ಲೋಕಸಭೆ ಚುನಾವಣೆಗೆ 18 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಮೈಸೂರು

ಲೋಕಸಭೆ ಚುನಾವಣೆಗೆ 18 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

March 17, 2019

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಲೋಕಸಭೆ ಚುನಾ ವಣೆಗೆ ತನ್ನ 18 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೂರನೇ ಪಟ್ಟಿಯಲ್ಲಿ ಮೇಘಾ ಲಯದ ತುರಾ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಮುಖುಲ್ ಸಂಗ್ಮಾ, ಅಸ್ಸಾಂನಲ್ಲಿ ಐವರು, ಮೇಘಾಲಯದಲ್ಲಿ ಇಬ್ಬರು, ಉತ್ತರ ಪ್ರದೇಶದಲ್ಲಿ ಒಬ್ಬರು, ಸಿಕ್ಕಿಂ ಮತ್ತು ನಾಗಾಲ್ಯಾಂಡ್‍ನಲ್ಲಿ ತಲಾ ಒಬ್ಬರು, ತೆಲಂಗಾಣದಲ್ಲಿ ಎಂಟು ಮಂದಿ ಅಭ್ಯರ್ಥಿಗಳಿದ್ದಾರೆ.

ಅಸ್ಸಾಂನ ಸಿಲ್ಚಾರ್ ಲೋಕಸಭೆ ಕ್ಷೇತ್ರದಿಂದ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಸುಷ್ಮಿತಾ ದೇವ್, ಕಲಿಯಾಬೊರ್ ಕ್ಷೇತ್ರದಿಂದ ಗೌರವ್ ಗೊಗೊಯ್ ಸ್ಪರ್ಧಿಸಲಿದ್ದಾರೆ. ಇವರಿಬ್ಬರೂ ಹಾಲಿ ಸಂಸದರಾಗಿದ್ದಾರೆ, ಶಿಲ್ಲಾಂಗ್‍ನಿಂದ ಮಾಜಿ ಕೇಂದ್ರ ಸಚಿವ ಸಂಸದ ವಿನ್ಸೆಟ್ ಪಾಲಾ, ದಿಬ್ರುಗರ್‍ನಿಂದ ಪಬನ್ ಸಿಂಗ್ ಘಟೊವರ್ ಅವರು ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶ ಮೀಸಲಾತಿ ಕ್ಷೇತ್ರದಿಂದ ಬಾರಾಬಂಕಿಯಿಂದ ದಲಿತ ಮುಖಂಡ ಪಿ.ಎಲ್.ಪುನಿಯಾ ಅವರ ಪುತ್ರ ತನುಜ ಪುನಿಯಾ ಸ್ಪರ್ಧೆಗಿಳಿದಿದ್ದಾರೆ. ಕಾಂಗ್ರೆಸ್ ಇಲ್ಲಿಯವರೆಗೆ ಲೋಕಸಭೆ ಚುನಾವಣೆಗೆ 54 ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿz

Translate »