ನಾಮದೇವ ಭವನ ಉದ್ಘಾಟನೆ
ಮೈಸೂರು

ನಾಮದೇವ ಭವನ ಉದ್ಘಾಟನೆ

August 5, 2019

ಮೈಸೂರು, ಆ.4(ಎಂಕೆ)- ಮೈಸೂರಿನ ವಿವೇಕಾನಂದ ನಗರದಲ್ಲಿ ಶಾಸಕ ಮತ್ತು ಸಂಸದರ ಅನುದಾನದೊಂದಿಗೆ ಶ್ರೀ ನಾಮದೇವ ಸಿಂಪಿ ಸಮಾಜದ ವತಿಯಿಂದ ನಿರ್ಮಿಸಿರುವ ನಾಮದೇವ ಭವನವನ್ನು ಶಾಸಕ ಎಸ್.ಎ.ರಾಮದಾಸ್ ಉದ್ಘಾಟಿಸಿದರು. ಇದೇ ವೇಳೆ ನಾಮದೇವ ಸಿಂಪಿ ಸಮಾಜದ ಹಿರಿಯ ಮುಖಂಡರನ್ನು ಅಭಿನಂದಿಸಲಾಯಿತು. ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್, ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಎನ್.ಕೆ.ಚಂದ್ರಪ್ಪ ನಗರಪಾಲಿಕೆ ಸದಸ್ಯರಾದ ಸುನಂದ ಪಾಲನೇತ್ರ, ಬಿ.ವಿ.ಮಂಜುನಾಥ್, ಗೀತಾಶ್ರೀ, ಸಂಘಟನಾ ಕಾರ್ಯದರ್ಶಿ ಸುರೇಶ್ ಬಾಬು, ದೀನೇಶ್, ಸೇಫ್ ವೀಲ್ಸ್‍ನ ಪ್ರಶಾಂತ್, ಮೈಪು ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »