ಮೈಸೂರು: 103 ವರ್ಷಗಳಷ್ಟು ಹಳೆಯದಾದ ಮೈಸೂರು ವಿಶ್ವ ವಿದ್ಯಾನಿಲಯವು ಮೂಕ್ಸ್ ಸ್ವಯಂ (UGC-MOOKs SWAYAM) ಅಳ ವಡಿಸಿಕೊಳ್ಳುವ ಮೂಲಕ ಬೃಹತ್ ಮುಕ್ತ ಆನ್‍ಲೈನ್ ಕೋರ್ಸ್‍ಗಳನ್ನು ನೀಡುವ ಕರ್ನಾಟಕದ ಮೊದಲ ವಿಶ್ವವಿದ್ಯಾ ನಿಲಯವಾಗಿ ಹೊರ ಹೊಮ್ಮಲಿದೆ. ಯುಜಿಸಿ ನೀಡಿದ ಈ ಕ್ರಾಂತಿಕಾರಕ ವೇದಿಕೆಯ ಪ್ರಮುಖ ಅಂಶವೆಂದರೆ ದೇಶದ ವಿವಿಧ ಭಾಗಗಳಲ್ಲಿನ ತಜ್ಞರಿಂದ ಬೋಧನೆ ಮತ್ತು ಪಾಠಗಳನ್ನು ಪಡೆಯ ಬಹುದಾಗಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಇಂದಿಲ್ಲಿ ತಿಳಿಸಿದರು.
ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ `ಯುಜಿಸಿ-ಮೂಕ್ಸ್ ಸ್ವಯಂ’ ಕೋರ್ಸ್‍ಗಳ ಅಳವಡಿಸಿಕೊಳ್ಳು ವುದರ ಕುರಿತ ಒಂದು ದಿನದ ಕಾರ್ಯಾ ಗಾರಕ್ಕೆ ಚಾಲನೆ ನೀಡಿ ಅವರು ಮಾತ ನಾಡಿದರು. ಕಾಲೇಜು ಡೆವಲಪ್‍ಮೆಂಟ್ ಕೌನ್ಸಿಲ್ (ಸಿಡಿಸಿ) ಮತ್ತು `ಸ್ವಯಂ’ ಡಿಜಿಟಲ್ ಲರ್ನಿಂಗ್ ಮಾನಿಟರಿಂಗ್ ಸೆಲ್‍ನಿಂದ ಆಯೋಜಿಸಲಾಗಿದ್ದ ಈ ಆನ್‍ಲೈನ್ ಶಿಕ್ಷಣ ಮತ್ತು ಪರೀಕ್ಷೆಗಳಿಗೆ ಸಂಬಂಧಿ ಸಿದಂತೆ ಬೋಧಕರು ಮತ್ತು ವಿದ್ಯಾರ್ಥಿ ಗಳ ನಡುವೆ ಜಾಗೃತಿ ಮೂಡಿಸಲು ಈ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು. ಸ್ನಾತಕೋತ್ತರ ಕೋರ್ಸ್‍ಗಳಿಗೆ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಹೊಸ ಶಿಕ್ಷಣ ನೀತಿಯಲ್ಲಿ ಒಟ್ಟು ದಾಖ ಲಾತಿ ಅನುಪಾತವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಆನ್‍ಲೈನ್ ಮತ್ತು ಹೈಬ್ರಿಡ್ ಕಲಿಕೆಯ ಮೂಲಕ ದಾಖಲಾತಿಯನ್ನು ಹೆಚ್ಚಿಸಲು ಮೂಕ್ಸ್ ಸಹಾಯ ಮಾಡುತ್ತದೆ. ಗ್ರಾಮೀಣ ಪ್ರದೇಶಗಳಿಗೆ ಹೋಗಲು ಸಾಧ್ಯವಾಗದ ಬೋಧಕರು ಆನ್‍ಲೈನ್‍ನಲ್ಲಿ ಕಲಿಸಬಹುದು ಮತ್ತು ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವೂ ಆಗಬಹುದು ಎಂದರು.
