ದೇವರಾಜ ಅರಸು ರಸ್ತೆಯಲ್ಲಿ ವಾಹನ ನಿಲುಗಡೆ ಸಮಸ್ಯೆ ಸಂಬಂಧ ಪೊಲೀಸ್ ಕಮೀಷ್ನರ್ ಮಹತ್ವದ ಸಭೆ
ಮೈಸೂರು

ದೇವರಾಜ ಅರಸು ರಸ್ತೆಯಲ್ಲಿ ವಾಹನ ನಿಲುಗಡೆ ಸಮಸ್ಯೆ ಸಂಬಂಧ ಪೊಲೀಸ್ ಕಮೀಷ್ನರ್ ಮಹತ್ವದ ಸಭೆ

May 28, 2019

ಮೈಸೂರು: ಮೈಸೂರಿನ ದೇವರಾಜ ಅರಸು ರಸ್ತೆ ಯಲ್ಲಿ ಉಂಟಾಗಿರುವ ವಾಹನ ನಿಲುಗಡೆ ಸಮಸ್ಯೆ ನಿವಾರಣೆಗೆ ಪೊಲೀಸರು ಹೊಸ ತಂತ್ರ ಅನುಸರಿಸಲು ಮುಂದಾಗಿದ್ದಾರೆ.

ಈ ಸಂಬಂಧ ನಜರ್‍ಬಾದ್‍ನ ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂ ಗಣದಲ್ಲಿ ಇಂದು ಸಂಚಾರ ವಿಭಾಗದ ಎಸಿಪಿ ಜಿ.ಎನ್. ಮೋಹನ್, ಸಂಚಾರ ಠಾಣೆ ಇನ್ಸ್‍ಪೆಕ್ಟರ್ಸ್ ಹಾಗೂ ದೇವರಾಜ ಠಾಣೆ ಇನ್ಸ್‍ಪೆಕ್ಟರ್‍ಗಳೊಂದಿಗೆ ಸಭೆ ನಡೆ ಸಿದ ಪೊಲೀಸ್ ಆಯುಕ್ತ ಕೆ.ಟಿ. ಬಾಲ ಕೃಷ್ಣ ಅವರು, ಟ್ರಾಫಿಕ್ ಸಮಸ್ಯೆ ಬಗೆಹರಿ ಸಲು ಅನುಸರಿಸುವ ಹೊಸ ತಂತ್ರ ಕುರಿತು ಚರ್ಚಿಸಿದರು.

ಡಿ.ದೇವರಾಜ ಅರಸು ರಸ್ತೆಯಲ್ಲಿ ಪೇ-ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿ ಸಲು ಮೈಸೂರು ಮಹಾನಗರ ಪಾಲಿ ಕೆಯು ನಾಲ್ಕು ಬಾರಿ ಟೆಂಡರ್ ಕರೆ ದಾಗ್ಯೂ, ಯಾರೂ ಮುಂದೆ ಬರುವ ಧೈರ್ಯ ಮಾಡದ ಕಾರಣ ಈ ಯೋಜನೆ ನೆನೆಗುದಿಗೆ ಬಿದ್ದಿದೆ ಎಂಬ ವಿಷಯವನ್ನು ಪೊಲೀಸ್ ಆಯುಕ್ತರ ಸಭೆಯಲ್ಲಿ ಪ್ರಸ್ತಾಪಿಸಿದರು.

ಅಂಗಡಿ ಮಾಲೀಕರೇ…: ಡಿ. ದೇವ ರಾಜ ಅರಸು ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿ ಮಾಲೀಕರೇ ಒಂದು ಬದಿ ತಮ್ಮ ಕಾರುಗಳನ್ನು ಬೆಳಿಗ್ಗೆ 9 ರಿಂದ ರಾತ್ರಿ 10 ಗಂಟೆವರೆಗೆ ನಿಲ್ಲಿಸುತ್ತಾರೆ. ಲಭ್ಯವಿರುವ ಜಾಗದ ಶೇ. 80 ರಷ್ಟು ಜಾಗದಲ್ಲಿ ಅಂಗಡಿ ಮಾಲೀಕರ ಕಾರುಗಳು ನಿಲ್ಲುತ್ತಿವೆ ಅಲ್ಲದೆ, ಅಂಗಡಿಗಳಲ್ಲಿ ಕೆಲಸ ಮಾಡು ವವರ ದ್ವಿಚಕ್ರ ವಾಹನಗಳನ್ನು ರಸ್ತೆಯ ಮತ್ತೊಂದು ಬದಿ ನಿಲ್ಲಿಸಲಾಗು ತ್ತಿದೆ ಎಂಬುದನ್ನು ಸಭೆಯಲ್ಲಿ ಪ್ರಸ್ತಾಪಿಸ ಲಾಯಿತು.

