ್ಠ ರಾದ ಹೆಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಮಂಡ್ಯದ ಜನರಲ್ಲಿ ಪ್ರೀತಿ, ವಿಶ್ವಾಸ, ಉತ್ತಮ ಬಾಂಧವ್ಯವಿದೆ. ಎಂತಹ ಕಷ್ಟ ಕಾಲದಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇಂದು ಹಿರಿಯ ಮುಖಂಡರ ಆಶೀರ್ವಾದ ಪಡೆಯಲು ಬಂದಿದ್ದೇವೆ ಎಂದರು.

ಮೈತ್ರಿ ಸರ್ಕಾರ ಆಗಿರುವುದರಿಂದ ಕಾಂಗ್ರೆಸ್ 20, ಜೆಡಿಎಸ್‍ಗೆ 8 ಸ್ಥಾನ ಸಿಕ್ಕಿದೆ. ಎಲ್ಲೆಡೆ ಒಟ್ಟಾಗಿ ಸೇರಿ ಮೈತ್ರಿ ಅಭ್ಯರ್ಥಿ ಗಳನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತಿ ದ್ದೇವೆ. ಮಂಡ್ಯದಲ್ಲಿ ಕಾಂಗ್ರೆಸ್‍ನವರು ಸಹಕಾರ ನೀಡುತ್ತಿದ್ದು, ಬೇರೆಡೆ ನಮ್ಮ ಕಾರ್ಯಕರ್ತರು ಕಾಂಗ್ರೆಸ್‍ಗೆ ಸಹಕಾರ ನೀಡುತ್ತಿದ್ದಾರೆ. ನಮಗೆ ಚುನಾವಣೆ ಬಗ್ಗೆ ಯಾವ ಭಯವೂ ಇಲ್ಲ ಎಂದರು.

ಮಂಡ್ಯ ಸಂಸದ ಶಿವರಾಮೇಗೌಡ ಮಾತನಾಡಿ, ನಾನು ರಾಕ್‍ಲೈನ್ ವೆಂಕಟೇಶ್ ಅವರನ್ನು ಭೇಟಿ ಮಾಡಿದ್ದು ನಿಜ. ಸುಮ ಲತಾ ಹಿಂದೆ ಸರಿಯುವಂತೆ ಮನವಿ ಮಾಡಿದ್ದು ನಿಜ. ನಿನ್ನೆ ಹೋಟೆಲ್‍ಗೆ ಹೋದಾಗ ರಾಕ್‍ಲೈನ್ ವೆಂಕಟೇಶ್, ಅಂಬರೀಶ್ ಅವರ ಸಹೋದರನ ಮಗ ಮಧು ಹಾಗೂ ಅಶೋಕ್ ಮೂವರೂ ಇದ್ದರು. ಈ ವೇಳೆ ನಾನು ಚುನಾವಣೆ ಎದುರಿಸುವುದು ಸುಲಭವಲ್ಲ. ದಯವಿಟ್ಟು ವಿತ್ ಡ್ರಾ ಮಾಡಿಸಿ ಎಂದು ಮನವಿ ಮಾಡಿದ್ದೆ. ಮುಂದೆ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆಂದು ನೋಡೋಣ ಎಂದರು. ಸುಮಲತಾ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ, ಸುಮಲತಾ ಅವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ನಮ್ಮ ಅಭ್ಯಂ ತರವಿಲ್ಲ. ಆದರೆ, ಪಕ್ಷೇತರ ಅಭ್ಯರ್ಥಿ ಯಾಗಿ ಅಸ್ತಿತ್ವ ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಈಗೇನೋ ಸ್ಪರ್ಧೆ ಮಾಡ ಬಹುದು. ಆದರೆ ಮುಂದಿನ ಚುನಾ ವಣೆಯಲ್ಲಿ ಏನು ಮಾಡುತ್ತಾರೆ. ಸಾಮಾ ಜಿಕ ಜಾಲತಾಣ, ಫೇಸ್‍ಬುಕ್‍ನಲ್ಲಿ ತಿಳಿಸುವವರೆಲ್ಲಾ ಬಿಜೆಪಿ ಮುಖಂಡರೇ ಹೊರತು, ಜೆಡಿಎಸ್, ಕಾಂಗ್ರೆಸ್ ಮುಖಂ ಡರಲ್ಲ ಎಂದು ಹೇಳಿದರು.

ಮಾಜಿ ಸ್ಪೀಕರ್ ಕೃಷ್ಣ ಮಾತನಾಡಿ, ಇಷ್ಟು ಬೇಗ ರಾಜಕೀಯಕ್ಕೆ ಯಾಕಪ್ಪ ಬಂದೆ. ಇನ್ನೊಂದಷ್ಟು ದಿನ ಸಿನಿಮಾ ಕ್ಷೇತ್ರ ದಲ್ಲಿ ಇದ್ದಿದ್ದರೆ ಬೆಳೆದುಕೊಳ್ಳುತ್ತಿದ್ದೆ. ರಾಜ ಕೀಯಕ್ಕೆ ಬರಲು ನಿಮಗೆ ಇನ್ನು ವಯ ಸ್ಸಿತ್ತು, ಮೊದಲು ವಿಧಾನಸಭೆಗೆ, ನಂತರ ಲೋಕಸಭಾ ಕ್ಷೇತ್ರಕ್ಕೆ ಬರಬಹುದಿತ್ತು ಎಂದು ಹೇಳಿದರು.

ತಕ್ಷಣವೇ ಅನಿತಾ ಕುಮಾರಸ್ವಾಮಿ ಮಧ್ಯ ಪ್ರವೇಶಿಸಿ, ಇದು ಎಲ್ಲವೂ ವಿಧಿಯ ನಿಯಮ ಅಷ್ಟೇ. ಅವನು ಬರಬೇಕೆಂದು ಕಾರ್ಯಕರ್ತರು ಒತ್ತಾಯ ಮಾಡಿದರು. ಹಾಗಾಗಿ ಮಂಡ್ಯ ಕ್ಷೇತ್ರದಿಂದ ಲೋಕ ಸಭೆಗೆ ಸ್ಪರ್ಧಿಸಿದ್ದು, ಇಂದು ನಿಮ್ಮ ಆಶೀ ರ್ವಾದ ಪಡೆಯಲು ಬಂದಿದ್ದಾನೆ ಎಂದರು.

Translate »