ಯಾವ ದೇವರೂ ಪರಿಶಿಷ್ಟರನ್ನು ಸಂಕೋಲೆಯಿಂದ ಪಾರು ಮಾಡಲಿಲ್ಲ…
ಮೈಸೂರು

ಯಾವ ದೇವರೂ ಪರಿಶಿಷ್ಟರನ್ನು ಸಂಕೋಲೆಯಿಂದ ಪಾರು ಮಾಡಲಿಲ್ಲ…

December 30, 2018

ಮೈಸೂರು: ದಲಿತ ವರ್ಗದ ಬಲಗೈ, ಎಡಗೈ ಹಾಗೂ ಪೌರಕಾರ್ಮಿಕ ಸಮು ದಾಯದ ಇತರೆ ಉಪ ಪಂಗಡಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕøತಿಕ ಬದಲಾವಣೆ ಕಾಣದಿದ್ದರೆ, ಇನ್ನು ನೂರು ವರ್ಷವಾದರೂ ಜನ ಅಸ್ಪøಶ್ಯತೆ ಮನಸ್ಥಿತಿ ಯಿಂದ ಹೊರಬರುವುದಿಲ್ಲ. ಆದ್ದರಿಂದ ತಮ್ಮ ಮಕ್ಕಳನ್ನು ಪೌರಕಾರ್ಮಿಕ ವೃತ್ತಿಗೆ ದೂಡಬೇಡಿ ಎಂದು ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಪಿ.ಮಹೇಶ್‍ಚಂದ್ರಗುರು ಮನವಿ ಮಾಡಿದರು.

ಮೈಸೂರು ಮಾನಂದವಾಡಿ ರಸ್ತೆಯ ಬುದ್ದನಗ ರದ ಶ್ರೀರಾಮಮಂದಿರ ಮುಂಭಾಗದಲ್ಲಿ ಪ್ರಗತಿ ಸೇವಾ ಟ್ರಸ್ಟ್ ಮತ್ತು ದಲಿತ ಅಭಿವೃದ್ಧಿ ಸಂಘ ಸಹಯೋಗ ದೊಂದಿಗೆ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್‍ರವರ ಪರಿನಿರ್ವಾಣ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ನೂರಾರು ವರ್ಷಗಳಿಂದ ಸಾಮಾಜಿಕವಾಗಿ ಆತ್ಮಗೌರವ ತಂದುಕೊಡದ ಪೌರಕಾರ್ಮಿಕ ವೃತ್ತಿ ಸೇರಿದಂತೆ ಉಪ ಕಸುಬುಗಳನ್ನು ತ್ಯಜಿಸಿ, ಕುಟುಂಬ ನಿರ್ವಹಣೆಗೆ ಬೇರೆ ವೃತ್ತಿಗಳನ್ನು ಅವಲಂಬಿಸುವಂತೆ ಸಲಹೆ ನೀಡಿದರಲ್ಲದೆ, ಜಾಗತಿಕ ಮಟ್ಟಕ್ಕೆ ಅನುಗುಣ ವಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಮೂಲಕ ಸ್ವಾಭಿಮಾನದ ಬದುಕು ರೂಪಿಸಲು ಮುಂದಾಗ ಬೇಕು. ಓರ್ವ ವ್ಯಕ್ತಿಯಲ್ಲಿ ಹಣ, ಅಂತಸ್ತು, ಶಿಕ್ಷಣ ಇದ್ದರೆ, ನಿಮ್ಮ ಮನೆಗೆ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಸೇರಿದಂತೆ ಇತರೆ ಸುಸಂಸ್ಕøತ ಮನೆತನದ ಹೆಣ್ಣು ಮಕ್ಕಳು ನಿಮ್ಮ ಮನೆಗೆ ಸೊಸೆಯಾಗಿ ಬರುತ್ತಾರೆ. ಈ ಕಾರಣಕ್ಕಾಗಿ ನಮ್ಮ ಮನೆತನದ ಗಂಡು ಮಕ್ಕಳ ಸಾಧನೆಗೆ ವಿವಿಧ ನಾಲ್ಕಾರು ಜಾತಿಯ ಹೆಣ್ಣುಮಕ್ಕಳು ಸಂತೋಷದಿಂದ ಮದುವೆಯಾಗಿ ಬದುಕು ಕಟ್ಟಿ ಕೊಂಡಿದ್ದಾರೆ ಎಂದು ತಿಳಿಸಿದರು.
ನಿಮ್ಮ ನಿಮ್ಮ ಕಾಲೋನಿಗಳಲ್ಲಿ ಹಲವಾರು ವರ್ಷ ಗಳಿಂದ ನಂಬಿ ಪೂಜೆ ಮಾಡಿಕೊಂಡು ಬಂದಿರುವ ಮಾರಮ್ಮ, ಶ್ರೀರಾಮ ಸೇರಿದಂತೆ ಇತರೆ ದೇವರು ಗಳು ನಿಮ್ಮನ್ನು ಸಾಮಾಜಿಕ ಸಂಕೋಲೆಯಿಂದ ಪಾರು ಮಾಡಿಲ್ಲ. ಇಷ್ಟು ವರ್ಷ ಈ ದೇವತೆಗಳನ್ನು ಪೂಜಿ ಸಿದ ನಿಮಗೆ ಸಿಕ್ಕ ಪ್ರತಿಫಲವೇನು? ಎಂದು ಪ್ರಶ್ನಿಸಿದರು.

