ಒಂಟಿ ಸಲಗ ದಾಳಿ: ಮಹಿಳೆ ಕೈಮುರಿತ
ಕೊಡಗು

ಒಂಟಿ ಸಲಗ ದಾಳಿ: ಮಹಿಳೆ ಕೈಮುರಿತ

June 19, 2018

ನಾಪೋಕ್ಲು:  ಒಂಟಿ ಸಲಗದ ದಾಳಿಗೆ ಸಿಲುಕಿದ ಕಾರ್ಮಿಕ ಮಹಿಳೆ ಯೋರ್ವರ ಕೈ ಮುರಿದಿದ್ದು, ಅದೃಷ್ಟವ ಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾಪೋಕ್ಲು ಸಮೀಪದ ಅಡಿಯರ ಕಾಲೋನಿಯ ಬೋಳ್ಕ ಎಂಬುವರ ಪತ್ನಿ ಚುಬ್ಬಿ ಗಾಯಗೊಂಡಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚುಬ್ಬಿ ಕಕ್ಕಬ್ಬೆ ಯವಕಪಾಡಿ ಗ್ರಾಮದ ಹೋಂ ಸ್ಟೇಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆ ಹಿಂದಿರುಗುವ ವೇಳೆ ಒಂಟಿಸಲಗ ದಾಳಿ ನಡೆಸಿದೆ. ಆನೆ ದಾಳಿಯಿಂದ ಗಾಬರಿ ಗೊಂಡ ಚುಬ್ಬಿ ಕಿರುಚಿಕೊಂಡು ಓಡಲೆ ತ್ನಿಸುವ ವೇಳೆ ಸೊಂಡಿಲನ್ನು ಬೀಸಿದ ಒಂಟಿ ಸಲಗ ಆಕೆಯ ಕೈಯನ್ನು ತಿರುಚಿತೆನ್ನ ಲಾಗಿದೆ. ಇದರಿಂದ ಚುಬ್ಬಿಯ ಕೈ ಮುರಿದು ತೀವ್ರವಾಗಿ ಗಾಯಗೊಂಡಿದ್ದಾಳೆ.

ಈಕೆಯ ಕಿರುಚಾಟ ಕೇಳಿ ಅಕ್ಕಪಕ್ಕದ ನಿವಾಸಿಗಳು ಓಡಿಬಂದು ಗಲಾಟೆ ಮಾಡಿದ್ದ ರಿಂದ ಆನೆ ಓಡಿಹೋಗಿದೆ. ಇದರಿಂದ ಚುಬ್ಬಿ ಅಪಾಯದಿಂದ ಪಾರಾಗಿದ್ದಾರೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರ ವಾಗಿದ್ದು, ಅರಣ್ಯಾಧಿಕಾರಿಗಳು ಕಾಡಾನೆ ದಾಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದು, ಚುಬ್ಬಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಪಂ ಸದಸ್ಯ ರಾದ ಎಂ. ರಮೇಶ್, ಚಂಡೀರ ಜಗದೀಶ್, ಪಾಂಡಂಡ ನರೇಶ್ ಒತ್ತಾಯಿಸಿದ್ದಾರೆ.

Translate »