ಯೋಜನೆಯ ಮೊದಲ ಹಂತದಲ್ಲಿ ಮಾನಸ ಗಂಗೋತ್ರಿ ವಿಶ್ವ ವಿದ್ಯಾನಿಲ ಯದ ಸ್ನಾತಕೋತ್ತರ ಕೇಂದ್ರಗಳಲ್ಲಿ, ಹಾಸ ನದ ಹೇಮಗಂಗೋತ್ರಿ, ಮಂಡ್ಯ ಸ್ನಾತ ಕೋತ್ತರ ಕೇಂದ್ರದಲ್ಲಿ `ಸ್ವಯಂ’ ಅಳವಡಿಸಿ ಕೊಂಡಿದ್ದು, ಸುಮಾರು 183 ವಿದ್ಯಾರ್ಥಿ ಗಳು 18 ವಿಷಯಗಳಿಗೆ ದಾಖಲಾಗಿ ದ್ದಾರೆ. 163 ವಿದ್ಯಾರ್ಥಿಗಳು ಯುಜಿಸಿ ಮೂಕ್ಸ್ ಸ್ವಯಂ ಕೋರ್ಸ್ ಪರೀಕ್ಷೆಗೆ ಹಾಜರಾಗಿದ್ದಾರೆ. ಜ.19 ಮತ್ತು 20, 2019ರಂದು ನಡೆದ ಪರೀಕ್ಷೆಯಲ್ಲಿ 113 ವಿದ್ಯಾರ್ಥಿಗಳು ಶೇ.69.32) ಉತ್ತೀರ್ಣರಾಗಿ, ಶೇ.40 ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ ಎಂದರು
ಈ ಕೋರ್ಸ್‍ಗಳನ್ನು ವಿಶ್ವ ವಿದ್ಯಾ ನಿಲಯದ ಅಂಗಸಂಸ್ಥೆ ಕಾಲೇಜುಗಳಿಗೂ ಲಭ್ಯವಾಗಲಿದ್ದು, ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಈಗ 44 ವಿಷಯಗಳ ಆಯ್ಕೆಗೆ ಅವಕಾಶವಿದೆ. `ಯುಜಿಸಿ-ಮೂಕ್ಸ್ ಸ್ವಯಂ’ ಇದು ಜುಲೈ-ನವೆಂಬರ್ 2019ರಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದರು.
ಈ ಕಾರ್ಯಾಗಾರವು ಆನ್‍ಲೈನ್ ಕೋರ್ಸ್ ಗಳ ಬಗ್ಗೆ ಬೋಧಕರಿಗೆ ಅರಿವು ಮೂಡಿಸು ವುದು ಮತ್ತು ಕೋರ್ಸ್‍ಗಳನ್ನು ತೆಗೆದು ಕೊಳ್ಳಲು ವಿದ್ಯಾರ್ಥಿಗಳನ್ನು ಹೇಗೆ ಪ್ರೇರೇಪಿ ಸುವುದು ಎಂಬುದಾಗಿದೆ ಎಂದು ಹೇಳಿದರು.
ಕಾಲೇಜ್ ಡೆವಲಪ್‍ಮೆಂಟ್ ಕೌನ್ಸಿಲ್ ನಿರ್ದೇಶಕ ಡಾ.ಶ್ರೀಕಂಠಸ್ವಾಮಿ ಪವರ್ ಪಾಯಿಂಟ್ ಪ್ರಸ್ತುತಪಡಿಸಿ, ಬಹುಭಾಷಾ ವೇದಿಕೆಯಾಗಿರುವ ಇಲ್ಲಿ ಇಂಗ್ಲಿಷ್ ಜ್ಞಾನ ವಿಲ್ಲದೆಯೂ ವಿದ್ಯಾರ್ಥಿಗಳು ಕನ್ನಡದಲ್ಲೂ ಕಲಿಯಬಹುದಾಗಿದೆ ಎಂದರು.
ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗ ರಾಜಗಾಂಧಿ ಮಾತನಾಡಿದರು. ಸ್ವಯಂ ಕೋರ್ಸ್‍ಗಳ ಕುರಿತು ಸಂಯೋಜಕ ಡಾ.ಹೆಚ್. ಎಸ್. ಕುಮಾರ ಕೋರ್ಸ್‍ಗಳ ಪರಿಚಯ ಮಾಡಿಕೊಟ್ಟರು. ಸ್ನಾತಕೋತ್ತರ ಕೇಂದ್ರಗಳ ಅಧ್ಯಕ್ಷರು, `ಸ್ವಯಂ’ ಮಾರ್ಗದರ್ಶಕರು, ವಿವಿ ಸಿಬಿಸಿಎಸ್ ನೋಡಲ್ ಅಧಿಕಾರಿ ಗಳು, ಅಂಗ ಸಂಸ್ಥೆ ಕಾಲೇಜು ಗಳ ಪ್ರಾಂಶು ಪಾಲರು ಇಂದಿನ ಏಕದಿನ ಕಾರ್ಯಾ ಗಾರದಲ್ಲಿ ಭಾಗವಹಿಸಿದ್ದರು.