ಸಿಂಹ ಹೃದಯಿ ದೇಶಭಕ್ತರಿಗೆ ಮಾತ್ರ ವೀರ ಸಾವರ್ಕರ್ ನಾಯಕರಾಗಿ ಕಾಣುತ್ತಾರೆ
ಮೈಸೂರು

ಸಿಂಹ ಹೃದಯಿ ದೇಶಭಕ್ತರಿಗೆ ಮಾತ್ರ ವೀರ ಸಾವರ್ಕರ್ ನಾಯಕರಾಗಿ ಕಾಣುತ್ತಾರೆ

September 16, 2019

ಮೈಸೂರು,ಸೆ.15(ಎಸ್‍ಬಿಡಿ)- ಸಿಂಹ ಹೃದಯಿ ದೇಶಭಕ್ತರಿಗೆ ಮಾತ್ರ ವೀರ ಸಾವರ್ಕರ್ ನಾಯಕರಾಗಿ ಕಾಣುತ್ತಾರೆಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಿಸಿದರು.

ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್ಸ್-2015 ಸಹ ಯೋಗದಲ್ಲಿ ನಗರದ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ವಿಕ್ರಂ ಸಂಪತ್ ಅವರ `ಸಾವರ್ಕರ್: ಎಕೋಸ್ ಫ್ರಮ್ ಎ ಫರ್ಗಟನ್ ಪಾಸ್ಟ್’ ಪುಸ್ತಕ ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಮಹಾನ್ ದೇಶಭಕ್ತ, ಸಮಾಜ ಸುಧಾರಕ ವೀರ ಸಾವರ್ಕರ್ ಅವರು ಸಿಂಹ ಹೃದಯವುಳ್ಳ ಭಾರತೀ ಯರಿಗೆ ಮಾತ್ರ ನಾಯಕರಾಗಿ ಕಾಣುತ್ತಾರೆ. ಪಾಕಿ ಸ್ತಾನಕ್ಕೆ ಹೋಗಿ ಭಾರತದ ಬಗ್ಗೆ ಕ್ಷಮೆ ಕೇಳುವ, ಚುನಾವಣೆಯಲ್ಲಿ ಸೋಲಿನ ಭಯದಿಂದ ಸ್ವಕ್ಷೇತ್ರ ಬಿಟ್ಟು, ಕೇರಳದ ವೈನಾಡಿಗೆ ಪಲಾಯನ ಮಾಡು ವಂತ ವರಿಗೆ ಸಾವರ್‍ಕರ್ ನಾಯಕ ಎನಿಸುವುದಿಲ್ಲ. ಹಿಂದೂ ಸಂಘಟನೆ ಜೊತೆಗೆ ವಿದೇಶಿ ನೀತಿ, ಇಸ್ರೇಲ್ ನೊಂದಿಗಿನ ಬಾಂಧವ್ಯದ ಬಗ್ಗೆ ಆಗಲೇ ಸಾವರ್ಕರ್ ಹೇಳಿದ್ದರು. ಆದರೆ ನಮ್ಮ ದೇಶ ಆಳಿದವರು ಇಸ್ರೇಲ್ ಜೊತೆಗೆ ಉತ್ತಮ ಸಂಬಂಧ ಹೊಂದಿ ದರೆ ಬೆಂಗಳೂರಿನ ಶಿವಾಜಿನಗರ, ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ಮತ ಗಳು ಕೈತಪ್ಪುತ್ತವೆ ಎಂಬ ಸಣ್ಣತನದ ಚಿಂತನೆ ಮಾಡಿದ್ದರೆಂದು ಹೇಳಿದರು.

