ನಾಳೆ ಮೈವಿವಿ 99ನೇ ಘಟಿಕೋತ್ಸವ
ಮೈಸೂರು

ನಾಳೆ ಮೈವಿವಿ 99ನೇ ಘಟಿಕೋತ್ಸವ

March 16, 2019

ಮೈಸೂರು: ಮೈಸೂರು ವಿಶ್ವವಿದ್ಯಾಲಯದ 99ನೇ ಘಟಿಕೋತ್ಸವ ಮಾ.17ರಂದು ಬೆಳಿಗ್ಗೆ 11ಕ್ಕೆ ಕ್ರಾಫರ್ಡ್ ಭವನದಲ್ಲಿ ನಡೆಯಲಿದ್ದು, 28163 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಹಾಗೂ ಅಮೃತಾನಂದಮಯಿ ಮಠದ ಅಧ್ಯಕ್ಷೆ ಮಾತಾ ಅಮೃತಾನಂದಮಯಿ ದೇವಿ ಹಾಗೂ ತಿಪಟೂರಿನ ಸೋಮನ ಕಟ್ಟೆ ಶ್ರೀ ಕಾಡಸಿz್ದÉೀಶ್ವರ ಮಠದ ಕರಿ ವೃಷಭಾ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ಕುಲಪತಿ ಪೆÇ್ರ.ಜಿ.ಹೇಮಂತ ಕುಮಾರ್ ತಿಳಿಸಿದ್ದಾರೆ.

ಕ್ರಾಫರ್ಡ್ ಭವನದ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಈ ಬಾರಿಯ ಘಟಿ ಕೋತ್ಸವದಲ್ಲಿ ಪದವಿ ಪಡೆಯುತ್ತಿರು ವವರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ. 18,127 ಮಹಿಳೆಯರು, 10,036 ಪುರು ಷರು ಪದವಿ ಪಡೆಯುತ್ತಿದ್ದಾರೆ ಎಂದರು.

ಗೌರವ ಡಾಕ್ಟರೇಟ್ ನೀಡಲು ಸಂಗೀತ, ಕಲೆ, ಕ್ರೀಡೆ, ಸಾಹಿತ್ಯ, ಅಧ್ಯಾತ್ಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 14 ಮಂದಿ ಸಾಧಕರ ಹೆಸರನ್ನು ಪಟ್ಟಿ ಮಾಡಿ ಸ್ಕ್ರೂಟನಿ ಕಮಿಟಿಗೆ ಕಳುಹಿಸ ಲಾಗಿತ್ತು. ಪರಿಶೀಲನೆ ನಂತರ ರಾಜ್ಯ ಪಾಲರು ಇಬ್ಬರು ಹೆಸರನ್ನು ಆಯ್ಕೆ ಮಾಡಿ ಮುಚ್ಚಿದ ಲಕೋಟೆಯಲ್ಲಿ ಮೈಸೂರು ವಿವಿಗೆ ರವಾನಿಸಿದ್ದರು. ಅಧ್ಯಾತ್ಮ ಕ್ಷೇತ್ರದ ಮಾತಾ ಅಮೃತಾನಂದಮಯಿ ದೇವಿ ಹಾಗೂ ತಿಪಟೂರಿನ ಸೋಮನಕಟ್ಟೆ ಶ್ರೀ ಕಾಡಸಿz್ದÉೀಶ್ವರ ಮಠದ ಕರಿವೃಷಭಾ ದೇಶಿ ಕೇಂದ್ರ ಶಿವಯೋಗೀಶ್ವರ ಮಹಾ ಸ್ವಾಮೀಜಿ ಅವರನ್ನು ಗೌರವ ಡಾಕ್ಟ ರೇಟ್‍ಗೆ ಪರಿಗಣಿಸಲಾಯಿತು ಎಂದರು.

ಅನ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿ ರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಘಟಿ ಕೋತ್ಸವದಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಡಾ.ಅನಿಲ್ ಡಿ.ಸಹಸ್ರಬುಧೆ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಕಾರ್ಯ ಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡು ವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಅಂದು ಬೆಳಿಗ್ಗೆ ನಡೆ ಯುವ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳಲ್ಲಿ ಪದಕ ಗಳಿಸಿರುವವರಿಗೆ ಮಾತ್ರ ಪದಕ ಹಾಗೂ ಪ್ರಮಾಣಪತ್ರ ವಿತರಿಸಲಾಗು ತ್ತದೆ. ಮ.3.30ಕ್ಕೆ ನಡೆಯುವ ಸಮಾರಂಭ ದಲ್ಲಿ, ಸಿಂಗಪುರ್‍ನ ನಾನ್ಯಾಂಗ್ ತಾಂತ್ರಿಕ ವಿವಿಯ ಉಪಾಧ್ಯಕ್ಷ ಪೆÇ್ರ.ಬಿ.ವಿ.ಆರ್. ಚೌದರಿ ಪದವಿ ಪ್ರದಾನ ಮಾಡಲಿದ್ದಾರೆ ಎಂದರು.

