ಉತ್ಸಾಹದಿಂದ ಪಾಲ್ಗೊಂಡು ಸಾಹಸ ಪ್ರದರ್ಶಿಸಿ ಸಂಭ್ರಮಿಸಿದ ಚಿಣ್ಣರು
ಮೈಸೂರು, ಜ.19(ಆರ್‍ಕೆಬಿ)- ಮೈಸೂರು ಅಮಿಟಿ ಲೇಡೀಸ್ ಸರ್ಕಲ್-108, ಆರ್‍ಇ3 ಕಮ್ಯಾಂಡ್ ಫಿಟ್‍ನೆಸ್ ಸಹಯೋಗದಲ್ಲಿ ಮೈಸೂರಿನ ಜಯಲಕ್ಷ್ಮಿಪುರಂನ ಮಹಾ ಜನ ಕಾಲೇಜು ಮೈದಾನದಲ್ಲಿ ಭಾನು ವಾರ ಏರ್ಪಡಿಸಿದ್ದ `ಒಬ್ರಾಟ್ಸ್- ಮಕ್ಕಳಿಗೆ ಅಡೆತಡೆ ನಡುವೆ ಸಾಹಸ ಕ್ರೀಡಾ ಸ್ಪರ್ಧೆ’ ಯಲ್ಲಿ ಭಾಗವಹಿಸಿದ್ದ ಮಕ್ಕಳು ತಮ್ಮ ಸಾಹಸ ಪ್ರತಿಭೆಯನ್ನು ಪ್ರದರ್ಶಿಸಿದರು.
ಮಕ್ಕಳಲ್ಲಿನ ಸಾಹಸ ಪ್ರವೃತ್ತಿ, ಧೈರ್ಯ ಹಾಗೂ ಉತ್ಸಾಹಿ ಗುಣಗಳಿಗೆ ಉತ್ತೇಜನ ನೀಡಲು ಮಕ್ಕಳ ದೈಹಿಕ ಸಾಮಥ್ರ್ಯ ಪರೀ ಕ್ಷಿಸುವ ಸಾಹಸ ಕ್ರೀಡಾ ಸ್ಪರ್ಧೆಯಲ್ಲಿ 5 ರಿಂದ 16 ವರ್ಷದೊಳಗಿನ 240 ಮಕ್ಕಳು ಭಾಗವಹಿಸಿ ಆಯೋಜಕರು ಒಡ್ಡಿದ್ದ ಸವಾಲು ಗಳನ್ನು ಎದುರಿಸಿ, ಸಾಹಸ ಮೆರೆದರು.
5ರಿಂದ 8 ವರ್ಷ ವಯೋಮಾನದ ಕಿರಿಯ ಮಕ್ಕಳ ಹಾಗೂ 9ರಿಂದ 16 ವರ್ಷದೊಳ ಗಿನ ಹಿರಿಯ ಮಕ್ಕಳ ಬಾಲಕ, ಬಾಲಕಿ ಯರ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.
ಟೈರ್ ಗೋಡೆ ಹತ್ತುವುದು (ಟೈರ್ ವಾಲ್), ಟಾರ್ಜಾನ್ ಜಿಗಿತ (ಟಾರ್ಜನ್ ಜಂಪ್), ತಲೆ ಕೆಳಗಾದ ಗೋಡೆ ಹತ್ತಿ ಇಳಿಯುವುದು (ಇನ್‍ವರ್ಟೆಡ್ ವಾಲ್), ಕೋತಿಗಳಂತೆ ನೇತಾಡುತ್ತಾ ಸಾಗುವುದು (ಮಂಕಿ ಬಾರ್) ಇನ್ನಿತರ ಅಡೆತಡೆಗಳಿದ್ದ ಸ್ಪರ್ಧೆಗಳಿದ್ದವು. ಲೇಡೀಸ್ ಸರ್ಕಲ್ ಇಂಡಿಯಾ ಅಧ್ಯಕ್ಷೆ ನಿಧಿ ಗುಪ್ತ ಸ್ಪರ್ಧೆ ಗಳಿಗೆ ಚಾಲನೆ ನೀಡಿದರು. ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಪದಕ, ಪ್ರಮಾಣ ಪತ್ರ, ಸಸಿ ವಿತರಿಸಲಾಯಿತು. ಖ್ಯಾತ ಮ್ಯಾರಥಾನ್ ಕ್ರೀಡಾ ಪಟುವೂ ಆಗಿರುವ ಜೆಎಸ್‍ಎಸ್ ದಂತ ಕಾಲೇಜು ಮತ್ತು ಆಸ್ಪತ್ರೆಯ ಪೆಥಾಲಜಿ ವಿಭಾಗದ ಮುಖ್ಯಸ್ಥೆ ಉಷಾ ಹೆಗಡೆ ಪ್ರತಿ ವಿಭಾಗದ ವಿಜೇತ ರಿಗೆ ಬಹುಮಾನ ಗಳನ್ನು ವಿತರಿಸಿದರು.