ಸಾರ್ವಜನಿಕರ ಪರದಾಟ: ಬೆಳಿಗ್ಗೆ ಯಿಂದ ರಾತ್ರಿವರೆಗೂ ಅಂಗಡಿ ಮಾಲೀ ಕರು ಮತ್ತು ಕೆಲಸಗಾರರ ವಾಹನಗಳೇ ನಿಲ್ಲುವುದರಿಂದ ಉಳಿದ ಶೇ. 20ರಷ್ಟು ಜಾಗಕ್ಕಾಗಿ ಸಾರ್ವಜನಿಕರು ಕಾದು ನಿಲ್ಲುವ ಪರಿಸ್ಥಿತಿ ಇದೆ. ಪಾರ್ಕಿಂಗ್ ಸಿಗದ ಕಾರಣಕ್ಕೆ ಗ್ರಾಹಕರೂ ಸಹ ಅರಸು ರಸ್ತೆ ಅಂಗಡಿಗಳಿಗೆ ಹೋಗಲು ಸಾಧ್ಯ ವಾಗುತ್ತಿಲ್ಲ ಎಂದು ಆಯುಕ್ತರು ತಿಳಿಸಿದರು.

ಕಡಿವಾಣ ಅಗತ್ಯ: ಅರಸು ರಸ್ತೆಯಲ್ಲಿ ನಿಲ್ಲುವ ವಾಹನಗಳ ನೋಂದಣಿ ಸಂಖ್ಯೆ ಬರೆದುಕೊಂಡು ಹಾಗೂ ಸಿಸಿ ಟಿವಿ ಕ್ಯಾಮರಾ ಮೂಲಕ ಮಾಹಿತಿ ಪಡೆದು ನಂತರ ಆರ್‍ಟಿಓ ಕಚೇರಿಯಲ್ಲಿ ಆ ವಾಹನ ಗಳ ಮಾಲೀಕರು ಯಾರು ಎಂಬುದನ್ನು ತಿಳಿದುಕೊಳ್ಳಿ ಎಂದು ಆಯುಕ್ತರು ಅಧಿ ಕಾರಿಗಳಿಗೆ ಸೂಚಿಸಿದ್ದಾರೆ.

ಸಮಾಲೋಚನೆ: ಎರಡು ತಾಸುಗಳಿ ಗಿಂತ ಹೆಚ್ಚು ಸಮಯ ನಿಲ್ಲುವ ವಾಹನ ಗಳ ಮಾಲೀಕರ್ಯಾರು ಎಂಬುದು ತಿಳಿದ ನಂತರ, ಸ್ಥಳೀಯ ಪಾಲಿಕೆ ಸದಸ್ಯ ಹಾಗೂ ಅಂಗಡಿ ಮಾಲೀಕರ ಸಭೆ ಕರೆದು ಸಮಾ ಲೋಚನೆ ನಡೆಸಿ ಅವರಿಂದಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಲಹೆ-ಅಭಿ ಪ್ರಾಯ ಸಂಗ್ರಹಿಸುವುದು ಸೂಕ್ತ ಎಂದು ಬಾಲಕೃಷ್ಣ, ಅಧಿಕಾರಿಗಳಿಗೆ ತಿಳಿಸಿದರು.

ಪರ್ಯಾಯ ವ್ಯವಸ್ಥೆ: ಅಂಗಡಿ ಮಾಲೀಕರು ಬೆಳಿಗ್ಗೆಯಿಂದ ರಾತ್ರಿವರೆಗೂ ತಮ್ಮ ಕಾರುಗಳನ್ನು ಅರಸು ರಸ್ತೆಯಲ್ಲಿ ನಿಲ್ಲಿಸುವ ಬದಲು ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಸಿಗುತ್ತದೆ. ಅಲ್ಲದೆ, 2 ತಾಸುಗಳಿಗಿಂತ ಹೆಚ್ಚು ಸಮಯ ನಿಲ್ಲಿಸಿದವರಿಗೆ ಗಂಟೆಗಿಷ್ಟು ಶುಲ್ಕ ವಿಧಿಸುವ ಬಗ್ಗೆಯೂ ಚಿಂತನೆ ನಡೆಸಬೇಕೆಂದೂ ಅವರು ತಿಳಿಸಿದರು.ಡಿಸಿಪಿ ಎಂ. ಮುತ್ತುರಾಜ್, ಎಲ್ಲಾ ಉಪವಿಭಾಗಗಳ ಎಸಿಪಿಗಳೂ ಸಭೆಯಲ್ಲಿ ಉಪಸ್ಥಿತರಿದ್ದರು.