ದೇಶಭಕ್ತ ಸಾವರ್ಕರ್ ಅವರು ಅಂಡಮಾನ್-ನಿಕೋಬಾರ್‍ನ ಸೆಲ್ಯೂಲರ್ ಜೈಲಿನಲ್ಲಿದ್ದಾಗ ಪಂಡಿತ್ ನೆಹರೂ ಅವರು ಸುಖಕರ ಜೀವನದೊಂದಿಗೆ `ಡಿಸ್ಕವರಿ ಆಫ್ ಇಂಡಿಯಾ’ ಆರಂಭಿಸಿದ್ದರು. ರಾಜ ಕೀಯ ಪರಿಸ್ಥಿತಿಯಿಂದ ಇತಿಹಾಸದಲ್ಲಿ ಸಾವರ್ಕರ್ ಅವರಿಗೆ ಅನ್ಯಾಯವಾಗಿದೆ. ರಾಜಕೀಯ ಜೀತ ಗಾರಿಕೆ ಮಾಡುತ್ತಿದ್ದ ಬರಹಗಾರರು ವೀರ ಸಾವ ರ್ಕರ್ ಬಗ್ಗೆ ಇತಿಹಾಸದಲ್ಲಿ ದಾಖಲಿಸಿಲ್ಲ. ದೇಶಭಕ್ತ, ಕ್ರಾಂತಿಕಾರಿ, ಸಮಾಜ ಸುಧಾರಕರಾಗಿದ್ದ ಸಾವ ರ್ಕರ್, ಜೈಲಿನ ಗೋಡೆಗಳ ಮೇಲೆ ತಮ್ಮ ಉಗುರಿ ನಿಂದ ದೇಶಭಕ್ತಿ ಕವಿತೆಗಳನ್ನು ಬರೆದಿದ್ದರು. ಅದನ್ನು ಅಳಿಸಿ ಹಾಕಿದರೂ ಹೊರ ಬಂದ ನಂತರ ಸ್ಮರಿಸಿಕೊಂಡು ಸುಮಾರು 10 ಸಾವಿರ ಕವಿತೆ ಬರೆದಿದ್ದಾರೆ. ಅಂತರ್ಜಾತಿ ವಿವಾಹ, ಸಹಪಂಕ್ತಿ ಭೋಜನ ಪ್ರತಿಪಾದಿ ಸುವುದರ ಜೊತೆಗೆ ಹಿಂದೂಗಳು `ಸಪ್ತಬಂಧ’ಗಳಿಂದ ಹೊರಬಂದು ಸಂಘ ಟಿತರಾಗ ಬೇಕೆಂದು ಸಂದೇಶ ಸಾರಿದ್ದರು. ದೇಶದ ಆಚೆಗೂ ಹಿಂದೂ ಸಂಘಟನೆ ವಿಸ್ತಾರವಾಗಬೇಕೆಂಬ ಆಶಯ ಹೊಂದಿದ್ದರು. ಅದಕ್ಕೆ ಪೂರಕವೆಂಬಂತೆ ಪ್ರಧಾನಿ ಮೋದಿ ಅವರು ಈಗ ಇಸ್ರೇಲ್ ಜತೆ ಉತ್ತಮ ಬಾಂಧವ್ಯ ಕಲ್ಪಿಸಲು ಯತ್ನಿಸುತ್ತಿದ್ದಾರೆ. ಅಮೇರಿಕಾದಲ್ಲಿ ಸುಮಾರು 50 ಸಾವಿರ ಭಾರತೀಯರಿದ್ದ ಕಾರ್ಯಕ್ರಮದಲ್ಲಿ ಮೋದಿ ಅವರು ಭಾಗಿಯಾದಾಗ ಅಲ್ಲಿನ ಅಧ್ಯಕ್ಷರು `ನಾವೂ ಪಾಲ್ಗೊಳ್ಳಬಹುದೇ’ ಎಂದು ಕೇಳಿದನ್ನು ಸ್ಮರಿಸಬೇಕು ಎಂದರು.

