ಮೈಸೂರಿಗೆ ಮಲ್ಟಿ ಫಿಲಂ ಸ್ಟುಡಿಯೋ ನಿರ್ಮಾಣಕ್ಕೆ ಚಿಂತನೆ
ಮೈಸೂರು

ಮೈಸೂರಿಗೆ ಮಲ್ಟಿ ಫಿಲಂ ಸ್ಟುಡಿಯೋ ನಿರ್ಮಾಣಕ್ಕೆ ಚಿಂತನೆ

September 16, 2019

ಮೈಸೂರು,ಸೆ.15(ಆರ್‍ಕೆಬಿ)-ಮೈಸೂರಿನಲ್ಲಿ ಮಲ್ಟಿ ಸ್ಟುಡಿಯೋ, ಲಾಜಿಸ್ಟಿಕ್ ಪಾರ್ಕ್ ತರಲು ಚಿಂತಿಸಲಾಗಿದ್ದು, ಅದಕ್ಕಾಗಿ ಹೈದ್ರಾ ಬಾದ್‍ನಲ್ಲಿರುವ ರಾಮೋಜಿರಾವ್ ಫಿಲಂ ಸಿಟಿಯನ್ನು ವೀಕ್ಷಿಸಿ ಬರಲಾಗಿದೆ. ಮೈಸೂರಿನಲ್ಲಿಯೂ ಅಂತಹ ಮಲ್ಟಿ ಸ್ಟುಡಿಯೋ, ಲಾಜಿಸ್ಟಿಕ್ ಪಾರ್ಕ್ ನಿರ್ಮಿಸಿದರೆ ಸಾಕಷ್ಟು ಸಿನಿಮಾ ಶೂಟಿಂಗ್‍ಗಳು ಇನ್ನಿತರೆ ಚಟು ವಟಿಕೆಗಳು ಹೆಚ್ಚುತ್ತವೆ. ಮೈಸೂರು ಪ್ರವಾಸೋ ದ್ಯಮದಲ್ಲಿ ಇನ್ನಷ್ಟು ಹೆಸರು ಮಾಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮೈಸೂರಿನ ಎನ್‍ಐಇ ಕಾಲೇಜಿನ ಡೈಮಂಡ್ ಜುಬಿಲಿ ಕ್ರೀಡಾಂಗಣದಲ್ಲಿ ಭಾನುವಾರ ಹುಲಗಾದ್ರಿ ಟ್ರಸ್ಟ್ ಆಯೋಜಿ ಸಿದ್ದ ಟಿ.ವಿ.ಅಲಮೇಲು ಸ್ಮಾರಕ ವಿದ್ಯಾರ್ಥಿವೇತನ ವಿತ ರಣಾ ಸಮಾರಂಭದಲ್ಲಿ ಮಾತನಾಡಿದರು. ಮೈಸೂರಿಗೆ 35 ಲಕ್ಷ ಪ್ರವಾಸಿಗರು ಬರುತ್ತಿದ್ದಾರೆ. ಇದು ಇನ್ನೂ ಹೆಚ್ಚುತ್ತದೆ. ಪ್ರವಾಸಿ ಗರು ಒಂದೇ ದಿನ ಇಲ್ಲಿನ ಸುತ್ತಮುತ್ತಲಿನ ಸ್ಥಳಗಳನ್ನು ವೀಕ್ಷಿಸಿ ಅಂದೇ ವಾಪಸು ಹೋಗುತ್ತಾರೆ. ಹಾಗಾಗುವ ಬದಲು ಬಂದ ಪ್ರವಾಸಿಗರು ಇನ್ನೂ ಒಂದೆರಡು ದಿನ ಮೈಸೂರಿನಲ್ಲೇ ಇರುವಂತಾ ದರೆ ಇಲ್ಲಿ ವ್ಯಾಪಾರ, ವಹಿವಾಟು ಹೆಚ್ಚುತ್ತದೆ. ಹಾಗಾಗಿ ಮೈಸೂ ರಿನಲ್ಲಿ ಪ್ರವಾಸಿಗರನ್ನು ಉಳಿಯುವಂತೆ ಮಾಡಲು ಯೋಜನೆ ಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ಯುವಜನರಿಗೆ ಪಿ.ವಿ.ಸಿಂಧೂ ಸ್ಫೂರ್ತಿ:  ಯುವಜನರಿಗಾಗಿಯೇ ಆಚರಿಸುವ ಯುವ ದಸರಾಗೆ ಖ್ಯಾತ ಯುವ ಕ್ರೀಡಾ ಪಟುಗಳನ್ನು ಕರೆಯುವ ಉದ್ಧೇಶದಿಂದ ಈ ಬಾರಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿ ಯನ್ ಪಿ.ವಿ.ಸಿಂಧೂ ಅವರನ್ನು ಯುವ ದಸರಾ ಮತ್ತು ದಸರಾ ಕ್ರೀಡಾಕೂಟದ ಉದ್ಘಾಟನೆಗೆ ಆಹ್ವಾನಿಸಲಾಗಿದೆ ಎಂದರು.

