ಸಮಾಜದ ಅಭಿವೃದ್ಧಿಗೆ ಸಂಘ-ಸಂಸ್ಥೆ, ಉತ್ತಮ ವ್ಯಕ್ತಿಗಳು ಅಗತ್ಯ
ಹಾಸನ

ಸಮಾಜದ ಅಭಿವೃದ್ಧಿಗೆ ಸಂಘ-ಸಂಸ್ಥೆ, ಉತ್ತಮ ವ್ಯಕ್ತಿಗಳು ಅಗತ್ಯ

February 11, 2019

ಅರಕಲಗೂಡು: ಬಿತ್ತಿದ ಬೀಜಕ್ಕೆ ನೀರು ಹೇಗೆ ಅವಶ್ಯವೋ ಹಾಗೂ ಧರ್ಮಕ್ಕೆ ನೀತಿ ಅಷ್ಟೇ ಅವಶ್ಯಕತೆ ಇದ್ದು, ಸಂಘ ಸಂಸ್ಥೆಗಳಿಗೆ ಉತ್ತಮ ವ್ಯಕ್ತಿಗಳು ಹಾಗೂ ಸಮಾಜಕ್ಕೆ ಸಹಕಾರ ನೀಡುವ ಸಮಾಜ ಸೇವಕರು ಬೇಕು ಎಂದು ಸುಕ್ಷೇತ್ರ ಚುಲುಮೇ ಶ್ರೀ ಜಯದೇವಸ್ವಾಮೀಜಿ ಹೇಳಿದರು.

ಪಟ್ಟಣದ ಸುಕ್ಷೇತ್ರ ಚುಲುಮೇ ಮಠದ ಆವರಣದಲ್ಲಿರುವ ಶ್ರೀ ಶಿವದೇವ ಸಭಾಂ ಗಣದಲ್ಲಿ ನಡೆದ ತಾಲೂಕು ವಿಶ್ವ ವೀರ ಶೈವ-ಲಿಂಗಾಯಿತ ಒಕ್ಕೂಟದ ಪದಾಧಿ ಕಾರಿಗಳ ಆಯ್ಕೆ ಸಮಾರಂಭದಲ್ಲಿ ಮಾತ ನಾಡಿದ ಅವರು, ಹಿಂದೆ ಎಷ್ಟೋ ಸಮಾ ಜದ ಸಂಘ ಸಂಸ್ಥೆಗಳು ನಶಿಸಿ ಹೋಗಿವೆ. ಅದನ್ನು ಮೇಟ್ಟಿ ನಿಂತಿರುವ ನಿವೃತ್ತ ಅಧಿ ಕಾರಿ ಈ ಒಕ್ಕೂಟದ ಸಂಸ್ಥಾಪಕ ನಿವೃತ್ತ ಐಪಿಎಸ್ ಅಧಿಕಾರಿ ಬಿ.ಜಿ.ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಉತ್ತಮ ರೀತಿ ಸಂಘ ವನ್ನು ಮುಂದುವರೆಸಿಕೊಂಡು ಹೋಗಿ ಎಂದು ಆರ್ಶಿವಾದಿಸಿದರು.

ಬಸವಪಟ್ಟಣ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಮಾತನಾಡಿ, ಸಂಘ ಸಂಸ್ಥೆಗಳು ನಡೆಸಲು ಅಷ್ಟು ಸುಲಭವಲ್ಲ. ಸಂಘಗಳು ನಡೆಸಲು ಸಮಾಜ ಸೇವೆ ಮಾಡುವಂತಹ ವ್ಯಕ್ತಿಗಳು ಮುಂದೆ ಬಂದು, ಸಮಾಜದ ಧರ್ಮ ಜಾಗೃತಿ. ಶಿಥಿಲ ದೇವ ಸ್ಥಾನಗಳ ಜೀರ್ಣೊದ್ಧಾರ. ಸಮಾಜದ ಎಲ್ಲಾ ಚಿಕ್ಕ ಮಕ್ಕಳಿಂದಲೇ ವೀರಶೈವ-ಲಿಂಗಾಯಿತ ಪದ್ಧತಿಯಂತೆ ಸಂಸ್ಕಾರದ ಶಿವದಿಕ್ಷೆ. ಲಿಂಗಧಾರಣೆ ಮಾಡಿಸಿ ಗುರು ಹಿರಿಯರಲ್ಲಿ ದೇವರಲ್ಲಿ ಭಕ್ತಿ ಮಾರ್ಗ ದಿಂದ ನಡೆಯಲು ಸಮಾಜ ಬಾಂಧವರು ಮಕ್ಕಳಲ್ಲಿ ಪ್ರಜ್ಞೆ ಬೆಳಸಬೇಕಾಗಿದೆ ಎಂದು ಸಲಹೆ ನೀಡಿದರು.

