ಹಾಸನ: ನಾಗರಿಕ ಸಮಾಜದಲ್ಲಿ ಪೊಲೀಸರ ಅವಶ್ಯಕತೆ ಹೆಚ್ಚಾಗಿದ್ದು, ಕರ್ತ ವ್ಯದ ಸಮಯದಲ್ಲಿ ತಮ್ಮ ಪ್ರಾಣ ಲೆಕ್ಕಿಸದೇ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್.ತಿಮ್ಮ ಣ್ಣಾಚಾರ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಎಲ್ಲಿ ಏನೇ ಘಟನೆ ನಡೆದರೂ ಪೊಲೀಸರ ಸೇವೆ ಅವಶ್ಯಕವಾಗಿದೆ. ಪ್ರತಿ ದಿನ ಒತ್ತಡದಲ್ಲಿ ಇರುವ ಪೊಲೀಸರು ಆರೋಗ್ಯದಲ್ಲಿ ಏರುಪೇರಾದರೂ ಕರ್ತವ್ಯಕ್ಕೆ ಮಾನ್ಯತೆ ನೀಡಿ ಎದೆಯೊಡ್ಡಿ ತುರ್ತು ಸಂದರ್ಭ ಎದುರಿಸುತ್ತಾರೆ ಎಂದು ಸ್ಮರಿಸಿದರು.
ನಾಗರಿಕತೆ ಹೆಚ್ಚಾದಂತೆ ಪೊಲೀಸರ ಜವಾಬಾರಿ, ಒತ್ತಡ ಹೆಚ್ಚಾತ್ತಿದ್ದು, ಪೊಲೀ ಸರಿಗೆ ಹೆಚ್ಚಿನ ತರಬೇತಿ ಅಗತ್ಯವಾಗಿದೆ. ಸೈನಿಕರು ದೇಶದ ಗಡಿಯಲ್ಲಿ ನಿಂತು ವಿರೋಧಿ ರಾಷ್ಟ್ರದಿಂದ ನಮ್ಮನ್ನು ಕಾಪಾಡುವ ಹಾಗೇ ಪೊಲೀಸರು ಕೂಡ ತಮ್ಮ ಜೀವ ವನ್ನೇ ನೀಡಿ ಕಾನೂನು ಸುವ್ಯವಸ್ಥೆ ಕಾಪಾ ಡುತ್ತಾರೆ. ಹಿಂದಿನ ಪೊಲೀಸರ ತ್ಯಾಗ ಮತ್ತು ಬಲಿದಾನಗಳು ಇಂದಿನ ಸಿಬ್ಬಂದಿಗೆ ದಾರಿ ದೀಪವಾಗಬೇಕು. ಎಂತಹ ಪ್ರಸಂಗ ಬಂದರೂ ಮೆಟ್ಟಿ ನಿಂತು ಕಾನೂನಿಗೆ ಗೌರವ ಕೊಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ.ಎನ್.ಪ್ರಕಾಶ್‍ಗೌಡ ಮಾತನಾಡಿ, ಅಪ್ರತಿಮ ಸಾಹಸ ಮತ್ತು ಜನತೆ ರಕ್ಷಣೆ ಗಾಗಿ ವೀರ ಮರಣ ಹೊಂದಿದ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗು ತ್ತಿದೆ. 1959ರಿಂದ ಹುತಾತ್ಮ ದಿನ ಆಚರಿಸಿ ಕೊಂಡು ಬರಲಾಗುತ್ತಿದೆ. ಕಳೆದ 58 ವರ್ಷ ಗಳಿಂದ ಅನೇಕ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಾವು ಕಳೆದು ಕೊಂಡಿದ್ದೇವೆ. ಜನಸಾಮಾನ್ಯರಿಗೆ ಸೇವೆ ನೀಡಿ ಮರಣ ಹೊಂದುತ್ತಿರುವ ಪೊಲೀಸ್ ಮತ್ತು ಯೋಧರ ಸಂಖ್ಯೆ ದಿನೇದಿನೆ ಹೆಚ್ಚಾ ಗುತ್ತಿದೆ. ಏನೇ ಅಪರಾಧ ಇದ್ದರೂ ಪೊಲೀ ಸರು ಧೈರ್ಯದಿಂದ ಎದುರಿಸಬೇಕು. ಪ್ರತಿ ಯೊಬ್ಬ ಪೊಲೀಸರೂ ಸೇವಾ ಮನೋ ಭಾವ ಬೆಳೆಸಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು. ನಂತರ ವೀರಮರಣ ಹೊಂದಿದ 466 ಪೊಲೀಸ್ ಹುತಾತ್ಮರ ಪಟ್ಟಿ ಪ್ರಸ್ತುತಪಡಿಸಿದರು.
ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮೊದಲು ಪೊಲೀಸ್ ವಾದ್ಯವೃಂದದವ ರಿಂದ ವಂದನೆ ಅರ್ಪಿಸಲಾಯಿತು. ಹುತಾ ತ್ಮರ ಸ್ಮಾರಕಕ್ಕೆ ಪೊಲೀಸ್ ಅಧಿಕಾರಿಗಳು, ಉನ್ನತ ಅಧಿಕಾರಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ರವಿ ನಾಕಲಗೂಡು, ಪತ್ರಕರ್ತರ ಸಂಘದ ಅಧ್ಯಕ್ಷ ಉದಯ ಕುಮಾರ್, ಸಮಾಜ ಸೇವಕ ಅಮ್ಜಾದ್ ಖಾನ್, ನಿವೃತ್ತ ಪೊಲೀಸ್ ಅಧಿಕಾರಿ ದೊಡ್ಡೇ ಗೌಡ ಇತರರಿಂದ ಪುಷ್ಪಗುಚ್ಛ ಸಮರ್ಪಿ ಸಲಾಯಿತು. ಹುತಾತ್ಮರ ಸ್ಮರಣಾರ್ಥ ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಲಾ ಯಿತು. ಪೊಲೀಸ್ ಬಾವುಟವನ್ನು ಅರ್ಧಕ್ಕೆ ಇಳಿಸಿ ನಂತರ ಮೇಲಕ್ಕೇರಿಸಲಾಯಿತು. ನಂತರ 2 ನಿಮಿಷ ಮೌನ ಆಚರಿಸಿ ಗೌರವ ಸಲ್ಲಿಸಲಾಯಿತು. ಹುತಾತ್ಮರ ದಿನದ ಅಂಗ ವಾಗಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಬಲ ತೋಳಿಗೆ ಕಪ್ಪುಪಟ್ಟಿ ಧರಿಸಿ ದ್ದರು. ಪೊಲೀಸ್ ಅಧೀಕ್ಷಕಿ ಬಿ.ಎನ್. ನಂದಿನಿ ಮತ್ತಿತರು ಭಾಗವಹಿಸಿದ್ದರು.