ಬರಹಗಾರ ನಾಗಸಿದ್ದಾರ್ಥ ಹೊಲೆಯಾರ್ ಮಾತ ನಾಡಿ, ಇತ್ತೀಚೆಗೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಿಚ್‍ಗುತ್ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿಸಿ, 17 ಮಂದಿ ಸಾವನ್ನಪ್ಪಿದ್ದಾರೆ. ಮಾರಮ್ಮ ತನ್ನ ಭಕ್ತರನ್ನೇ ಬದುಕಿಸಿಕೊಳ್ಳಲಿಲ್ಲ. ಹಾಗಾಗಿ ಅತಿಯಾಗಿ ದೇವರು ಸೇರಿದಂತೆ ಯಾರನ್ನು ನಂಬ ಬೇಡಿ. ಮುಂದಿನ ದಿನಗಳಲ್ಲಿ ಬಲಗೈ-ಎಡಗೈ ಹಾಗೂ ಜಾಡಮಾಲಿ ಸೇರಿದಂತೆ ಇತರೆ ಉಪಪಂಗಡಗಳು ಒಂದಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸ ದಿದ್ದರೆ, ಕೆಳ ವರ್ಗದವರಿಗೆ ಯಾವುದೇ ಸೌಲಭ್ಯಗಳು ದೊರಕುವುದಿಲ್ಲ ಎಂದು ಹೇಳಿದರು.

ಅನೇಕ ವರ್ಷಗಳಿಂದ ಎಡಗೈ ಮತ್ತು ಇತರೆ ಶೋಷಿತ ಸಮುದಾಯಗಳು ಒಳ ಮೀಸಲಾತಿಗೆ ಆಗ್ರಹಿಸಿ ಬೃಹತ್ ಹೋರಾಟ ಮಾಡುತ್ತಿರುವುದು ಒಂದು ಕಡೆಯಾ ದರೆ, ಮುಂಬಡ್ತಿ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ನಮ್ಮ ಸಮುದಾಯ ಮಾತ್ರ ಊರಿನ ಕಸವನ್ನು ಎತ್ತಿ ಸ್ವಚ್ಛಗೊಳಿಸಿ, ತಮ್ಮ ಬದುಕನ್ನು ಬೀದಿಗೆ ತಂದು ಕೊಂಡಿದ್ದಾರೆ. ಆದ್ದರಿಂದ ಪೌರಕಾರ್ಮಿಕರು ಇನ್ನಾ ದರು ಜಾಗೃತರಾಗಿ ಡಾ.ಬಿ.ಆರ್.ಅಂಬೇಡ್ಕರ್ ತತ್ವಾ ದರ್ಶವನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿ ದರಲ್ಲದೆ, ಚುನಾವಣೆಗಳಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಹಣದ ಆಸೆಗೆ ಮಾರಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಅಶೋಕ ಪುರಂ ಠಾಣಾ ಇನ್ಸ್‍ಪೆಕ್ಟರ್ ಪಿ.ಎಂ.ಸಿದ್ದರಾಜು, ಮಾಜಿ ಮೇಯರ್ ಜಿ. ಪುರುಷೋತ್ತಮ್, ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ, ಪಾಲಿಕೆ ಸದಸ್ಯರಾದ ಭುವನೇಶ್ವರಿ ಪ್ರಭುಮೂರ್ತಿ, ಆರ್. ಶಾಂತಮ್ಮ ವಡಿವೇಲು, ಪ್ರಗತಿ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಲಕ್ಷಣ್, ಕಂದೇಗಾಲ ಶಿವಣ್ಣ, ಎಂ.ವಿ.ವೆಂಕಟೇಶ್, ವಿ.ದಿವಾಕರ್, ಪರಶು ರಾಮ್, ಎಎಸ್‍ಐ ಮಹದೇವ್ ಸೇರಿದಂತೆ ಇತರರಿದ್ದರು.

Translate »