ಮೈಸೂರು, ಜು.18(ಎಸ್‍ಪಿಎನ್)- ಭಾರತ ಎಲ್ಲಾ ಕ್ಷೇತ್ರದಲ್ಲೂ ಸದೃಢ ದೇಶವಾಗಿ ಹೊರ ಹೊಮ್ಮಬೇಕಾ ದರೆ, ಪರ್ಯಾಯ ಇಂಧನವಾಗಿ ಅಣುವಿದ್ಯುತ್ ಉತ್ಪಾ ದನೆಗೆ ಹೆಚ್ಚಿನ ಅವಲಂಬನೆ ಅನಿವಾರ್ಯ ಎಂದು ಇಂಜಿ ನಿಯರ್ ಮಧುಸೂದನ್ ಓಜಾ ಅಭಿಪ್ರಾಯಪಟ್ಟರು.
ಮೈಸೂರು ಜೆಎಲ್‍ಬಿ ರಸ್ತೆಯ ಎಂಜಿನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಮೈಸೂರು ಘಟಕದ ವತಿಯಿಂದ ಆಯೋಜಿಸಿದ್ದ `ಸುಸ್ಥಿರ ಅಭಿವೃದ್ಧಿಗೆ ಪರ ಮಾಣು ಶಕ್ತಿಯ ಪಾತ್ರ’ ವಿಷಯ ಕುರಿತು ಮಾತ ನಾಡಿದ ಅವರು, ಉಷ್ಣ ವಿದ್ಯುತ್, ಜಲವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನಗಳ ಸಾಲಿನಲ್ಲಿ ಅಣುವಿದ್ಯುತ್ ಉತ್ಪಾದನೆಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಭಾರತದಲ್ಲಿ 7 ಪರಮಾಣು ಶಕ್ತಿ ಸ್ಥಾವರಗಳನ್ನು ಹೊಂದಿದೆ. ಈ ಘಟಕಗಳಿಂದ 6,780 ಮೆ.ವ್ಯಾ ಸಾಮಥ್ರ್ಯವಿದೆ. ಮತ್ತು ಒಟ್ಟು 30,29,291 ಗಿಗಾ ವ್ಯಾಟ್ ಉತ್ಪಾದಿಸುವ ಪರಮಾಣು ರಿಯಾಕ್ಟರ್ ಗಳನ್ನು ಹೊಂದಿದೆ. ಪ್ರಸ್ತುತ ಅಣುವಿದ್ಯುತ್ ಉತ್ಪಾದಿ ಸುವ ರಿಯಾಕ್ಟರ್ ನಿರ್ಮಾಣ ತ್ವರಿತಗತಿಯಲ್ಲಿದೆ. ಇದರಿಂದ 4,300 ಮೆ.ವ್ಯಾ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗುವ ನಿರೀಕ್ಷೆ ಹೊಂದಿದೆ ಎಂದರು.
ಪರಿಸರ ಉಳಿವಿಗೂ ಅಣುವಿದ್ಯುತ್ ಉತ್ಪಾದನೆ ಹೊರತು ಅನ್ಯಮಾರ್ಗವಿಲ್ಲ. ಭಾರತದಲ್ಲಿ ಶೇ.65ರಷ್ಟಿದ್ದ ನಿತ್ಯ ಹರಿದ್ವರ್ಣ ಕಾಡು ಶೇ.32ಕ್ಕೆ ಇಳಿಕೆಯಾಗಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತ ಹೋದರೆ, ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಈ ಪ್ರದೇಶದಲ್ಲಿ ಮತ್ತೆ ಕೈಗಾರಿಕೆಗಳ ಸ್ಥಾಪನೆಗೆ ಮುಂದಾದರೆ ಮುಂದೆ ಜಲಕ್ಷಾಮ ಉಂಟಾಗಲಿದೆ ಎಂದರು. ರೈಲ್ವೆ ಇಲಾಖೆ ಯಲ್ಲಿ ಸಾಧ್ಯವಾದಷ್ಟು ವಿದ್ಯುತ್ ಮಾರ್ಗಗಳ ಅಳ ವಡಿಕೆ ಕಾರ್ಯ ತುರುಸಿನಿಂದ ನಡೆಯುತ್ತಿದೆ. ಈಗಿ ರುವ ವಿದ್ಯುತ್ ಉತ್ಪಾದನೆಯಿಂದ ಈ ಯೋಜನೆ ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಹಂತಹಂತ ವಾಗಿ ಪರಮಾಣು ವಿದ್ಯುತ್ ಉತ್ಪಾದನೆ ಹೆಚ್ಚಿಸಿದರೆ, ಮಾತ್ರ ಸಾಧ್ಯ ಎಂದರು. ವೇದಿಕೆಯಲ್ಲಿ ಐಇಐ ಮೈಸೂರು ಘಟಕದ ಛೇರ್ಮನ್ ಡಾ.ಆರ್.ಸುರೇಶ್, ಐಸಿರಿ ಅಧ್ಯಕ್ಷ ಟಿ.ಎ.ಪ್ರಭಾಕರ್, ಡಿ.ಕೆ.ದಿನೇಶ್‍ಕುಮಾರ್, ಅನಿಲ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಈ ವಿಷಯದ ಬಗ್ಗೆ ಪ್ರೇಕ್ಷಕರೊಂದಿಗೆ ಸಂವಾದ ನಡೆಯಿತು.