ಮೈಸೂರು: ನವಿಲೊಂದು ರಸ್ತೆಗೆ ಅಡ್ಡಲಾಗಿ ಹಾರುವ ವೇಳೆ ದ್ವಿಚಕ್ರ ವಾಹನಕ್ಕೆ ಬಡಿದ ಪರಿಣಾಮ ಅದರಲ್ಲಿದ್ದ ಸವಾರರು ಗಾಯಗೊಂಡಿರುವ ಘಟನೆ ಮೈಸೂರಿನ ದಟ್ಟಗಳ್ಳಿ ಬಳಿ ರಿಂಗ್ ರಸ್ತೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಇಂದು ಬೆಳಿಗ್ಗೆ ಕನಕದಾಸ ನಗರದ ಕಡೆಯಿಂದ ಸ್ಕೂಟರ್‍ನಲ್ಲಿ ಯುವಕ ಮತ್ತು ಯುವತಿ ದಟ್ಟಗಳ್ಳಿಯ ಆರ್.ಟಿ.ನಗರದ ಕಡೆಗೆ ಹೋಗುತ್ತಿದ್ದಾಗ ರಿಂಗ್ ರಸ್ತೆಯ ಊರುಕಾತೇಶ್ವರಿ ದೇವಾಲಯದ ಬಳಿ ಬಲ ಭಾಗದಿಂದ ನವಿಲೊಂದು ರಸ್ತೆಗೆ ಅಡ್ಡಲಾಗಿ ಹಾರಿತು. ಹೀಗೆ ಹಾರಿದ ನವಿಲು ದ್ವಿಚಕ್ರ ವಾಹ ನಕ್ಕೆ ಬಡಿದಿದ್ದ ರಿಂದ ಅದರ ಮುಂದಿನ ಸವಾರ ಅಲ್ಲೇ ಬಿದ್ದರೆ, ಹಿಂಬದಿ ಕುಳಿತಿದ್ದ ಯುವತಿ ಸ್ಕೂಟರ್‍ನೊಂದಿಗೆ ತುಸು ದೂರ ಹೋಗಿ ಬಿದ್ದರು. ಪರಿಣಾಮ ಇಬ್ಬರಿಗೂ ತರಚಿದ ಗಾಯಗಳಾಗಿವೆ. ತಕ್ಷಣ ನವಿಲು ಕಣ್ಮರೆ ಯಾಯಿತು. ದಾರಿಹೋಕರು ಯುವಕ-ಯುವತಿಯನ್ನು ಮೇಲೆತ್ತಿ, ನಂತರ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆಯು ವಂತೆ ಸಲಹೆ ನೀಡಿ, ಕಳುಹಿಸಿದರು.
ಗಾಯಗೊಂಡವರು ಮೈಸೂರು ತಾಲೂಕು ಕೂರ್ಗಳ್ಳಿ ಪಕ್ಕದ ಧನಗಳ್ಳಿಯ ವರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.