ಒಬ್ರಾಟ್ಸ್ ಕ್ರೀಡೆಯ ನಿರ್ದೇಶಕ ಅಭಿ ಜಿತ್ ರವೀಂದ್ರ ಸಾಹಸ ಕ್ರೀಡಾ ಸ್ಪರ್ಧೆ ಗಳನ್ನು ನಿರ್ವಹಿಸಿದರು. ಈ ಸಂದರ್ಭ ದಲ್ಲಿ ಲೇಡೀಸ್ ಸರ್ಕಲ್ ಇಂಟರ್‍ನ್ಯಾಷ ನಲ್ ಏಷ್ಯಾ ಪೆಸಿಫಿಕೇಷನ್ ಚೇರ್ ಪರ್ಸನ್ ನಮ್ರತಾ ಶೆಣೈ, ಲೇಡೀಸ್ ಸರ್ಕಲ್ ಇಂಡಿಯಾ ಏರಿಯಾ 13 ಚೇರ್ ಪರ್ಸನ್ ನಿಧಿ ಶಾ, ಲೇಡಿಸ್ ಸರ್ಕಲ್ ಇಂಡಿಯಾ ಮಾಜಿ ಅಧ್ಯಕ್ಷೆ ಮಾಸುಮಾ ವಾಘ್, ಏರಿಯಾ 13 ಚಾರ್ಟರ್ ಚೇರ್‍ಪರ್ಸನ್ ಕಾವ್ಯ ಕೈಲಾಶ್, ರೌಂಡ್ ಟೇಬಲ್ ಏರಿಯಾ 13ರ ಚಾರ್ಟರ್ ಚೇರ್ ಪರ್ಸನ್ ಕೈಲಾಶ್ ಕಾಶಿನಾಥ್, ಮೈಸೂರು ಅಮಿಟಿ ರೌಂಡ್ ಟೇಬಲ್ 156 ಚೇರ್ ಪರ್ಸನ್ ಅದಿಥಿ ರಾಜು, ಕಾರ್ಯದರ್ಶಿ ಕಿರಣ್ ರಂಗ, ಮೈಸೂರು ಅಮಿಟಿ ಲೇಡೀಸ್ ಸರ್ಕಲ್ 108 ಚೇರ್‍ಪರ್ಸನ್ ರೂಪಾಲ್ ಮೆಹ್ತಾ, ಉಪಾಧ್ಯಕ್ಷೆ ಸಂಪದಾ ಶೀತಲ್, ಸಹನಾ ಇನ್ನಿತರರು ಉಪಸ್ಥಿತರಿದ್ದರು.
ಸಾಹಸ ಸ್ಪರ್ಧೆಯಲ್ಲಿ ಪಾಲ್ಗೊಂಡ ಕಿರಿಯ ವರ್ಗದವರಿಗೆ ನೋಂದಣಿ ಶುಲ್ಕ ರೂ.750 ಮತ್ತು ಹಿರಿಯ ವರ್ಗಕ್ಕೆ ಶುಲ್ಕ ರೂ.850 ನೋಂದಣಿ ಶುಲ್ಕ ಸಂಗ್ರಹಿಸಿದ್ದು, ಸಂಗ್ರಹಿಸಲಾದ ಹಣವನ್ನು ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿ ಸರ್ಕಾರಿ ಶಾಲೆಯಲ್ಲಿ ಎರಡು ಕೊಠಡಿಗಳನ್ನು ನಿರ್ಮಿಸಲು ವಿನಿಯೋಗಿಸಲಾಗುತ್ತಿದೆ. – ರೂಪಾಲ್ ಮೆಹ್ತಾ, ಅಧ್ಯಕ್ಷೆ, ಎಂಎಎಲ್‍ಸಿ-108