ಸಮಾಜಕ್ಕೆ ಯುವ ಸಮುದಾಯ ಶಕ್ತಿಯಾಗಲಿ: ವಿನೋದ್‍ಚಂದ್ರ
ಹಾಸನ

ಸಮಾಜಕ್ಕೆ ಯುವ ಸಮುದಾಯ ಶಕ್ತಿಯಾಗಲಿ: ವಿನೋದ್‍ಚಂದ್ರ

February 11, 2019

ಹಾಸನ: ಸಮಾಜದಲ್ಲಿ ಯುವ ಸಮುದಾಯ ಕೇವಲ ವ್ಯಕ್ತಿಗಳಾಗಿ ಬದು ಕದೇ ಶಕ್ತಿಯಾಗಿ ಬದುಕಬೇಕು ಎಂದು ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಹೇಳಿದರು.

ನಗರದ ಎಂ.ಜಿ.ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾ ಕೌಸ್ತುಭ ಕರಕುಶಲ ಕೇಂದ್ರದಿಂದ ಆಯೋಜಿಸಿದ್ದ `ಕಲಾ ಸೌರಭ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಕಲೆ ನಾಗರಿಕತೆಯ ಉಗಮಕ್ಕೆ ಕಾರಣವಾಗಿದೆ. ಕಲೆಯಿಂದ ನಮ್ಮ ಬೌದ್ಧಿಕ ವಿಕಾಸವಾಗುತ್ತದೆ. ವಿದ್ಯಾರ್ಥಿ ಗಳು ತಾಂತ್ರಿಕ ಕೋರ್ಸ್‍ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇನ್ನು ಮುಂದಿನ ಪೀಳಿಗೆಯವರಾದರೂ ಕಲೆಯತ್ತ ಹೆಚ್ಚು ಗಮನ ಹರಿಸಿ ವಿದ್ಯಾಭ್ಯಾಸದ ಜೊತೆಗೆ ಕಲೆಯನ್ನು ಜೀವನದ ಭಾಗವನ್ನಾಗಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರದ ನೆಹರು ಯುವ ಕೇಂದ್ರದ ಅನಂತಪ್ಪ ಮಾತನಾಡಿ, ಸರ್ಕಾರಿ ಉದ್ಯೋಗ ಗಳು ಕನಸಾಗುತ್ತಿರುವ ಇಂದಿನ ಕಾಲದಲ್ಲಿ ಯುವ ಜನತೆ ಸ್ವಯಂ ಉದ್ಯೋಗ ಸೃಷ್ಟಿಸಿ ಕೊಳ್ಳುವತ್ತ ಗಮನಹರಿಸಬೇಕು. ಇಂತಹ ಕಲೆಗಳು ಉತ್ತಮ ಬದುಕಿನ ನಿರ್ಮಾಣಕ್ಕೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಿಗೆ ಪಠ್ಯದಷ್ಟೇ ಒತ್ತು ನೀಡಬೇಕು ಎಂದು ಹೇಳಿದರು.

ಪತ್ರಕರ್ತೆ ಲೀಲಾವತಿ ಮಾತನಾಡಿ, ಕಲೆ ಎಲ್ಲರಿಗೂ ಸುಲಭವಾಗಿ ಒಲಿಯುವು ದಿಲ.್ಲ ಕಠಿಣ ಶ್ರಮದಿಂದ ಮಾತ್ರ ಅದು ಸಾಧ್ಯ. ಅದಕ್ಕಾಗಿ ಕಾಲೇಜುಗಳಲ್ಲಿಯೂ ಕಲೆಗಳ ಶಿಕ್ಷಕರ ನೇಮಕ ಕಡ್ಡಾಯ ವಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ಸುಕನ್ಯಾ ಮುಕುಂದ ಮಾತನಾಡಿದರು. ಕಾಲೇಜುÀ ಪ್ರಾಂಶುಪಾಲ ಪ್ರೊ.ಮೋಹನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ನಂತರ ಕಲಾವಿಧ ತ್ರಿಭುವನ್ ಹೆಚ್.ಎನ್.ಮಾರ್ಗ ದರ್ಶನದಲ್ಲಿ ಕಲಾ ಕೌಸ್ತುಭ ಕರಕುಶಲ ಕೇಂದ್ರದ ವಿದ್ಯಾರ್ಥಿಗಳಿಂದ ಕಲಾ ಪ್ರದರ್ಶಿಸಲಾಯಿತು. ಈ ವೇಳೆ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಎಸ್‍ಡಿಎಂ ಕಾಲೇಜಿನ ಶರೀರ ರಚನಾಶಾಸ್ತ್ರದ ವೈದ್ಯೆ ಡಾ.ಉಮಾ ಗೋಪಾಲ್ ಹಾಜರಿದ್ದರು.

Translate »