ಅಸ್ಪøಶ್ಯತೆಯನ್ನು ಸಾವರ್ಕರ್ ಕಟುವಾಗಿ ವಿರೋಧಿಸಿದ್ದರು. ಎಲ್ಲರ ದೇಹದಲ್ಲೂ ಹರಿಯುತ್ತಿರುವುದು ಒಂದೇ ರಕ್ತ ಎಂಬ ಜಾಗೃತಿ ಮೂಡಿಸಿದ್ದರು. ಅಂಬೇಡ್ಕರ್ ಅವರಿಗೆ ಸಮರ್ಥವಾಗಿ ಸಾಥ್ ನೀಡಿದ ರಾಜಕೀಯ ನಾಯಕರೆಂದರೆ ಸಾವರ್ಕರ್ ಮಾತ್ರ. ಅಂಬೇಡ್ಕರ್ ಅವರನ್ನು ಅಸ್ಪøಶ್ಯವಾಗಿ ಕಾಣುವುದು ಯಾವ ನ್ಯಾಯ ಎಂದು ಸಮಾಜವನ್ನು ಪ್ರಶ್ನಿಸಿದ್ದರು. ಕವಿ ಹೃದಯ ಇಟ್ಟುಕೊಂಡು ಕ್ರಾಂತಿಕಾರಿಯಾದ ಸಾವರ್ಕರ್ ಯಂಗ್ ಇಂಡಿಯಾದ ಬಗ್ಗೆ ಹಿಂದೆಯೇ ಮುನ್ನುಡಿ ಬರೆದಿದ್ದಾರೆ. ಯುವ ಭಾರತೀಯರು ಸ್ವಾಮಿ ವಿವೇಕಾನಂದ, ಡಾ.ಬಿ.ಆರ್.ಅಂಬೇಡ್ಕರ್, ಅರವಿಂದ ಘೋಷ್ ಹಾಗೂ ಸಾರ್ವಕರ್ ಅವರ ಬಗ್ಗೆ ಸರಿಯಾಗಿ ಓದಿ ತಿಳಿದುಕೊಳ್ಳುವ ಅಗತ್ಯವಿದೆ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜಕೀಯ ನಾಯಕರ ಓಲೈಕೆಗಾಗಿ ಇತಿಹಾಸ ರಚಿಸುತ್ತಿದ್ದ ಕಾರಣದಿಂದ ನೈಜ ಚರಿತ್ರೆ ತಿಳಿಯುತ್ತಿರಲಿಲ್ಲ. ಎಸ್.ಎಲ್.ಭೈರಪ್ಪನವರ `ಆವರಣ’ ಕಾದಂಬರಿಯಲ್ಲಿ ಸಂಗತಿಗಳ ಹಿನ್ನೆಲೆ ನೀಡಿದ್ದಾರೆ. ಈ ರೀತಿ ಇತಿಹಾಸ ಬರೆಯುವ ಪ್ರಕ್ರಿಯೆ ನಿಂತು ಹೋದಂತಿತ್ತು. ಈ ಸಂದರ್ಭದಲ್ಲಿ ಯಾವುದೇ ಪ್ರಭಾವಕ್ಕೂ ಒಳಗಾಗದೆ ಬದ್ಧತೆ, ಪ್ರಾಮಾಣಿಕತೆಯಿಂದ ಸತ್ಯ ತಿಳಿಸುವ ಬರಹಗಾರರು ಭಾರತಕ್ಕೆ ಅಗತ್ಯವೆನಿಸಿತ್ತು. ಆದರೆ ವಿಕ್ರಂ ಸಂಪತ್ ಅವರು ನೈಜ ಇತಿಹಾಸ ತಿಳಿಸುವ ಕೆಲಸವನ್ನು ಸಮರ್ಥವಾಗಿ ಮಾಡಿದ್ದಾರೆ. ಇವರ ಪುಸ್ತಕ ಇತಿಹಾಸದಲ್ಲಿ ಅನ್ಯಾಯವಾಗಿರುವ ಸಾವರ್ಕರ್ ಅವರಿಗೆ ನ್ಯಾಯ ಒದಗಿಸುವಂತಿದೆ. ಧನಂಜಯ್ ಕೀರ್ ಅವರಂತೆ ಸತ್ಯವನ್ನು ಸತ್ಯವನ್ನಾಗಿ ತಿಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾನು 7ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಪ್ರಚಾರಕರೊಬ್ಬರು ಸಾವರ್ಕರ್ ಬಗ್ಗೆ ಮಾತನಾಡಿದ್ದರು. ಆಗಲೇ ಸಾವರ್ಕರ್ ನನ್ನ ಹೃದಯ ಸ್ಪರ್ಶಿಸಿದರು. ಭಾಷಣ ಮುಗಿಯುವಷ್ಟರಲ್ಲಿ ಕಣ್ಣೀರು ಸುರಿದಿತ್ತು. ತನ್ನ ಬಗ್ಗೆ, ತನ್ನ ಕುಟುಂಬದ ಬಗ್ಗೆ, ಭವಿಷ್ಯದ ಬಗ್ಗೆ ಕಿಂಚಿತ್ತೂ ಯೋಚಿಸದೆ ದೇಶಕ್ಕಾಗಿ ಧೈರ್ಯ ದಿಂದ ನೋವು, ಕಷ್ಟ ಅನುಭವಿಸಿದ ಮಹಾನ್ ದೇಶಭಕ್ತ ಸಾವರ್ಕರ್ ನನ್ನ ಮನ ಸ್ಸನ್ನು ಆವರಿಸಿಕೊಂಡರು. 