ಪ್ರತೀ ವರ್ಷ ಯುವ ದಸರಾ ಉದ್ಘಾಟನೆಗೆ ಸಿನಿಮಾ ನಟರನ್ನು ಕರೆಸುವುದು ವಾಡಿಕೆ. ಆದರೆ ಯುವ ದಸರಾ ಎಂದರೆ ಯುವ ಜನರಿಗಾಗಿಯೇ ನಡೆಸುವಂತದ್ದು. ಹಾಗಾಗಿ ಸಿನಿಮಾ ನಟರನ್ನು ಕರೆಯುವ ಬದಲಿಗೆ ಯುವಕರಿಗೆ ಸ್ಫೂರ್ತಿ ತುಂಬುವ ಉದ್ದೇಶ ದಿಂದ ಈ ಬಾರಿ ವಿಶ್ವ ಬ್ಯಾಡ್ಮಿಂ ಟನ್ ಚಾಂಪಿಯನ್ ಪಿ.ವಿ. ಸಿಂಧೂ ಅವರನ್ನು ಆಹ್ವಾನಿಸಲಾಗಿದೆ. ಪ್ರತೀ ವರ್ಷ 180 ಕಾಲೇಜುಗಳು ಭಾಗವಹಿಸುತ್ತಿದ್ದ ಯುವ ದಸರಾದಲ್ಲಿ ಈ ಬಾರಿ 278 ಕಾಲೇಜುಗಳು ಭಾಗವಹಿಸಿರುವುದು ಇದರ ಜನಪ್ರಿಯತೆ ವರ್ಷಾ ವರ್ಷ ಹೆಚ್ಚುತ್ತಿದೆ ಎಂದು ತಿಳಿಸಿದರು.

ಮೈಸೂರು ಪ್ರವಾಸೋದ್ಯಮಕ್ಕೆ ರಾಜಕಾರಣಿಗಳ ಕೊಡುಗೆ ಶೂನ್ಯ: ಮೈಸೂರು ಪ್ರವಾಸೋದ್ಯಮಕ್ಕೆ ರಾಜಮನೆತನವರು ನೀಡಿದ ಕೊಡುಗೆ ಬಿಟ್ಟರೆ ಕಳೆದ 70 ವರ್ಷಗಳ ಅವಧಿಯಲ್ಲಿ ಯಾವ ರಾಜಕಾರಣಿಗಳು ಮೈಸೂರು ಪ್ರವಾಸೋದ್ಯಮಕ್ಕೆ ಯಾವ ಕೊಡುಗೆಯನ್ನು ಕೊಟ್ಟಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್, ಜಯ ಚಾಮರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಮೈಸೂರು ಪ್ರವಾಸೋದ್ಯಮಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಸತ್ತವರನ್ನೆಲ್ಲಾ ತುಂಬಲಾರದ ನಷ್ಟ ಎನ್ನುತ್ತೇವೆ. ಆದರೆ ಸರ್ ಎಂ.ವಿಶ್ವೇಶ್ವರಯ್ಯರ ನಿಧನ ದಿಂದ ನಿಜವಾಗಿ ತುಂಬಲಾರದ ನಷ್ಟವಾಗಿದೆ. ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಅವರನ್ನು ಪೂಜ್ಯ ಭಾವನೆಯಿಂದ ಕಾಣಬೇಕಾಗಿದೆ ಎಂದು ಪ್ರತಾಪಸಿಂಹ ಹೇಳಿದರು.