ಸಾರ್ವಜನಿಕ ಸುರಕ್ಷಾ ಕಾಯ್ದೆಯಂತೆ ಬಂದೋಬಸ್ತ್
ಮೈಸೂರು: ಮೇ 30ರಂದು ನರೇಂದ್ರ ಮೋದಿ ಅವರು 2ನೇ ಬಾರಿ ಪ್ರಧಾನ ಮಂತ್ರಿ ಗಳಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಹಾಗೂ ಜೂನ್ 5 ರಂದು ರಂಜಾನ್ ಹಬ್ಬ ಆಚರಣೆ ಕಾರಣ ಸಾರ್ವಜನಿಕ ಸುರಕ್ಷಾ ಕಾಯ್ದೆ (Public Safety Act) ರೀತ್ಯಾ ಮೈಸೂರಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲು ಮೈಸೂರು ನಗರ ಪೊಲೀಸರು ಸಕಲ ರೀತಿಯಲ್ಲಿ ಸಜ್ಜುಗೊಳ್ಳುತ್ತಿದ್ದಾರೆ.

ಈ ಕುರಿತು ತಮ್ಮ ಕಚೇರಿ ಸಭಾಂಗಣದಲ್ಲಿ ಅಧೀನಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು, ಪ್ರಧಾನಮಂತ್ರಿ ಪ್ರಮಾಣ ವಚನ ಸ್ವೀಕರಿಸುವ ಮೇ 30 ರಂದು ಮೈಸೂರು ನಗರದಾದ್ಯಂತ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಿ ಎಂದರು.

ಶಾಂತಿಯುತವಾಗಿ ವಿಜಯೋತ್ಸವ ಆಚ ರಿಸಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ಆದರೆ ಸಂಭ್ರ ಮದ ನೆಪದಲ್ಲಿ ಸಮಾಜದ ಶಾಂತಿ, ಕಾನೂನು-ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ಎಚ್ಚರ ವಹಿಸ ಬೇಕು. ತಮ್ಮತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಆಯುಕ್ತರು ಸೂಚನೆ ನೀಡಿದರು. ಅದೇ ರೀತಿ ರಂಜಾನ್ ಹಬ್ಬ ಆಚರಿಸಲು ಹಾಗೂ ಪ್ರಾರ್ಥನೆ ವೇಳೆ ಅಗತ್ಯ ಎಲ್ಲಾ ಮುಂಜಾಗ್ರತಾ ಭದ್ರತೆ ಒದಗಿಸುವ ಮೂಲಕ ಕಾನೂನು-ಸುವ್ಯವಸ್ಥೆ ಕಾಪಾಡಬೇಕು, ಅಗತ್ಯ ವಿರುವೆಡೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ನಿಗಾ ವಹಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಪ್ರಕಾರ 500 ಮಂದಿ ಓಡಾಡುವ ಸ್ಥಳ ಖಾಸಗಿಯಾಗಲೀ ಅಥವಾ ಸಾರ್ವಜನಿಕವಾಗಲೀ ಅಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಈ ಹಿನ್ನೆಲೆಯಲ್ಲಿ ಹೋಟೆಲ್‍ಗಳು, ಮಾಲ್‍ಗಳು, ದೊಡ್ಡ ದೊಡ್ಡ ಅಂಗಡಿಗಳು, ದೇವಸ್ಥಾನಗಳು, ಪ್ರವಾಸಿ ತಾಣಗಳು, ಆಸ್ಪತ್ರೆ, ಸರ್ಕಲ್, ಜಂಕ್ಷನ್‍ಗಳಲ್ಲಿ ಕ್ಯಾಮರಾ ಅಳವಡಿಸುವಂತೆ ಸಂಬಂಧ ಪಟ್ಟವರಿಗೆ ತಿಳುವಳಿಕೆ ಪತ್ರ ಕೊಟ್ಟು ಕಟ್ಟುನಿಟ್ಟಾಗಿ ನಿಯಮ ಜಾರಿಗೊಳಿಸಿ ಎಂದು ತಿಳಿಸಿದರು. ಕಾನೂನು-ಸುವ್ಯವಸ್ಥೆ ಜೊತೆಗೆ ಅಪರಾಧ ತಡೆ ಮತ್ತು ಪತ್ತೆ ಕಾರ್ಯಕ್ಕೂ ಹೆಚ್ಚು ಒತ್ತು ನೀಡಬೇಕು, ಗ್ಯಾಂಗ್ ರೇಪ್, ಮನೆ ಕಳವು, ಚಿನ್ನದ ಸರ ಅಪಹರಣ ಪ್ರಕರಣಗಳ ತನಿಖೆ ಚುರುಕುಗೊಳಿಸಿ ಆರೋಪಿ ಗಳನ್ನು ಬಂಧಿಸುವಂತೆಯೂ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Translate »