ಹೆಚ್‍ಡಿಕೆಯಿಂದ ಜನಪರ ಬಜೆಟ್ ಮಂಡನೆ: ಶಾಸಕ ಲಿಂಗೇಶ್
ಹಾಸನ

ಹೆಚ್‍ಡಿಕೆಯಿಂದ ಜನಪರ ಬಜೆಟ್ ಮಂಡನೆ: ಶಾಸಕ ಲಿಂಗೇಶ್

February 11, 2019

ಬೇಲೂರು: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಬಜೆಟ್‍ನಲ್ಲಿ ರೈತ ಪರ ಹಾಗೂ ಎಲ್ಲ ಕ್ಷೇತ್ರಕ್ಕೂ ಆದ್ಯತೆ ನೀಡಿ, ರಾಜ್ಯದ ಎಲ್ಲ ಭಾಗಕ್ಕೂ ಅನ್ವಯವಾಗುವಂತೆ ಕಾರ್ಯಕ್ರಮ ನೀಡಿದ್ದಾರೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಗಳು ಈ ಬಾರಿ ಮಂಡಿಸಿದ ಬಜೆಟ್ ರಾಜ್ಯದ ಜನ ಸಾಮಾನ್ಯರ ಪರವಾಗಿದೆ. ಜಿಲ್ಲೆಗೆ ರೈಲ್ವೆ ಯೋಜನೆ, ರಾಷ್ಟ್ರೀಯ ಹೆದ್ದಾರಿ, ವಿಶ್ವವಿದ್ಯಾನಿಲಯ ಹಾಗೂ ವಿಮಾನ ನಿಲ್ದಾಣ ಸೇರಿದಂತೆ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.

ಜಿಲ್ಲೆಯಲ್ಲಿನ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಎತ್ತಿನ ಹೊಳೆ ಯೋಜನೆಯಲ್ಲಿ ಬೇಲೂರು, ಆಲೂರು, ಸಕಲೇಶಪುರ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದಾರೆ. ಹೋಬಳಿ ಗೊಂದರಂತೆ ಪಬ್ಲಿಕ್‍ಸ್ಕೂಲ್, ಸಮಾಜ ಕಲ್ಯಾಣ ಅಭಿವೃದ್ಧಿಗೂ ಒತ್ತು ನೀಡಿದ್ದಾರೆ ಎಂದು ತಿಳಿಸಿದರು.

ಜನರ ನೀರಿನ ಅವಶ್ಯಕತೆ ಅರಿತು ಆಡ ಳಿತ ಪಕ್ಷದ ಸದಸ್ಯನಾಗಿ ಸಣ್ಣ ನೀರಾವರಿ ಇಲಾಖೆಯಿಂದ ಬೃಹತ್ ನೀರಾವರಿ ಇಲಾಖೆಗೆ ಸೇರಿಸಿ, ಇಂಜಿನಿಯರ್‍ಗಳನ್ನು ಕಳುಹಿಸಿ ಸರ್ವೆ ನಡೆಸಿ ವರದಿ ನೀಡಲಾ ಗಿದೆ. ಲೋಕಸಭಾ ಸದಸ್ಯರಾದ ದೇವೇ ಗೌಡರು, ಉಸ್ತುವಾರಿ ಮಂತ್ರಿ ರೇವಣ್ಣ ಅವರ ಜೊತೆ ಮಾತನಾಡಿ ಮುಖ್ಯಮಂತ್ರಿ ಗಳಿಗೆ ಒತ್ತಡ ಹಾಕಿಸಲಾಗಿದೆ. ನಂತರ ಈ ಯೋಜನೆಗೆ ಒಪ್ಪಿಗೆ ಸಿಕ್ಕಿದ ನಂತರ ರಣಘಟ್ಟ ಯೋಜನೆಗೆ ಮುಖ್ಯಮಂತ್ರಿ ಗಳು 100 ಕೋಟಿ ರೂ.ಗಳನ್ನು ಮೀಸ ಲಿಟ್ಟು ಘೋಷಿಸಿರುವುದು ನಿಜಕ್ಕೂ ಸಂತೋಷವಾಗಿದೆ ಎಂದು ತಿಳಿಸಿದರು.

ಬೇಲೂರು ಪ್ರವಾಸೋದ್ಯಮ ಅಭಿ ವೃದ್ಧಿಗೆ ಈಗಾಗಲೇ ಹೆಚ್ಚಿನ ಅನುದಾನ ಬಂದಿದೆ. ಪಟ್ಟಣದ ಮುಖ್ಯರಸ್ತೆ, ಬೈಪಾಸ್ ರಸ್ತೆ ಹಾಗೂ ಹೊಳೇಬೀದಿ ರಸ್ತೆ ಅಭಿ ವೃದ್ಧಿ ಕೆಲಸ ಮಾಡಿಸಲಾಗುವುದು ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ. ಅನಂತಸುಬ್ಬರಾಯ ಮಾತ ನಾಡಿ, ಬಹು ಜನರ ಬೇಡಿಕೆಯಂತೆ ರಣಘಟ್ಟ ಯೋಜನೆ ಮೂಲಕ ನೀರು ಕೊಡುವುದಕ್ಕೆ ಈಗಾ ಗಲೇ ಶಾಸಕ ಲಿಂಗೇಶ್ ನೇತೃತ್ವದಲ್ಲಿ ಉತ್ತಮ ಫಲಿತಾಂಶ ಸಿಕ್ಕಿದೆ. ಅದೇ ರೀತಿ ಹೆಬ್ಬಾಳು ಭಾಗದ ಗ್ರಾಮಗಳಿಗೆ ನೀರು ಕೊಡುವುದಕ್ಕಾಗಿ ಚಿಕ್ಕಬ್ಯಾಡಗೆರೆ ಸಮೀಪ ದಿಂದ ನೀರು ಕೊಡುವುದಕ್ಕೆ ಮನವಿ ಮಾಡಿದ್ದಾರೆ. ಹಾಗೂ ತಾಲೂಕಿನ ಕೆರೆಗಳು, ಚೆಕ್‍ಡ್ಯಾಂಗಳ ಅಭಿವೃದ್ಧಿಗೂ ಹೆಚ್ಚು ಒತ್ತು ನೀಡಲಾಗಿದೆ. ಇದರಿಂದ ತಾಲೂಕಿನ ರೈತರು ಹಾಗೂ ಜನತೆಗೆ ಅನುಕೂಲವಾಗಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ತಾಪಂ ಅಧ್ಯಕ್ಷ ರಂಗೇಗೌಡ, ಮಾಜಿ ಮಂಡಲ ಪ್ರಧಾನ ಪ್ರೇಮಣ್ಣ ಇದ್ದರು.

Translate »