ಬೇಲೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರುವ ಪಟ್ಟಣದ ಯಗಚಿ ಹಳೇ ಸೇತುವೆ ರಸ್ತೆಯಲ್ಲಿನ ಗುಂಡಿಗಳನ್ನು ಕಾಣದೆ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಶನಿವಾರ ರಾತ್ರಿ 3 ಕಾರು ಹಾಗೂ ಇಂದು ಬೆಳಿಗ್ಗೆ 2 ಬೈಕ್ ಗಳ ನಡುವೆ ಡಿಕ್ಕಿಯಾಗಿರುವ ಘಟನೆ ನಡೆದಿದ್ದು, ಸುರಕ್ಷತಾ ದೃಷ್ಟಿಯಿಂದ ಇಲ್ಲಿನ ಪುರಸಭೆಯೇ ತಾತ್ಕಾಲಿಕವಾಗಿ ಗುಂಡಿ ಮುಚ್ಚಲು ಮುಂದಾಯಿತು.
ಯಗಚಿ ಹಳೇ ಸೇತುವೆ ಮತ್ತು ರಸ್ತೆ ನಿರ್ವಹಣೆ ಜವಾಬ್ದಾರಿ ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರಕ್ಕೆ ಸೇರಿ ದ್ದಾಗಿದ್ದರೂ ಪುರಸಭೆ ಅಧ್ಯಕ್ಷೆ ಭಾರತೀ ಅರುಣ್‍ಕುಮಾರ್ ಅವರು ಸಾರ್ವ ಜನಿಕರಿಂದ ಬಂದ ದೂರು ಆಧರಿಸಿ ಆಸಕ್ತಿ ವಹಿಸಿ ಇಂದು ಗುಂಡಿ ಮುಚ್ಚಿಸಲು ಮುಂದಾದರು. ಈ ಬಗ್ಗೆ ಸಾರ್ವಜನಿಕ ರಿಂದ ಮೆಚ್ಚುಗೆಯೂ ವ್ಯಕ್ತವಾಯಿತು.
ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಬರುತ್ತಿದ್ದ ಕಾರುಗಳಲ್ಲಿ ಮುಂದೆ ಸಾಗು ತ್ತಿದ್ದ ಕಾರೊಂದರ ಚಾಲಕ ಸೇತುವೆ ಮೇಲಿನ ಗುಂಡಿ ಕಂಡು ದಿಢೀರ್ ಬ್ರೇಕ್ ಹಾಕಿದ್ದ ಪರಿಣಾಮ ಈ ಕಾರಿನ ಹಿಂದೆ ಬರುತ್ತಿದ್ದ 2 ಕಾರುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ಜಖಂ ಆದವು.
ಅಲ್ಲದೆ ಇಂದು ಬೆಳಿಗ್ಗೆ ಪಟ್ಟಣದ ಇಬ್ಬರು ಬೈಕ್ ಸವಾರರು ಸಹ ಇದೇ ರೀತಿ ಡಿಕ್ಕಿ ಹೊಡೆದು ಕೊಂಡ ಘಟನೆ ಜರುಗಿತು. ಇದರಿಂದ ಆತಂಕಗೊಂಡ ಸಾರ್ವಜನಿಕರು ಪುರಸಭಾ ಅಧ್ಯಕ್ಷರಿಗೆ ದೂರವಾಣಿ ಮೂಲಕ ವಿಷಯ ಮುಟ್ಟಿಸಿ ದರು.
ಸಮಸ್ಯೆಯ ಗಂಭೀರತೆ ಅರಿತ ಪುರ ಸಭಾಧ್ಯಕ್ಷೆ ಭಾರತೀ ಅರುಣ್‍ಕುಮಾರ್ ಅವರು, ಸ್ಥಳಕ್ಕೆ ಭೇಟಿ ಮಾಡಿ ವೀಕ್ಷಿಸಿ ದರಲ್ಲದೆ, ತಕ್ಷಣವೇ ಸಿಬ್ಬಂದಿ ನೆರವಿ ನೊಂದಿಗೆ ಜೆಸಿಬಿ ತರಿಸಿ ಜಲ್ಲಿ ಹಾಗೂ ಎಂಸ್ಯಾಂಡ್ ಹಾಕಿ ಗುಂಡಿಗಳನ್ನು ಮುಚ್ಚಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದ ಪುರಸಭಾಧ್ಯಕ್ಷೆ ಭಾರತೀ ಅರುಣ್ ಕುಮಾರ್, ಸೇತುವೆ ಮೇಲಿನ ರಸ್ತೆಯಲ್ಲಿ ಗುಂಡಿ ಬಿದ್ದಿರುವುದನ್ನು ಮುಚ್ಚಿಸುವಂತೆ ಕರವೇ ಕಾರ್ಯಕರ್ತರು ಪ್ರತಿಭಟಿಸಿದ್ದರು. ಆದರೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಗಳು ಕ್ರಮ ಕೈಗೊಂಡಿಲ್ಲ. ನಿನ್ನೆ ಮತ್ತು ಇಂದು ವಾಹನಗಳ ಸರಣಿ ಅಪಘಾತ ಸಂಭವಿ ಸಿದೆ. ಈ ಬಗ್ಗೆ ಸಾರ್ವಜನಿಕರು ಕರೆ ಮಾಡಿ ಆತಂಕ ವ್ಯಕ್ತಪಡಿಸಿದರು. ಈ ಹಿನ್ನೆಲೆ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸೇರಿದ್ದರೂ ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತಾಗಿ ಗುಂಡಿ ಮುಚ್ಚಿಸಲಾಗುತ್ತಿದೆ ಎಂದರು.
ಅಧಿಕಾರಿಗಳ ಮೌನ: ಸೇತುವೆ ಹಾಗೂ ರಸ್ತೆ ದುರಸ್ತಿಗೆ ಕೆಲ ದಿನಗಳ ಹಿಂದೆ ಇಲ್ಲಿನ ಕರವೇ ಘಟಕ ಸೇತುವೆ ಬಳಿ ನಡೆಸಿದ ಪ್ರತಿಭಟನೆಗೆ ಮಣಿದ ಹೆದ್ದಾರಿ ಪ್ರಾಧಿ ಕಾರದ ಅಧಿಕಾರಿಗಳು ಭರವಸೆ ನೀಡಿ ದ್ದರು. ಆದರೂ ಇದುವರೆಗೆ ದುರಸ್ತಿಗೆ ಮುಂದಾಗದಿರುವುದರಿಂದ ವಾಹನ ಸವಾರರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.