ಮೈಸೂರು: ನಿಗದಿಗಿಂತ ಹೆಚ್ಚು ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ವಿರುದ್ಧ ಸಂಚಾರ ಪೊಲೀಸರು ಇಂದಿನಿಂದ ವಿಶೇಷ ಕಾರ್ಯಾಚರಣೆ ಆರಂ ಭಿಸಿದ್ದಾರೆ. ವಾಹನಗಳ ಸ್ಥಿತಿ, ಚಾಲಕರ ಕಾರ್ಯಕ್ಷಮತೆ, ದಾಖಲಾತಿ ಹಾಗೂ ಸಾಮ ಥ್ರ್ಯಕ್ಕೆ ತಕ್ಕಂತೆ ಪ್ರಯಾಣಿಕರು ಹಾಗೂ ಶಾಲಾ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆಯೇ ಎಂಬು ದನ್ನು ಪರಿಶೀಲಿಸಿ, ಸುರಕ್ಷಿತ ಸಂಚಾರ ವ್ಯವಸ್ಥೆ ಜಾರಿಗೊಳಿಸಬೇಕೆಂಬ ಸುಪ್ರಿಂ ಕೋರ್ಟ್ ಆದೇ ಶದ ಹಿನ್ನೆಲೆಯಲ್ಲಿ ಮೈಸೂರು ಸಂಚಾರ ಪೊಲೀ ಸರು ವಿಶೇಷ ತಪಾಸಣಾ ಕಾರ್ಯಾಚರಣೆ ಯನ್ನು ಆರಂಭಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ನಿರ್ದೇಶನದಂತೆ, ಡಿಸಿಪಿ ಎಂ.ಮುತ್ತುರಾಜ್ ಮಾರ್ಗ ದರ್ಶನದಲ್ಲಿ ಸಂಚಾರ ಎಸಿಪಿ ಜಿ.ಎನ್.ಮೋಹನ್ ನೇತೃತ್ವದಲ್ಲಿ ಎಲ್ಲಾ ಸಂಚಾರ ಠಾಣೆಗಳ ಇನ್‍ಸ್ಪೆಕ್ಟರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಎಲ್ಲೆಡೆ ಶಾಲಾ-ಕಾಲೇಜುಗಳು ಆರಂಭ ವಾಗಿರುವುದರಿಂದ ಮೈಸೂರು ನಗರದಾದ್ಯಂತ ಆಟೋ, ಮಾರುತಿ ವ್ಯಾನ್, ಬಸ್ ಹಾಗೂ ಮಿನಿ ಬಸ್ಸುಗಳಲ್ಲಿ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಸಾಗಿಸಲಾಗುತ್ತಿದೆ.
ಶನಿವಾರವಾದ ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಶಾಲೆಗಳಿಗೆ ಮಕ್ಕಳನ್ನು ಕರೆ ದೊಯ್ಯುವ ವೇಳೆ ಆಯಾ ಸರಹದ್ದಿನ ಸಂಚಾರ ಠಾಣೆ ಪೊಲೀಸರು ಬೀದಿಗಿಳಿದು ತಪಾಸಣೆ ನಡೆಸಿದರು. ಆಟೋಗಳಲ್ಲಿ 8ರಿಂದ 10 ಮಕ್ಕಳು, ಮಾರುತಿ ಓಮ್ನಿಯಲ್ಲಿ 12ರಿಂದ 18 ಮಕ್ಕಳು, ಮಿನಿ ಬಸ್ಸುಗಳಲ್ಲಿ 30 ಮಕ್ಕಳನ್ನು ಮನಬಂದಂತೆ ತುಂಬಿ ಕೊಂಡು ಸಾಗಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಂತಹ ವಾಹನ ಚಾಲಕರ ವಿರುದ್ಧ ಮೊದಲ ದಿನವಾದ ಇಂದು 70ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಟೋ ಮತ್ತು ಓಮ್ನಿ ವ್ಯಾನುಗಳಲ್ಲಂತೂ ಆಸನ ಸಾಮಥ್ರ್ಯಕ್ಕಿಂತ ಅಧಿಕ ಮಕ್ಕಳನ್ನು ತುಂಬಿಕೊಂಡು ಶಾಲಾ ಮಕ್ಕಳ ಬ್ಯಾಗ್ ಗಳನ್ನು ಅವುಗಳಲ್ಲೇ ಹಾಕಿಕೊಂಡು ಹೋಗುವುದ ರಿಂದ ಆ ವಾಹನವೇ ಅಲ್ಲದೆ ರಸ್ತೆಯಲ್ಲಿ ಇನ್ನಿತರ ವಾಹನಗಳ ಸಂಚಾರಕ್ಕೂ ಅಡ್ಡಿಯಾಗಲಿದೆ. ಜೊತೆಗೆ ಹೆಚ್ಚು ಮಕ್ಕಳನ್ನು ತುಂಬಿಕೊಳ್ಳುವು ದರಿಂದ ಒಬ್ಬರ ಮೇಲೊಬ್ಬರು ಕೂತು ಮಕ್ಕ ಳಿಗೆ ಉಸಿರುಗಟ್ಟಿದ ವಾತಾವರಣದ ಬಗ್ಗೆಯೂ ಸಂಚಾರ ಪೊಲೀಸರು ಮನವರಿತು ಅಂತಹ ವಾಹನ ಚಾಲಕರ ವಿರುದ್ಧ ಕರ್ನಾಟಕ ಮೋಟಾರು ವಾಹನ ಕಾಯ್ದೆಯನ್ವಯ ಪ್ರಕರಣ ದಾಖಲಿಸು ತ್ತಿದ್ದಾರೆ. ಪ್ರಯಾಣಿಕರ ವಾಹನದಲ್ಲಿ ಮಾತ್ರ ಜನರನ್ನು ಕರೆದೊಯ್ಯಬೇಕೇ ಹೊರತು, ಸರಕು ಸಾಗಣೆ ವಾಹನದಲ್ಲಿ ಅಲ್ಲ ಎಂದು ಹೇಳಿ ನಿಯಮ ಉಲ್ಲಂಘಿಸಿದವರ ವಾಹನಗಳನ್ನು ಸಂಚಾರ ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಇತ್ತೀಚೆ ಗಷ್ಟೇ ಗಾರ್ಮೆಂಟ್ಸ್ ಫ್ಯಾಕ್ಟರಿ ಮಹಿಳಾ ಕಾರ್ಮಿ ಕರನ್ನು ಕರೆತರುತ್ತಿದ್ದ ಗೂಡ್ಸ್ ವಾಹನ ಮಗುಚಿ ಬಿದ್ಧ ಕಾರಣ 25ಕ್ಕೂ ಹೆಚ್ಚು ಮಂದಿ ಗಾಯ ಗೊಂಡ ಘಟನೆ ಕೂರ್ಗಳ್ಳಿ ಸಮೀಪ ಕೆಆರ್‍ಎಸ್ ರಸ್ತೆಯಲ್ಲಿ ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.