ಮೈಸೂರು, ಜ. 16 (ಆರ್‍ಕೆ)- ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದಿನಿಂದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವಿಭಾಗೀಯ ಕಚೇರಿ ಆರಂಭಿಸಲಾಯಿತು.
ಡಿಸಿ ಕಚೇರಿ ಕಟ್ಟಡದ ನೆಲ ಮಹಡಿಯ ಕೊಠಡಿ ಸಂಖ್ಯೆ 21ರಲ್ಲಿ ಆರಂಭವಾದ ಕಚೇರಿಯನ್ನು ಆಯೋ ಗದ ಅಧ್ಯಕ್ಷ ಡಾ. ಸೆಬಾಸ್ಟಿನ್ ಅಂಥೋಣಿ ಅವರು ಉದ್ಘಾಟಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಆಯೋಗದ ಕಾರ್ಯ ಚಟುವಟಿಕೆ ಹಾಗೂ ಆಡಳಿತವನ್ನು ವಿಕೇಂದ್ರೀಕರಣಗೊಳಿಸುವ ಸಲುವಾಗಿ ರಾಜ್ಯದ 6 ಕಡೆ ವಿಭಾಗೀಯ ಕಚೇರಿ ಗಳನ್ನು ತೆರೆಯುತ್ತಿರುವುದಾಗಿ ತಿಳಿಸಿದರು.
ಮೊದಲನೆಯದಾಗಿ ಮೈಸೂರಲ್ಲಿ ಕಚೇರಿ ಆರಂಭಿ ಸಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಹಾಗೂ ರಾಮನಗರ ಜಿಲ್ಲೆಗಳು ಮೈಸೂರು ವಿಭಾಗದ ಕಚೇರಿ ವ್ಯಾಪ್ತಿಗೆ ಬರುತ್ತವೆ. ಮುಂದೆ ಶಿವಮೊಗ್ಗ, ಬಳ್ಳಾರಿ, ರಾಯಚೂರು, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಕಚೇರಿ ಆರಂಭಿಸುವುದಾಗಿ ಅವರು ತಿಳಿಸಿದರು.
ಮಕ್ಕಳ ಮೇಲಿನ ದೌರ್ಜನ್ಯ ಸೇರಿದಂತೆ ರಾಜ್ಯ ದಲ್ಲಿ 2 ಸಾವಿರಕ್ಕೂ ಮಿಗಿಲಾಗಿ ಪ್ರಕರಣಗಳು ಬಾಕಿ ಉಳಿದಿದ್ದು, ಆ ಪೈಕಿ ಶೇ.60ರಷ್ಟು ಪ್ರಕರಣಗಳನ್ನು ಆಯೋಗದಲ್ಲಿ ಇತ್ಯರ್ಥ ಮಾಡಲಾಗಿದೆ. ಮಕ್ಕಳ ಹಕ್ಕು ಗಳ ಉಲ್ಲಂಘನೆ ಪ್ರಕರಣಗಳನ್ನು ವಿಳಂಬ ಮಾಡದೇ ಶೀಘ್ರ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸ ಲಾಗುತ್ತಿದೆ ಎಂದು ಅಂಥೋಣಿ ಅವರು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯ, ಶಿಕ್ಷಣ ಪಡೆಯುವ ಹಕ್ಕು ಉಲ್ಲಂ ಘನೆ, ಆಶ್ರಮ ಶಾಲೆಗಳಲ್ಲಿ ಶಿಕ್ಷಕರು ಸೇರಿದಂತೆ ಮೂಲ ಸೌಕರ್ಯ ಕೊರತೆ, ಶಿಕ್ಷಕರಿಂದ ಮಕ್ಕಳ ಮೇಲೆ ಹಲ್ಲೆ, ಹೊರೆ ಹೊರಸುವುದು, ಜೀತ ಪದ್ಧತಿ, ಭಿಕ್ಷಾಟನೆ, ವ್ಯಾಪಾರ ಮಾಡಿಸುವುದೂ ಸೇರಿ ಒಟ್ಟು 86 ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 36 ಪ್ರಕರಣಗಳು ಇತ್ಯರ್ಥವಾಗಿವೆ ಎಂದು ತಿಳಿಸಿದರು.
ಎಡಿಸಿ ಬಿ.ಆರ್. ಪೂರ್ಣಿಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾ, ಆಯೋಗದ ಸದಸ್ಯರಾದ ಒಡನಾಡಿ ಸೇವಾ ಸಂಸ್ಥೆಯ ಪರಶುರಾಮ್, ಸ್ಟ್ಯಾನ್ಲಿ, ನಿರಾಶ್ರಿತ ಮಕ್ಕಳು ಜಿಲ್ಲಾ ಮಕ್ಕಳ ಕ್ಷೇಮಪಾಲನಾ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.