17ನೇ ವಯಸ್ಸಿನಲ್ಲಿ ಅವರ ಬಗ್ಗೆ ಹೆಚ್ಚು ಓದಲು ಆರಂಭಿಸಿದೆ. `ಕವಿ ಹೃದಯಿ ಕ್ರಾಂತಿಕಾರಿಯಾಗಿದ್ದು ವಿಶೇಷತೆ’ ಎಂದು ಸಾವರ್ಕರ್ ಅವರ ಬಗ್ಗೆ ಮನಮುಟ್ಟುವಂತೆ ಮಾತನಾಡಿದ್ದ ಮಾಜಿ ಪ್ರಧಾನಿ ವಾಜಪೇಯಿ ಅವರ ಭಾಷಣವನ್ನು ಪದೇ ಪದೆ ಕೇಳುತ್ತಿದ್ದೆ. ಯಾರಾದರೂ ಸಾವರ್ಕರ್ ವಿರುದ್ಧವಾಗಿ ಮಾತನಾಡಿದರೆ ವೈಯಕ್ತಿಕವಾಗಿ ತುಂಬಾ ನೋವಾಗುತ್ತದೆ. ಅದು ಸಾವರ್ಕರ್ ಅವರಿಗೆ ಮಾತ್ರವಲ್ಲ ದೇಶದ ಇತಿಹಾಸಕ್ಕೆ ಮಾಡುವ ಅನ್ಯಾಯ ಎನಿಸುತ್ತದೆ. ಅವರ ವ್ಯಕ್ತಿತ್ವದ ಶಕ್ತಿಯೇ ಅಂತದ್ದು ಎಂದು ತೇಜಸ್ವಿ ಸೂರ್ಯ ಸ್ಮರಿಸಿಕೊಂಡರು. ಕಾರ್ಯಕ್ರಮದಲ್ಲಿ ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್‍ನ ನೂತನ `ರೀಡ್ ಟು ಲೀಡ್-2020’ ಯೋಜನೆಗೆ ವಿಧ್ಯುಕ್ತ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಆರ್‍ಎಸ್‍ಎಸ್ ಮಕ್ಕಳ ತಜ್ಞ ಡಾ.ಬಾಪಟ್, `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ, ಉದ್ಯಮಿಗಳಾದ ಡಾ.ಬಾಮಿ ವಿ.ಶೆಣೈ ಹಾಗೂ ಆರ್.ಗುರು ಅವರಿಗೆ `ಸಾವರ್ಕರ್ : ಎಕೋಸ್ ಫ್ರಮ್ ಎ ಫರ್‍ಗೋಟೆನ್ ಪಾಸ್ಟ್’ ಪುಸ್ತಕ ಪ್ರತಿಯನ್ನು ನೀಡಿದರು. ಲೇಖಕ ವಿಕ್ರಂ ಸಂಪತ್, ಪತ್ರಕರ್ತೆ, ನಿರೂಪಕಿ ವಾಸಂತಿ ಹರಿಪ್ರಕಾಶ್, ಟ್ರಸ್ಟ್‍ನ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಂಡಮಾನ್ ಸೆಲ್ಯುಲರ್ ಜೈಲಲಿದ್ದ ಸಾವರ್ಕರ್ ಬಿಡುಗಡೆಗೆ  ದಯಾ ಅರ್ಜಿ ಸಲ್ಲಿಸಿಲ್ಲಮೈಸೂರು, ಸೆ.15- ಅಂಡಮಾನ್‍ನ ಸೆಲ್ಯು ಲಾರ್ ಜೈಲಿನಲ್ಲಿದ್ದ ಸಾವರ್ಕರ್ ಅವರು  ಬಿಡು ಗಡೆ ಕೋರಿ ದಯಾ ಅರ್ಜಿ ಸಲ್ಲಿಸಿರಲಿಲ್ಲ ಎಂದು ಲೇಖಕ ವಿಕ್ರಂ ಸಂಪತ್ ಹೇಳಿದರು.