ವಿಶ್ವ ವೀರಶೈವ-ಲಿಂಗಾಯಿತ ಒಕ್ಕೂ ಟದ ರಾಜ್ಯಾಧ್ಯಕ್ಷ ಹಾಗೂ ಸಂಸ್ಥಾಪಕ ನಿವೃತ್ತ ಐಎಎಸ್ ಬಿ.ಜಿ. ಜ್ಯೋತಿಪ್ರಕಾಶ್ ಮಿರ್ಜಿ ಮಾತನಾಡಿ, ಅರಕಲಗೂಡು ತಾಲೂಕಿನಲ್ಲಿ ಸುಮಾರು 30 ಸಾವಿರ ದಿಂದ 32 ಸಾವಿರ ವೀರಶೈವ-ಲಿಂಗಾ ಯಿತ ಜನಸಂಖ್ಯೆ ಇದೆ. ಜಿಲ್ಲೆಯಲ್ಲಿ ಸುಮಾರು 4 ಲಕ್ಷ ವೀರಶೈವ-ಲಿಂಗಾ ಯಿತ ಜನಸಂಖ್ಯೆ ಇದೆ. ಈ ಬಾರಿ ಲೋಕ ಸಭಾ ಮತ್ತು ವಿಧಾನಸಭಾ ಕ್ಷೇತ್ರದಿಂದ ವೀರಶೈವ-ಲಿಂಗಾಯಿತ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದರು.

ಜಿಲ್ಲೆಯ ಅರಕಲಗೂಡು, ಸಕಲೇಶ ಪುರ, ಅರಸಿಕೆರೆ ಹಾಸನ ಕ್ಷೇತ್ರವು ಸೇರಿ ದಂತೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸಮುದಾಯ ತಮ್ಮದೇಯಾದ ಶಕ್ತಿ ಸಾಮಥ್ರ್ಯ ಹೊಂದಿದೆ. ನಮ್ಮ ಸಂಘಟನೆ ಯಾವ ಪಕ್ಷದ ಯಾವ ಸಮಾಜದ ವಿರುದ್ಧವಾಗಿಲ್ಲ. ಬದಲಾಗಿ ವೀರಶೈವ-ಲಿಂಗಾಯಿತ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮತ್ತು ಸಂಘಟನೆ ಬಲಪಡಿಸಿ ಹೋರಾಟ ಮಾಡ ಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ವಿಶ್ವ ವೀರಶೈವ-ಲಿಂಗಾಯಿತ ಒಕ್ಕೂಟದ ಜಿಲ್ಲಾಧ್ಯಕ್ಷ ರಾಜಶೇಖರ್, ತಾಲೂಕು ಒಕ್ಕೂಟದ ಮುಖ್ಯಸ್ಥರಾದ ಮಾಗೋಡು ಬಸವರಾಜು, ಶಾಂತಮಲ್ಲಪ್ಪ, ಕೆ.ಎಂ. ಪ್ರಕಾಶ್, ಬಿ.ಆರ್.ಸತ್ಯಪ್ರಕಾಶ್, ತಾಲೂಕು ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆ ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ, ವಿಶ್ವ ವೀರಶೈವ-ಲಿಂಗಾಯಿತ ಒಕ್ಕೂಟದ ನೂತನ ಅಧ್ಯಕ್ಷ ದೊಡ್ಡ ಬೋಮ್ಮನಹಳ್ಳಿ ಸಿದ್ಧಲಿಂಗೇ ಶ್ವರ, ಪ್ರಧಾನ ಕಾರ್ಯದರ್ಶಿ ಹೆಗ್ಗಡಹಳ್ಳಿ ರುದ್ರಪ್ಪ, ಖಚಾಂಚಿ ವಕೀಲ ಎಂ.ಸಿ.ಜಗದೀಶ್, ಪ್ರಭುಕುಮಾರ್, ಹೇಮಂತ್, ಮಿರ್ಜಿ ಆಪ್ತ ಸಹಾಯಕ ಬಸವರಾಜು ಮುಂತಾ ದವರು ಭಾಗವಹಿಸಿದ್ದರು.

Translate »