ಆಡಳಿತ ವೈದ್ಯಾಧಿಕಾರಿ ನಿರ್ಲಕ್ಷ್ಯಕ್ಕೆ ಆಕ್ರೋಶ
ಹಾಸನ

ಆಡಳಿತ ವೈದ್ಯಾಧಿಕಾರಿ ನಿರ್ಲಕ್ಷ್ಯಕ್ಕೆ ಆಕ್ರೋಶ

October 22, 2018

ಅರಸೀಕೆರೆ: ತಾಲೂಕಿನಲ್ಲಿ ಹೆಚ್1ಎನ್1 2 ಪ್ರಕರಣಗಳು ಪತ್ತೆಯಾಗಿದ್ದು, ತಾಲೂಕು ಆಡಳಿತ ವೈದ್ಯಾಧಿಕಾರಿಗಳು ರೋಗದ ಬಗ್ಗೆ ಜಾಗೃತಿ ಮೂಡಿಸದೇ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗೆ ಡಿಸಿ ರೋಹಿಣಿ ಸಿಂಧೂರಿ ಹಾಸನದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ಹೆಚ್1ಎನ್1 ರೋಗದ ಬಗ್ಗೆ ಜಾಗೃತಿ ಮೂಡಿಸಲು ತಾಲೂಕು ಮಟ್ಟದ ಅಂತರ ಇಲಾಖೆಗಳ ಸಮನ್ವಯ ಸಮಿತಿ ಸಭೆ ನಡೆಸಲು ಸೂಚಿಸಿದ್ದರು.

ಜಿಲ್ಲಾಧಿಕಾರಿ ಅದೇಶದ ಮೇರೆಗೆ ಆ.16ರಂದು ನಗರದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿರುವ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ತಹಶೀಲ್ದಾರ್ ಮತ್ತು ಸಾಂಕ್ರಾಮಿಕ ರೋಗಗಳ ಸಮನ್ವಯ ಸಮಿತಿ ಅಧ್ಯಕ್ಷ ಎನ್.ವಿ.ನಟೇಶ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆ ಕರೆಯಲಾಗಿತ್ತಾದರೂ ಗೈರಾಗು ವುದರ ಮೂಲಕ ಕೆಲ ಅಧಿಕಾರಿಗಳು ಸಭೆ ನಿರ್ಲಕ್ಷಿಸಿದ್ದಾರೆ.

ಸದ್ಯ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ 2 ಹೆಚ್1ಎನ್1 ಪ್ರಕರಣಗಳು ಪತ್ತೆಯಾಗಿದ್ದು, ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ 8 ಅನುಮಾನಾಸ್ಪದ ಪ್ರಕರಣ ಕಂಡು ಬಂದಿದ್ದು, ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಫಲಿತಾಂಶಕ್ಕಾಗಿ ಎದುರು ನೋಡಲಾಗುತ್ತಿದೆ. ಆದರೆ ಸ್ಥಳೀಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಈ ರೋಗದ ಬಗ್ಗೆ ಮಾಹಿತಿ ಇಲ್ಲದಿರುವುದು ವಿಪರ್ಯಾಸವಾಗಿದೆ.

