ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ಡಿಸಿ ಕಛೇರಿ ಮುಂದೆ ರೈತರ ಪ್ರತಿಭಟನೆ: ಮನವಿ ಸ್ವೀಕರಿಸಿದ ಕಂದಾಯ ಸಚಿವ ದೇಶಪಾಂಡೆ
ಕೊಡಗು

ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ಡಿಸಿ ಕಛೇರಿ ಮುಂದೆ ರೈತರ ಪ್ರತಿಭಟನೆ: ಮನವಿ ಸ್ವೀಕರಿಸಿದ ಕಂದಾಯ ಸಚಿವ ದೇಶಪಾಂಡೆ

June 19, 2018

ಮಡಿಕೇರಿ:  ಸಂಪೂರ್ಣ ಸಾಲ ಮನ್ನಾದ ವಿಚಾರದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಮೇ.30ರಂದು ರೈತ ಸಂಘಟನೆಗಳೊಂ ದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 15 ದಿನಗಳೊಳಗೆ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವ ಮೂಲಕ ರೈತರ ಸಾಲ ಮನ್ನಾ ಮಾಡುವು ದಾಗಿ ಹೇಳಿದ್ದರು. ಆದರೆ ಇದೀಗ ಅವಧಿ ಮೀರಿದ್ದರು ರೈತರ ಸಾಲದ ಬಗ್ಗೆ ಸ್ಪಷ್ಟ ವಾದ ತೀರ್ಮಾನ ಕೈಗೊಳ್ಳದಿರುವುದರಿಂದ ರೈತರಲ್ಲಿ ಆತಂಕ ಮೂಡಿದೆ. ಶೂನ್ಯ ಬಡ್ಡಿ ದರದ ಲಾಭ ಪಡೆಯಲು ಜೂನ್ 16 ರೊಳಗೆ ಸಾಲದ ಕಂತನ್ನು ಪಾವತಿಸಬೇಕಾ ಗಿದೆ. ಹೊಸದಾಗಿ ಕೃಷಿ ಚಟುವಟಿಕೆಯನ್ನು ಆರಂಭಿಸಲು ರೈತರು ಹಣಕಾಸಿನ ತೊಂದರೆ ಎದುರಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವುದಾಗಿ ನೀಡಿದ್ದ ಭರವಸೆ ಈಡೇರಲಿಲ್ಲ. ಹೀಗಾಗಿ ಕೂಡಲೇ ರೈತರ ಸಾಲ ಮನ್ನಾ ಮಾಡುವಂತೆ ಜಿಲ್ಲಾ ಧ್ಯಕ್ಷ ಮನು ಸೋಮಯ್ಯ ಆಗ್ರಹಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ರೈತರ ಮನವಿ ಪತ್ರವನ್ನು ಸ್ವೀಕರಿಸಿ ರೈತರ ಸಾಲ ಮನ್ನಾ ವಿಚಾರದಲ್ಲಿ ಮೈತ್ರಿ ಸರ್ಕಾರವು ಇನ್ನು ಕೆಲವೇ ಸಮಯದಲ್ಲಿ ನಿರ್ಧಾರ ಕೈ ಗೊಳ್ಳಲಿದೆ. ಅಲ್ಲಿವರೆಗೂ ರೈತರು ಸಂಯಮ ದಿಂದ ಇರುವಂತೆ ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಸಂಚಾಲಕ ಚಿಮ್ಮಂಗಡ ಗಣೇಶ್, ಈಗಾಗಲೇ ರೈತರು ಈ ವರ್ಷದ ಮುಂಗಾರು ಮಳೆಯಲ್ಲಿ ರೈತರ ಗದ್ದೆ ಹಾಗೂ ತೋಟಗಳಿಗೆ ಹಾನಿ ಆಗಿದೆ. ಆದುದರಿಂದ ಹಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ನೂತನ ಹೊಸ ಸಾಲವನ್ನು ಒದಗಿಸಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳಲು ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.