`ಸಾವರ್ಕರ್: ಎಕೋಸ್ ಫ್ರಮ್ ಎ ಫರ್ಗ ಟನ್ ಪಾಸ್ಟ್’ ಪುಸ್ತಕ ಬಿಡುಗಡೆಗೆ ಮುನ್ನ ನಡೆದ ಸಂವಾದದಲ್ಲಿ ಪತ್ರಕರ್ತೆ ವಾಸಂತಿ ಹರಿಪ್ರಕಾಶ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ವಿಕ್ರಂ ಸಂಪತ್, ಅಂಡಮಾನ್‍ನ ಸೆಲ್ಯುಲಾರ್ ಜೈಲಿನಿಂದ ಹೊರ ಬರಲು ಸಾವರ್ಕರ್ ಎಂದಿಗೂ ಬ್ರಿಟಿಷರಿಗೆ ದಯಾ ಅರ್ಜಿ ಸಲ್ಲಿಸಲಿಲ್ಲ. ಬಿಡುಗಡೆಯಾಗುತ್ತಿದ್ದ ಇತರೆ ಕೈದಿಗಳ ಜೊತೆಗೆ ತಮ್ಮ ಹೆಸರು ಕೇಳಿ ಬಂದರೂ ನಿರಾಕರಿಸಿದ್ದರು. ನಾನು ಜೈಲಿನಲ್ಲಿಯೇ ಇರಲು ಸಿದ್ಧನಿದ್ದೇನೆಂದು ಬ್ರಿಟಿಷ್ ಅಧಿಕಾರಿಗಳಿಗೆ ತಿಳಿಸಿ ದ್ದರು. ಅರ್ಜಿ ನೀಡಿದ್ದನ್ನು ದಯಾ ಅರ್ಜಿ ಸಲ್ಲಿಸಿದ್ದಾಗಿ ಪ್ರಚುರಪಡಿಸಲಾಗಿದೆ ಎಂದರು. ದೇಶಭಕ್ತ, ಸಮಾಜ ಸುಧಾರಕ ಸಾರ್ವಕರ್ ಅವರನ್ನು ಕೀಳಾಗಿ ಕಾಣಬಾರದು. ಇವರ ಬಗ್ಗೆ ನೈಜ ವಿಚಾರಗಳ ತಿಳಿಯುವ ನಿಟ್ಟಿನಲ್ಲಿ ಪುನರ್ ಅವಲೋಕನ ಮಾಡಿ, ಹೆಚ್ಚು ಪುಸ್ತಕಗಳನ್ನು ಹೊರತರ ಬೇಕು ಎಂದು ಆಶಿಸಿದ ವಿಕ್ರಂ, ಹಿಂದೆ ಹಿಂದುತ್ವ ರಾಜಕೀಯ ಶಕ್ತಿಯಾಗಿರಲಿಲ್ಲ. ಪ್ರಸ್ತುತ ಹಿಂದುತ್ವ ಎಂಬುದು ಬಹುದೊಡ್ಡ ಶಕ್ತಿಯಾಗಿದೆ. ಹಾಗಾಗಿ ಸಾವರ್ಕರ್ ಅವರಂತಹ ವೀರಯೋಧರ ಬಗ್ಗೆ ತಪ್ಪಾಗಿ ಬಿಂಬಿಸುವ ಕೆಲಸವಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಪುಸ್ತಕ ಬಿಡುಗಡೆ ಬಳಿಕ ಪ್ರೇಕ್ಷಕರೊಂದಿಗೆ ಮುಂದುವರೆದ ಸಂವಾದ ದಲ್ಲಿ, ನೋಟುಗಳಲ್ಲಿ ಮಹಾತ್ಮ ಗಾಂಧೀಜಿಯಂತೆ ಸಾವರ್ಕರ್ ಅವರ ಫೋಟೋವನ್ನೂ ಮುದ್ರಿಸಬಹುದಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ತೇಜಸ್ವಿ ಸೂರ್ಯ, ಇದರ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ. ಇದಕ್ಕಿಂತ ಮುಖ್ಯವಾಗಿ ನಮ್ಮ ಜೇಬಿಗೆ ಮೊದಲು ದುಡ್ಡು ತುಂಬಬೇಕು. ಅಂದರೆ ದೇಶ ಆರ್ಥಿಕವಾಗಿ ಸದೃಢವಾಗಬೇಕು. ಅಮೇರಿಕಾದಲ್ಲಿ ಕರೆನ್ಸಿ ನೋಟುಗಳ ಮೇಲೆ ವಿವಿಧ ನಾಯಕರ ಫೋಟೋ ಹಾಕುವಂತೆ ನಮ್ಮ ದೇಶದ ನೋಟುಗಳಲ್ಲೂ ಬದಲಾವಣೆ ತರಬಹುದೇ? ಎಂದು ಈಗಾಗಲೇ ಪತ್ರದ ಮೂಲಕ ಪ್ರಧಾನಿ ಮೋದಿ ಅವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಅಂಡಮಾನ್‍ನ ಸೆಲ್ಯುಲರ್ ಜೈಲಿನಲ್ಲಿ ತೆರವು ಮಾಡಿದ್ದ ವೀರ ಸಾವರ್ಕರ್ ಹೆಸರನ್ನು ಪುನರ್ ಸ್ಥಾಪಿಸಲಾಗಿದೆಯೇ ಎಂದು `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಅವರು ಪ್ರಶ್ನಿಸಿದಾಗ ಲೇಖಕ ವಿಕ್ರಂ ಸಂಪತ್, ಹೌದು ಪುನರ್ ಸ್ಥಾಪಿಸಲಾಗಿದೆ ಎಂದರು.

 

Translate »