ಸದಾ ಜಾಗೃತರಾಗಿರಬೇಕಾದ ತಾಲೂಕು ಆಡಳಿತ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನಲ್ಲಿ ಪತ್ತೆಯಾಗಿರುವ ಸಾಂಕ್ರಾಮಿಕ ರೋಗಗಳ ಮಾಹಿತಿ ಇಲ್ಲದೇ ಇಲಾಖೆ ಮೇಲಧಿ ಕಾರಿಗಳು ನಿರ್ದಿಷ್ಟ ಕ್ರಮ ಜರುಗಿಸಲು ಪರದಾಡುವಂತಾಗಿದೆ. ಇತ್ತೀಚೆಗೆ ಹೆಚ್1ಎನ್1 ಸಾಂಕ್ರಾಮಿಕ ರೋಗ ಪತ್ತೆಯಾ ದಾಗಿನಿಂದ ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆಯೂ ಆತಂಕಗೊಂಡಿದ್ದಾರೆ. ಜಿಲ್ಲಾ ಆಡಳಿತ ಕೂಡಲೇ ಎಚ್ಚೆತ್ತು ತಾಲೂಕು ಆಡಳಿತದೊಂದಿಗೆ ಮತ್ತೊಂದು ಸುತ್ತಿನ ತುರ್ತು ಸಭೆ ನಡೆಸಿ ಹೆಚ್1ಎನ್1ನಿಂದ ಆಗುಬಹುದಾದ ಅವಘಡ ಗಳನ್ನು ತಡೆಗಟ್ಟಲು ಕಾರ್ಯ ಪ್ರವೃತ್ತವಾಗಬೇಕಾಗಿದೆ.

ತಾಲೂಕಿನಲ್ಲಿ ಹೆಚ್1ಎನ್1 ಪ್ರಕರಣವು ಬೆಳಕಿಗೆ ಬರುತ್ತಿದ್ದರೆ, ಇತ್ತ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ನಾಗಪ್ಪ ಕೇಂದ್ರ ಸ್ಥಾನ ಹಾಗೂ ನಗರದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸದೇ ಇದ್ದು, ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿದೆ. ಇಲಾಖೆ ನಿಯಮಾನುಸಾರ ತಾಲೂಕು ಆಡಳಿತ ವೈದ್ಯಾಧಿಕಾರಿ ತಾನು ಕರ್ತವ್ಯ ನಿರ್ವಹಿಸುವ ಆಸ್ಪತ್ರೆ ಕೇಂದ್ರ ಸ್ಥಾನದಲ್ಲಿ ಕಡ್ಡಾಯ ವಾಗಿ ಇರಬೇಕು ಮತ್ತು ಸರ್ಕಾರ ನೀಡಿರುವ ವಸತಿ ಗೃಹ ದಲ್ಲಿ ವಾಸಿಸಬೇಕು ಎಂಬ ಸ್ಪಷ್ಟ ನಿರ್ದೆಶನವಿದ್ದರೂ ಪ್ರತಿನಿತ್ಯ ಮೈಸೂರಿಗೆ ಓಡಾಡುವ ಮೂಲಕ ಸಾರ್ವಜನಿಕರು ಮತ್ತು ಅಧಿಕಾರಿಗಳಿಗೆ ದೊರೆಯದಿರುವುದು ಇವರ ಸೇವಾ ನಿರ್ಲಕ್ಷ್ಯಕ್ಕೆ ಹಿಡಿದ ಕೈ ಗನ್ನಡಿಯಾಗಿದೆ ಎಂದು ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು ಆರೋಪಿಸುತ್ತಾರೆ. ಸಾಂಕ್ರಾ ಮಿಕ ರೋಗಗಳ ಮಾಹಿತಿ ಪಡೆಯಲು ಸಂಪರ್ಕಿಸಿದರೂ ಕರೆ ಸ್ವೀಕರಿಸುವ ಪ್ರವೃತ್ತಿ ಇಲ್ಲವೆಂಬ ಆರೋಪಗಳು ಸಹ ಕೇಳಿ ಬರುತ್ತಿವೆ. ಈ ಅಧಿಕಾರಿಯು ಕರ್ತವ್ಯ ಲೋಪ ಸರಿಪಡಿಸಿಕೊಳ್ಳದಿದ್ದಲ್ಲಿ ಕೂಡಲೇ ವರ್ಗಾವಣೆ ಮಾಡಿ ಉತ್ತಮ ಆಡಳಿತ ವೈದ್ಯಾಧಿಕಾರಿಯನ್ನು ನೇಮಕ ಮಾಡ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Translate »