ವಿವಿಧ ವಿಷಯಗಳಲ್ಲಿ 166 ಮಹಿಳೆ ಯರು, 218 ಪುರುಷರು ಪಿಹೆಚ್‍ಡಿ ಸ್ವೀಕ ರಿಸಲಿದ್ದಾರೆ. ಒಟ್ಟು 368 ಪದಕಗಳನ್ನು ವಿತರಿಸಲಾಗುತ್ತಿದ್ದು, 182 ನಗದು ಬಹು ಮಾನಗಳನ್ನು 206 ಅಭ್ಯರ್ಥಿಗಳು ಪಡೆದು ಕೊಳ್ಳಲಿದ್ದಾರೆ. ವಿವಿಧ ವಿಷಯಗಳಲ್ಲಿ 8241 ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪಡೆ ಯುತ್ತಿದ್ದಾರೆ. 4928 ಮಹಿಳೆಯರು ಹಾಗೂ 3313 ಪುರುಷರು ಇದ್ದಾರೆ. ಇನ್ನು 19538 ಅಭ್ಯರ್ಥಿಗಳು ಸ್ನಾತಕ ಪದವಿ ಪಡೆಯು ತ್ತಿದ್ದು, ಇದರಲ್ಲಿ 13033 ಮಹಿಳೆಯರು ಹಾಗೂ 6505 ಪುರುಷರು ಇದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕುಲ ಸಚಿವರಾದ ಪ್ರೊ. ಲಿಂಗರಾಜ ಗಾಂಧಿ, ಪ್ರೊ.ಮಹದೇವನ್ ಇದ್ದರು.

ಚುನಾವಣೆ ನಂತರ ಮೈಸೂರು ವಿವಿಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿಯಿರುವ ಬೋಧಕರ ಹುದ್ದೆ ಭರ್ತಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಲೋಕಸಭಾ ಚುನಾವಣೆ ಬಳಿಕ ಬ್ಯಾಕ್‍ಲಾಗ್ ಸೇರಿದಂತೆ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡ ಲಾಗುತ್ತದೆ ಎಂದು ಮೈವಿವಿ ಕುಲಪತಿ ಪೆÇ್ರ. ಜಿ.ಹೇಮಂತ ಕುಮಾರ್ ತಿಳಿಸಿದ್ದಾರೆ.

ಮೈಸೂರು ವಿವಿಯಲ್ಲಿ ಕಳೆದ ಹಲವು ವರ್ಷ ಗಳಿಂದ ಬೋಧಕ ಸಿಬ್ಬಂದಿ ನೇಮಕ ಮಾಡಿ ಕೊಂಡಿಲ್ಲ. ಅಲ್ಲದೆ ನಿವೃತ್ತಿಯಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಲವು ವರ್ಷಗಳಿಂದ ಪ್ರಮುಖ ವಿಷಯಗಳಲ್ಲಿ ಬೋಧನೆ ಮಾಡುತ್ತಿದ್ದವರು ನಿವೃತ್ತಿ ಯಾಗಿದ್ದಾರೆ. ಇದರಿಂದ ಬೋಧಕ ಸಿಬ್ಬಂದಿ ಕೊರತೆ ಉಂಟಾಗಿದೆ. 76 ಬ್ಯಾಕ್‍ಲಾಗ್, 54 ಹೈದರಾಬಾದ್ ಕರ್ನಾಟಕ ಹಾಗೂ 150 ಸಾಮಾನ್ಯ ಸೇರಿದಂತೆ ಒಟ್ಟು 320 ಬೋಧಕ ಹುದ್ದೆ ಖಾಲಿ ಇದೆ. ಇವುಗಳಲ್ಲಿ 76 ಬ್ಯಾಕ್‍ಲಾಗ್ ಬೋಧಕ ಹುದ್ದೆಯನ್ನು ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದ್ದು, ಚುನಾವಣೆಯ ಬಳಿಕ ಅರ್ಜಿ ಆಹ್ವಾನಿಸಲಾಗುತ್ತದೆ. ಉಳಿದ ಖಾಲಿ ಹುದ್ದೆ ಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು. 2020ಕ್ಕೆ ನ್ಯಾಕ್‍ಗೆ ಹೋಗುತ್ತಿದ್ದೇವೆ. ಬೋಧಕ ಸಿಬ್ಬಂದಿ ಕೊರತೆಯಿದ್ದರೆ ನ್ಯಾಕ್ ಪರಿಗಣಿ ಸುವುದಿಲ್ಲ. ಇದರಿಂದ ಮುಂದಿನ ವರ್ಷದೊಳಗೆ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡ ಲೇಬೇಕಾಗಿದೆ. ಈ ವರ್ಷ 182 ಪ್ರಾಧ್ಯಾಪಕರಿಗೆ ಬಡ್ತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ವಿವಿಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಗಳಲ್ಲಿ ಶೇ.50ಕ್ಕಿಂತ ಹೆಚ್ಚು ಯುವತಿಯರೇ ಇದ್ದಾರೆ. ಪದವಿ ಶಿಕ್ಷಣ ಪಡೆಯುತ್ತಿದ್ದಂತೆ ಯುವಕರು ಕೆಲಸ ದತ್ತ ಗಮನ ಹರಿಸುತ್ತಿದ್ದಾರೆ. ಇದರಿಂದ ಉನ್ನತ ಶಿಕ್ಷಣ ಪಡೆಯಲು ಬರುತ್ತಿರುವವರಲ್ಲಿ ಯುವತಿ ಯರ ಸಂಖ್ಯೆ ಹೆಚ್ಚಾಗಿದೆ. ಕೆಲವು ವಿಷಯಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಎಲ್ಲ ವಿಷಯ ಗಳಲ್ಲೂ ಸರ್ವೆ ಮಾಡಿಸಲಾಗುತ್ತದೆ. ವಿಷಯಗಳ ಪಠ್ಯ ಬದಲಾವಣೆ, ಕೋರ್ಸ್ ಬದಲಾವಣೆ ಸಂಬಂಧ ಸರ್ವೆ ನಡೆಸಲಾಗುತ್ತದೆ. 2025ರ ವೇಳೆಗೆ ವಿವಿಯಲ್ಲಿ ಡಿಜಿಟಲೀಕರಣ ಮಾಡಲು ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಏಪ್ರಿಲ್‍ನಿಂದ 600 ಮಂದಿಗೆ ತರಬೇತಿ ನೀಡಲಾಗುತ್ತದೆ ಎಂದರು.

Translate »