ಅನಾಥ ಮಗು ಪತ್ತೆ
ಕೊಡಗು

ಅನಾಥ ಮಗು ಪತ್ತೆ

May 27, 2018

ಕುಶಾಲನಗರ: ಸಮೀಪದ ಮುಳ್ಳುಸೋಗೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಅನಾಥ ಗಂಡು ಮಗುವೊಂದು ಪತ್ತೆಯಾಗಿದೆ. ವರಸುದಾರರು ರಾತ್ರಿ ವೇಳೆ ಯಾರು ಇಲ್ಲದ ಸಮಯದಲ್ಲಿ ರಸ್ತೆ ಪಕ್ಕದಲ್ಲಿ ಮಲಗಿಸಿ ಹೋಗಿದ್ದಾರೆ. ಟೌನ್ ಕಡೆಗೆ ಹೋಗುತ್ತಿದ್ದ ಗ್ರಾಪಂ ಮಾಜಿ ಸದಸ್ಯ ಗೋವಿಂದರಾಜ್ ಮಗುವಿನ ಅಳು ಕೇಳಿಸಿ ಸ್ಥಳಕ್ಕೆ ಹೋಗಿ ನೋಡಿದಾಗ ಮಗು ಪತ್ತೆಯಾಗಿದೆ. ಕೂಡಲೇ ಮಗವುವನ್ನು ರಕ್ಷಣೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು. ಈ ಮಗು ಯಾರಿಗೆ ಸೇರಿದೆ ಎಂಬುದು ತಿಳಿಯದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಗು ವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ನೀಡಿ ನಂತರ ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.

Translate »