ಶಾಸಕ ಕೆ.ಜಿ.ಬೋಪಯ್ಯ ರೈತರು ಪ್ರತಿ ಭಟನೆ ನಡೆಸುವ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು. ಸಾಲ ಮನ್ನಾ ವಿಚಾರದಲ್ಲಿ ರೈತರೊಂದಿಗೆ ನಮ್ಮ ಪಕ್ಷ ಸದಾ ಸಿದ್ದವಿದೆ. ಪಕ್ಷವು ಕೂಡ ತಿಂಗಳ ಗಡುವು ನೀಡಿದೆ. ಸಾಲ ಮನ್ನಾ ಮಾಡದಿ ದ್ದಲ್ಲಿ ಹೋರಾಟದ ಹಾದಿಯನ್ನು ಹಿಡಿಯ ಲಾಗುವುದು. ರೈತರೊಂದಿಗೆ ನಾನು ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದರು.

ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ರೈತರ ಮನವಿ ಪತ್ರವನ್ನು ಸ್ವೀಕರಿಸಿದರು. ಈ ಸಂದರ್ಭ ರೈತ ಸಂಘದ ಪ್ರಧಾನ ಕಾರ್ಯ ದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾಡಳಿತವು ಆದಷ್ಟು ಬೇಗನೇ ಜಿಲ್ಲೆಯ ಎಲ್ಲಾ ಬ್ಯಾಂಕಿನ ಡಿಸ್ಟ್ರಿಕ್ಟ್ ಕೋಆಡಿನೇಟರ್ಸ್, ಡಿಸಿಸಿ ಬ್ಯಾಂಕ್ ಸಿಇಒ, ಲೀಡ್ ಬ್ಯಾಂಕ್ ಹಾಗೂ ನಬಾರ್ಡ್ ಬ್ಯಾಂಕ್‍ನ ಉನ್ನತ ಅಧಿಕಾರಿಗಳೊಂದಿಗೆ ವಿಶೇಷ ಸಭೆ ಕರೆದು ಕ್ರಾಪ್ ಲೋನ್, ಟರ್ಮ್ ಲೋನ್, ಎನ್.ಪಿ.ಎ. ಓವರ್ ಡಿವ್ ಹಾಗೂ ಕೋರ್ಟ್‍ನಲ್ಲಿರುವ ರೈತರ ಸಾಲ ವಿಚಾರದ ಅಂಕಿ ಅಂಶಗಳ ಬಗ್ಗೆ ಚರ್ಚೆ ನಡೆಸಬೇಕು. ಎಂದು ಆಗ್ರಹಿಸಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ರಾದ ಸುನೀಲ್ ಸುಬ್ರಮಣ , ಶಾಂತೆ ಯಂಡ ವೀಣಾ ಅಚ್ಚಯ್ಯ, ಕಾಂಗ್ರೆಸ್ ಹಿರಿಯ ಮುಖಂಡರಾದ ಮಿಚ್ಚು ಚಂಗಪ್ಪ, ಹಾಜರಿದ್ದರು, ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಮುಖರಾದ ಮಚ್ಚಮಾಡ ರಂಜಿ,ಚೋನಿರ ಸತ್ಯ, ಅಯ್ಯಮಾಡ ಹ್ಯಾರಿ ಸೋಮೇಶ್,ಕೆ.ಪಿ.ಗಣಪತಿ, ಪಿ.ಎಸ್.ಗಣಪತಿ,ಪ್ರವೀಣ್, ಮಲ್ಚೀರ ಗಿರೀಶ್, ಆಶೋಕ್, ಪುಳ್ಳಂಗಡ ಅಶೋಕ್, ಆದೇಂಗಡ ಆಶೋಕ್, ಕೆ.ಎನ್. ಚಂಗಪ್ಪ, ಸಿ.ಡಿ.ರಘು ತಿಮ್ಮಯ್ಯ, ಸೋಮೆಯಂಗಡ ಗಣೇಶ್ ತಿಮ್ಮಯ್ಯ ಮುಂತಾದವರು ಹಾಜರಿದ್ದರು.

Translate »