ಶ್ರವಣಬೆಳಗೊಳ: ಸಮೀಪದ ಜಿನನಾಥಪುರ ಗ್ರಾಮದ ಬಸದಿಯಲ್ಲಿ ಅಮೂಲ್ಯವಾದ ಪಂಚಲೋಹದ ಜಿನ ಮೂರ್ತಿಗಳ ಕಳವಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಚಂದ್ರಗಿರಿಯ ಚಿಕ್ಕಬೆಟ್ಟದ ಹಿಂಭಾಗ ದಲ್ಲಿರುವ ಜಿನನಾಥಪುರ ಗ್ರಾಮದಲ್ಲಿ ಗಂಗರ ಕಾಲದ ಪ್ರಾಚೀನ ಅರೆಗಲ್ ಪಾಶ್ರ್ವ ನಾಥ ಬಸದಿಯಲ್ಲಿ ಕಳ್ಳತನ ನಡೆದಿದ್ದು, ಕಿಟಕಿ ಕತ್ತರಿಸಿ ಒಳ ನುಗ್ಗಿರುವ ಕಳ್ಳರು ಜಿನಬಿಂಬಗಳನ್ನು ಕದ್ದೊಯ್ದಿದ್ದಾರೆ.
3 ಇಂಚಿನಿಂದ 24 ಇಂಚಿನವರೆಗಿನ ವಿವಿಧ ಅಳತೆಯ ಸುಮಾರು 22 ಮೂರ್ತಿ ಗಳ ಕಳ್ಳತನವಾಗಿದ್ದು, ಅವುಗಳಲ್ಲಿ ಪಾಶ್ರ್ವ ನಾಥಸ್ವಾಮಿ, ಅನಂತನಾಥಸ್ವಾಮಿ, 24 ತೀರ್ಥಂಕರರ ಪ್ರಭಾವಳಿಯಲ್ಲಿ ಇರಿಸಲಾ ಗಿದ್ದ ಸಹಸ್ರಕೂಟ ಜಿನಬಿಂಬ, ಯಕ್ಷ-ಯಕ್ಷಿಯರ ಬಿಂಬಗಳು, ಧರಣೇಂದ್ರ, ಪದ್ಮಾವತಿ, ಕೂಷ್ಮಾಂಡಿನಿ, ಜ್ವಾಲಾಮಾಲಿನಿ, ನವ ದೇವತಾ ಬಿಂಬಗಳು, ಕುದುರೆ ಬ್ರಹ್ಮ ದೇವರ ಬಿಂಬ, ನಂದೀಶ್ವರ ಬಿಂಬಗಳು ಸೇರಿವೆ. ನವರಾತ್ರಿ ದಸರಾ ಹಬ್ಬದ ಪ್ರಯುಕ್ತ ಜಿನಮೂರ್ತಿಗಳನ್ನು ಸ್ವಚ್ಛ ಗೊಳಿಸಿ ಇರಿಸಲಾಗಿತ್ತು ಎನ್ನಲಾಗಿದೆ.
ವಿಷಯ ತಿಳಿದ ತಕ್ಷಣ ಸಿಪಿಐ ಹೆಚ್. ಎಂ.ಕಾಂತರಾಜು, ಪಿಎಸೈ ಸಿ.ಎಂ. ತಿಮ್ಮ ಶೆಟ್ಟಿ ಮತ್ತು ತಂಡ ಮಾಹಿತಿಯನ್ನು ಕಲೆ ಹಾಕಿ ಹಾಸನ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದು, ಅಲ್ಲಿಂದ ತಕ್ಷಣ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲಿದರು. ಈ ಪ್ರಕರಣ ಸ್ಥಳೀಯ ಪೆÇೀಲೀಸ್ ಠಾಣೆಯಲ್ಲಿ ದಾಖಲಾಗಿದೆ.