ಸಮಾರಂಭಕ್ಕೆ ಚಾಲನೆ ನೀಡಿದ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕಿ ಡಾ. ಗೀತಾ ಕೆ.ಅವಧಾನಿ ಮಾತನಾಡಿ, ಮೈಸೂ ರಿನವರಾದ ಅಮೆರಿಕಾದ ವೈದ್ಯೆ, ದಾನಿ ಡಾ.ಮೀರಾ ವಿ.ನಾಥನ್ ಅವರು ಮೈಸೂರಿನ ನೂರಾರು ಮಂದಿ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ವಿದ್ಯಾರ್ಥಿವೇತನ ನೀಡುತ್ತಾ ಬಂದಿದ್ದಾರೆ. ಇಂದು ಸುಮಾರು 600 ಮಂದಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಅವರ ಬಾಳಿಗೆ ಬೆಳಕು ನೀಡುವ ಕೆಲಸ ಮಾಡುತ್ತಿದ್ದಾರೆ. ಇದು ವಿದ್ಯಾರ್ಥಿಗಳ ಬಗ್ಗೆ ಇರುವ ಕಳಕಳಿ ತೋರಿಸುತ್ತದೆ ಎಂದರು. ವಿದ್ಯಾರ್ಥಿದೆಸೆಯಲ್ಲಿ ಅತ್ಯಂತ ಕಷ್ಟ ಅನು ಭವಿಸಿದವರು. ಅಮೆರಿಕಾಕ್ಕೆ ಹೋಗಿ ದುಡಿದ ಹಣವನ್ನು ವಿದ್ಯಾರ್ಥಿಗಳ ಓದಿಗಾಗಿ ಸದ್ವಿನಿ ಯೋಗ ಮಾಡುತ್ತಾ ಬಂದಿದ್ದಾರೆ. ಅವರಿಂದ ವಿದ್ಯಾರ್ಥಿವೇತನ ಪಡೆದವರು ಕಠಿಣ ಪರಿ ಶ್ರಮದಿಂದ ಓದಿ ಉನ್ನತ ಹುದ್ದೆಗೇರುವ ಜೊತೆಗೆ ಹತ್ತಾರು ಜನರಿಗೆ ನೆರವಿನ ಹಸ್ತ ಚಾಚುವಂತಾ ಗಬೇಕು ಎಂದು ಆಶಿಸಿದರು. ಸಮಾರಂಭದಲ್ಲಿ ಅಮೆರಿಕಾದ ವೈದ್ಯೆ ಮೀರಾ ವಿ.ನಾಥನ್, ಆದರ್ಶ ಸೇವಾ ಟ್ರಸ್ಟ್‍ನ ಅಧ್ಯಕ್ಷ ಜಿ.ಆರ್.ನಾಗರಾಜ, ಗೌರವ ಕಾರ್ಯ ದರ್ಶಿ ಆರ್.ರಾಮಕೃಷ್ಣ, ಪ್ರೊ.ಕೆ.ಎಸ್.ಬಸವರಾಜು, ಎಸ್.ವೇಣುಗೋಪಾಲ್ ಇತರರಿದ್ದರು.

 

Translate »