ತಲೆ ಮೇಲೆ ಹರಿದ ಬಸ್ ಚಕ್ರ: ವೃದ್ಧೆ ಸ್ಥಳದಲ್ಲೇ ಸಾವು
ಮೈಸೂರು

ತಲೆ ಮೇಲೆ ಹರಿದ ಬಸ್ ಚಕ್ರ: ವೃದ್ಧೆ ಸ್ಥಳದಲ್ಲೇ ಸಾವು

October 24, 2018

ನಂಜನಗೂಡು:  ಕೆಎಸ್‍ಆರ್‍ಟಿಸಿ ಬಸ್ ಸ್ಕೂಟರ್‍ಗೆ ಡಿಕ್ಕಿ ಹೊಡೆದಾಗ ಕೆಳಕ್ಕೆ ಬಿದ್ದ ವೃದ್ಧೆ ತಲೆ ಮೇಲೆಯೇ ಬಸ್‍ನ ಚಕ್ರ ಹರಿದಿದೆ. ನಗರದ ಎಂಜಿಎಸ್ ರಸ್ತೆಯ ಶ್ರೀಕಂಠೇಶ್ವರ ಟಿವಿ ಸೆಂಟರ್ ಬಳಿ ಮಂಗಳವಾರ ನಡೆದ ಈ ಭೀಕರ ಅಪಘಾತದಲ್ಲಿ ವೃದ್ಧೆ ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾದರು. ತಾಲೂಕಿನ ತಾಂಡವಪುರ ಗ್ರಾಮದ ಬಸವೇಗೌಡರವರ ಪತ್ನಿ ಮರಮ್ಮ(65) ಸಾವನ್ನಪ್ಪಿದ ದುರ್ದೈವಿ.

ಕೆನರಾ ಬ್ಯಾಂಕಿನಲ್ಲಿ ಕೆಲಸ ಮುಗಿಸಿಕೊಂಡು ಗ್ರಾಮದತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಆಟೋ ವೊಂದನ್ನು ಹಿಂದಿಕ್ಕಲು ಹೋಗಿ ಹುಲ್ಲಹಳ್ಳಿ ವೃತ್ತದ ಕಡೆಯಿಂದ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್, ಸ್ಕೂಟರ್‍ಗೆ ಡಿಕ್ಕಿ ಹೊಡೆದಿದೆ. ಇದರಿಂದ ಸ್ಕೂಟರ್ ಸವಾರ ಚಂದ್ರು ಎಡ ಬದಿಗೂ, ಹಿಂಬದಿ ಕುಳಿತಿದ್ದ ಅವರ ತಾಯಿ ಮರಮ್ಮ ಬಲಬದಿಗೂ ಬಿದ್ದರು. ಮರಮ್ಮ ಅವರ ತಲೆ ಮೇಲೆ ಬಸ್‍ನ ಹಿಂಬದಿ ಚಕ್ರ ಹರಿದ ಪರಿಣಾಮ ವಾಗಿ ಸ್ಥಳದಲ್ಲೇ ಸಾವನ್ನ ಪ್ಪಿದ್ದಾರೆ. ಶ್ರೀಕಂಠೇಶ್ವರ ಟಿವಿ ಸೆಂಟರ್ ಬಳಿ ಸಂಚಾರ ಪೊಲೀಸರು ತಪಾಸಣೆ ನಡೆಸು ತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲು ಹೋಗಿ ಸ್ಕೂಟರ್ ಸವಾರ ಬಸ್‍ಗೆ ಡಿಕ್ಕಿ ಹೊಡೆಯು ವಂತಾಯಿತು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದುದು ಕೇಳಿ ಬಂದಿತು.

Translate »