ಪ್ರಾಮಾಣಿಕತೆಯೊಂದಿಗೆ ಪರಿಶ್ರಮವಿದ್ದರೆ ಸಾಧನೆ ಸಾಧ್ಯ
ಮೈಸೂರು

ಪ್ರಾಮಾಣಿಕತೆಯೊಂದಿಗೆ ಪರಿಶ್ರಮವಿದ್ದರೆ ಸಾಧನೆ ಸಾಧ್ಯ

April 4, 2019

ಮೈಸೂರು: ಮೈಸೂರು ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕøತಿಕ, ಕ್ರೀಡಾ ವೇದಿಕೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ ಸಮಾರಂಭ ವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಮಾತನಾಡುತ್ತಾ, ಗ್ರಾಮೀಣ ವಿದ್ಯಾರ್ಥಿನಿಯರಿಗೆ ವಿದ್ಯಾ ಭ್ಯಾಸ ಮತ್ತು ವಸತಿ ಸೌಕರ್ಯ ಕಲ್ಪಿಸು ತ್ತಿರುವ ನಟರಾಜ ಶಿಕ್ಷಣ ಸಂಸ್ಥೆಯು ಅತ್ಯುತ್ತಮ ಸಂಸ್ಥೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯಾಭ್ಯಾಸದ ಸಂದರ್ಭ ದಲ್ಲಿ ನಿರ್ದಿಷ್ಟ ಗುರಿಯಿಟ್ಟುಕೊಂಡು ಮುನ್ನಡೆದಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರಾಮಾಣಿಕತೆಯೊಂ ದಿಗೆ ಪರಿಶ್ರಮವು ಜೊತೆಗೂಡಿದಾಗ ಸಮಾಜದ ಅಭಿವೃದ್ಧಿಗೆ ನಮ್ಮ ಕೊಡುಗೆ ಯನ್ನು ನೀಡಲು ಸಾಧ್ಯವಾಗುತ್ತದೆ. ಶಿಕ್ಷ ಣದ ಜೊತೆಗೆ ಸಂಸ್ಕøತಿಯನ್ನು ಬೆಳೆಸಿಕೊಳ್ಳ ಬೇಕು. ನಮ್ಮ ನಡೆ-ನುಡಿ ಗೌರವಯುತ ವಾಗಿದ್ದಾಗ, ನಾವು ನಿರೀಕ್ಷಿಸದಿದ್ದರೂ ಉತ್ತಮ ಸ್ಥಾನಮಾನ ಸಮಾಜದಲ್ಲಿ ನಮಗೆ ದೊರಕುತ್ತದೆ. ಯುವ ಜನರು ತಮ್ಮ ಮನಸ್ಸನ್ನು ಸಮಾಜಮುಖಿ ಕಾರ್ಯಗಳತ್ತ ಗಮನ ಹರಿಸಿದಾಗ ಮಾತ್ರ ಸಮಾಜವು ಮುನ್ನಡೆಯಲು ಸಾಧ್ಯವಾಗುತ್ತದೆ ಎಂದರು.

ಸಮಾರೋಪ ಭಾಷಣ ಮಾಡಿದ ಕೆಪಿಎಸ್‍ಸಿ ಮಾಜಿ ಸದಸ್ಯ ಡಾ. ಬಿ.ಎಸ್. ಕೃಷ್ಣಪ್ರಸಾದ್, ಉದ್ಯೋಗ ಪಡೆಯಲು ಬಯಸುವ ಪ್ರತಿಯೊಬ್ಬರೂ ಪದವಿ ಹಂತ ವನ್ನು ಪೂರೈಸಿದರೆ ಉತ್ತಮ. ಅದರೊಂ ದಿಗೆ ಆಸಕ್ತಿ ಇರುವ ಸಾಂಸ್ಕøತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿಯೂ ಮುಂದುವರೆಯ ಬಹುದು. ಇತ್ತೀಚಿನ ದಿನಗಳಲ್ಲಿ ಭ್ರಷ್ಟ ವ್ಯವಸ್ಥೆ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟುವ ಶಕ್ತಿ ನಮ್ಮ ಯುವ ಜನಾಂಗದ ಕೈಯ್ಯಲ್ಲಿದೆ. ಹೀಗಾಗಿ ವಿದ್ಯಾರ್ಥಿ ದಿಸೆಯಲ್ಲಿಯೇ ಪ್ರಾಮಾಣಿಕತೆಯ ಗುಣಗಳನ್ನು ಬೆಳೆಸಿಕೊಳ್ಳ ಬೇಕು. ಪ್ರತಿಯೊಬ್ಬರೂ ಓದುವಾಗಲೇ ನಿರ್ದಿಷ್ಟವಾದ ಗುರಿಯನ್ನು ಇಟ್ಟು ಕೊಂಡು ಪ್ರಾಮಾಣಿಕ ಪ್ರಯತ್ನ ಮತ್ತು ಕಠಿಣ ಪರಿಶ್ರಮ ದಿಂದ ತಯಾರಿ ನಡೆಸಿದರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಸಾಧಿಸಬಹುದು. ಇಂದು ಸರ್ಕಾರಿ ಸೇವೆಗೆ ಬರುವವರಲ್ಲಿ ಪ್ರಾಮಾಣಿಕತೆ ಕಡಿಮೆ ಯಾಗುತ್ತಿರುವುದು ಬಹಳ ಬೇಸರವಾಗಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಸರ್ಕಾರಿ ಸೇವೆಗೆ ಸೇರುವ ಮೊದಲು ಪ್ರಾಮಾಣಿ ಕತೆಯನ್ನು ಬೆಳೆಸಿಕೊಂಡು, ಸಮಾಜಕ್ಕೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ವಿದ್ಯಾರ್ಥಿ ಗಳಿಗೆ ಕರೆ ನೀಡಿದರು. ಸಂಸ್ಥೆ ವಿಶೇಷಾಧಿ ಕಾರಿ ಪ್ರೊ. ಕೆ.ಸತ್ಯನಾರಾಯಣ ಮಾತ ನಾಡಿದರು. ವಿದ್ಯಾರ್ಥಿನಿಯರಿಗಾಗಿ ಭಕ್ತಿ ಗೀತೆ, ಜನಪದ ಗೀತೆ, ಭಾವಗೀತೆ, ಚಿತ್ರ ಗೀತೆ, ಸಮೂಹ ಗಾಯನ, ತರಕಾರಿಕೆತ್ತನೆ, ಪುಷ್ಪಾಲಂಕಾರ, ಕೇಶವಿನ್ಯಾಸ, ಏಕವ್ಯಕ್ತಿನೃತ್ಯ, ಆಶುಭಾಷಣ ಸ್ಪರ್ಧೆ, ನಾಟಕ, ಚರ್ಚಾ ಸ್ಪರ್ಧೆ, ಸಮೂಹ ನೃತ್ಯ, ಅಡುಗೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಇಂಗ್ಲೀಷ್ ಹಾಗೂ ಕನ್ನಡ ಪ್ರಬಂಧ ಸ್ಪರ್ಧೆಯನ್ನು ಹಮ್ಮಿ ಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಎಂ.ಶಾರದ, ನಿ.ಪ್ರ.ಸ್ವ. ಶ್ರೀ ಚಿದಾನಂದ ಮಹಾ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವನ್ನು ವಹಿಸಿದ್ದರು. ಉಪ ಪ್ರಾಂಶುಪಾಲ ಡಾ. ಜಿ.ಪ್ರಸಾದಮೂರ್ತಿ ಉಪಸ್ಥಿತರಿದ್ದರು.

Translate »