ಅಂಗಾಂಗ ದಾನದಿಂದ ಮತ್ತೊಬ್ಬರ ಜೀವ ಉಳಿಸಲು ಜನ ಜಾಗೃತಿ
ಮೈಸೂರು

ಅಂಗಾಂಗ ದಾನದಿಂದ ಮತ್ತೊಬ್ಬರ ಜೀವ ಉಳಿಸಲು ಜನ ಜಾಗೃತಿ

April 29, 2019

ಮೈಸೂರು: ಮನು ಷ್ಯನ ಪ್ರಮುಖ ಅಂಗವಾದ ಕಿಡ್ನಿಂiÀi ಆರೋಗ್ಯ ಮತ್ತು ಅದರ ನಿರ್ವಹಣೆ ಕುರಿತಂತೆ ಭಾನುವಾರ ಮೈಸೂರಿನ ಗಾನಭಾರತಿ ಸಭಾಂಗಣದಲ್ಲಿ ಮೈಸೂರು ಅಪೋಲೋ ಬಿಜಿಎಸ್ ಆಸ್ಪತ್ರೆ `ಪುನರ್ಜನ್ಮ’ ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಿತ್ತು.

ಡಯಾಲಿಸಿಸ್ ಹಾಗೂ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವವರು ಸೇರಿದಂತೆ ಸಕ್ಕರೆ ರೋಗದಿಂದ ಬಳಲುತ್ತಿರುವ 200ಕ್ಕೂ ಹೆಚ್ಚು ಮಂದಿ ಸಂವಾದದಲ್ಲಿ ಪಾಲ್ಗೊಂ ಡಿದ್ದರು. ಸಕ್ಕರೆ ಕಾಯಿಲೆ, ರಕ್ತದೊತ್ತಡ ಮತ್ತು ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿರು ವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ಆತಂಕಕಾರಿ ವಿಚಾರವನ್ನು ಅಪೋಲೋ ಆಸ್ಪತ್ರೆ ವೈದ್ಯರು ಮುಂದಿಟ್ಟರು. ಅಂಗಾಂಗ ದಾನದ ಮೂಲಕ ಮತ್ತೊಬ್ಬರ ಜೀವ ಉಳಿಸುವ ಕುರಿತು ಜನ ಜಾಗೃತಿ ಮೂಡಿಸಿದರು.

ಅಪೋಲೋ ಆಸ್ಪತ್ರೆಯ ಕಿಡ್ನಿ ತಜ್ಞ ಡಾ.ಪ್ರವೀಣ್ ಚಂದ್ರಶೇಖರ್ ಈ ಸಂದರ್ಭ ದಲ್ಲಿ ಮಾತನಾಡಿ, ಸಕ್ಕರೆ ಕಾಯಿಲೆ, ರಕ್ತದೊತ್ತಡಗಳಿಗೆ ಸೂಕ್ತ ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ಮಾಡಿದರೆ ಅದರಿಂದ ಕಿಡ್ನಿಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕಿಡ್ನಿಯ ಆರೋಗ್ಯದ ಬಗ್ಗೆ ಆರಂಭದ ಲ್ಲಿಯೇ ಜಾಗ್ರತೆ ವಹಿಸದಿದ್ದರೆ ಅದರಿಂದ ಅಡ್ಡ ಪರಿಣಾಮಗಳುಂಟಾಗುತ್ತವೆ. ಹೀಗಾಗಿ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳ ಬೇಕು ಎಂದು ಹೇಳಿದರು.

ಆಸ್ಪತ್ರೆಯ ಉಪಾಧ್ಯಕ್ಷ ಹಾಗೂ ಆಡ ಳಿತ ಮಂಡಳಿ ಮುಖ್ಯಸ್ಥ ಎನ್.ಜಿ.ಭರತೀಶ ರೆಡ್ಡಿ ಅವರು, ಅಪೋಲೋ ಆಸ್ಪತ್ರೆಯ ವೈದ್ಯರು 2003ರಿಂದಲೂ ಕಿಡ್ನಿ ಕಸಿ ನಡೆಸುತ್ತಿದ್ದು, ಇದಕ್ಕೆ ಒಳಗಾದ ಕುಟುಂಬಗಳ ಮುಖದ ಮೇಲೆ ನಗು ಅರಳುವಂತೆ ಮಾಡಿದ್ದಾರೆ. ಕಿಡ್ನಿ ಕಸಿ ಯಲ್ಲಿ ರಾಜ್ಯದಲ್ಲಿಯೇ ಮೈಸೂರು ಅಪೋಲೋ ಆಸ್ಪತ್ರೆ 5ನೇ ಸ್ಥಾನದಲ್ಲಿದೆ. ಹೆಚ್ಚು ಹೆಚ್ಚು ಜನರು ಅಂಗಾಂಗ ಕಸಿ ಮಾಡಿಸಿ, ಇನ್ನೊಂದು ಜೀವ ಉಳಿಸಲು ಮುಂದೆ ಬರಬೇಕು. ಅದಕ್ಕೆ ಹೆಸರು ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆಸ್ಪತ್ರೆಯ ಹಿರಿಯ ನೆಫ್ರಾಲಜಿಸ್ಟ್ ಡಾ.ಶ್ರೀನಿವಾಸ ನಲ್ಲೂರ್, ಡಾ.ರಾಘ ವೇಂದ್ರ, ಕಿಡ್ನಿ ಕಸಿ ಸಂಯೋಜಕಿ ಡಾ.ಸುಧಾ ರಾಣಿ, ಆಸ್ಪತ್ರೆಯ ಅರೋಗ್ಯ ಸೇವೆಗಳ ವಿಭಾಗದ ವ್ಯವಸ್ಥಾಪಕ ಸಿ.ಬಿ.ದಕ್ಷ ಇನ್ನಿತರರು ಉಪಸ್ಥಿತರಿದ್ದರು.

Translate »