ನಿಷ್ಪಕ್ಷಪಾತವಾಗಿ ಸ್ಥಳೀಯ ಸಂಸ್ಥೆಗಳ  ಚುನಾವಣೆ ನಡೆಸಲು ಸೂಚನೆ
ಹಾಸನ

ನಿಷ್ಪಕ್ಷಪಾತವಾಗಿ ಸ್ಥಳೀಯ ಸಂಸ್ಥೆಗಳ  ಚುನಾವಣೆ ನಡೆಸಲು ಸೂಚನೆ

August 10, 2018

ಹಾಸನ:  ‘ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಯಾವುದೇ ಗೊಂದಲಗಳಿಲ್ಲದಂತೆ ನಿಷ್ಪಕ್ಷಪಾತವಾಗಿ ನೆರವೇರಿಸಬೇಕು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಗುರುವಾರ ನಗರಸಭೆ, ಪುರಸಭೆ ಚುನಾ ವಣೆಗಳ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಸಭೆ ನಡೆಸಿದ ಅವರು ಪ್ರತಿಯೊಂದು ಚುನಾವಣೆಯೂ ಅತ್ಯಂತ ಪ್ರಮುಖವಾಗಿರುತ್ತದೆ ಯಾವುದೇ ನಿರ್ಲಕ್ಷ್ಯ ತೋರದೆ ಜವಾಬ್ದಾರಿ ಯಿಂದ ನಡೆಸಬೇಕು ಎಂದರು.

ನಾಮಪತ್ರಗಳ ಸ್ವೀಕಾರ, ಪರಿಶೀಲನೆ, ಜಾತಿ ಪ್ರಮಾಣ ಪತ್ರಗಳನ್ನು ಗಮನಿಸು ವುದು ಚಿಹ್ನೆಗಳನ್ನು ನೀಡುವ ವಿಚಾರವನ್ನು ಅತ್ಯಂತ ಎಚ್ಚರಿಕೆಯಿಂದ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಈಗಾಗಲೇ ಚುನಾವಣೆ ಘೋಷಣೆ ಯಾಗಿದ್ದು, ಕ್ಷೇತ್ರ ಮೀಸಲಾತಿಗಳನ್ನು ಪ್ರಕಟಿಸಲಾಗಿದೆ. ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಚುನಾವಣೆ ನೀತಿ ಸಂಹಿತೆಗಳ ಉಲ್ಲಂಘನೆಯಾಗದಂತೆ ಚುನಾವಣೆಯನ್ನು ನಡೆಸಬೇಕು ಎಂದು ಸೂಚನೆ ನೀಡಿದರು.

ಆ.10ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು. ಆ. 17ರಂದು ನಾಮಪತ್ರ ಸ್ವೀಕಾರಕ್ಕೆ ಕಡೆಯ ದಿನವಾಗಿದೆ. ಆ. 18ರಂದು ನಾಮ ಪತ್ರ ಪರಿಶೀಲನೆ ಆ. 20ರಂದು ನಾಮಪತ್ರ ಹಿಂತೆಗೆದು ಕೊಳ್ಳುವುದು, ರಜಾದಿನ ಆ. 29ರಂದು ಮತದಾನ ನಡೆಯಲಿದೆ. ಅಗತ್ಯವಿದ್ದರೆ ಆ. 31ರಂದು ಮರುಮತದಾನ ನಡೆಯಲಿದೆ ಎಂದು ಹೇಳಿದರು.

ಅಚ್ಚುಕಟ್ಟಾದ ಚುನಾವಣೆ ನಡಸಲು ಎಲ್ಲಾ ರೀತಿಯ ಸಹಕಾರವನ್ನು ಜಿಲ್ಲಾಡಳಿತ ನೀಡಲಿದೆ. ಯಾವುದೇ ಲೋಪಗೊಂದಲಗಳಿಲ್ಲದಂತೆ ಚುನಾವಣೆ ನಡೆಸಬೇಕು ಎಂದು ಸೂಚಿಸಿದರು. ಉಪ ವಿಭಾಗಧಿಕಾರಿ ಡಾ.ನಾಗರಾಜ್ ಅವರು ಚುನಾವಣೆಗೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Translate »