ಮೈಸೂರು,ಜು.15(ಆರ್ಕೆ)- ಮೈಸೂ ರಿನ ಕೆಆರ್ ಮತ್ತು ಚೆಲುವಾಂಬ ಆಸ್ಪತ್ರೆ ಗಳ ಭದ್ರತಾ ವ್ಯವಸ್ಥೆ ಬಲಪಡಿಸಲು ಆಡಳಿತ ಮಂಡಳಿ ಮುಂದಾಗಿದೆ.
ಆಸ್ಪತ್ರೆಗಳಲ್ಲಿ ಆಗಿಂದಾಗ್ಗೆ ಗಲಾಟೆ, ಗೊಂದಲ, ವಾಗ್ಯುದ್ಧಗಳಂತಹ ಅಹಿತಕರ ಘಟನೆಗಳನ್ನು ನಿಯಂತ್ರಿಸುವ ಸಲುವಾಗಿ ಇಂದು ಕೆ.ಆರ್.ಆಸ್ಪತ್ರೆ ಸಭಾಂಗಣದಲ್ಲಿ ಎರಡೂ ಆಸ್ಪತ್ರೆಗಳ ಸುಮಾರು 100ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗೆ ದೇವರಾಜ ಠಾಣೆ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್ ಮತ್ತು ಸಬ್ ಇನ್ಸ್ಪೆಕ್ಟರ್ ರಾಜು ಅವರಿಂದ ಉಪನ್ಯಾಸ ಏರ್ಪಡಿಸಲಾಗಿತ್ತು.
ತಮಗೆ ನಿಯೋಜಿತ ಸ್ಥಳದಲ್ಲಿ ಸಮ ವಸ್ತ್ರಧಾರಿಗಳಾಗಿ ಶಿಸ್ತಿನಿಂದ ಕಾರ್ಯ ನಿರ್ವಹಿಸಬೇಕು, ಹೆಚ್ಚು ರೋಗಿಗಳು ಸೇರುವ ಹೊರ ರೋಗಿ ವಿಭಾಗ, ಅಪ ಘಾತ ತುರ್ತು ಚಿಕಿತ್ಸಾ ವಿಭಾಗ, ಎಮ ರ್ಜೆನ್ಸಿ ವಾರ್ಡ್, ಮೆಡಿಸಿನ್, ಸರ್ಜರಿ, ಆರ್ಥೋ, ನರರೋಗ, ಯೂರಾಲಜಿ ವಿಭಾಗ, ಎಕ್ಸ್ ರೇ, ಸ್ಕ್ಯಾನಿಂಗ್ ವಿಭಾಗ ಗಳ ಬಳಿ ಜನಜಂಗುಳಿ ಇರುವುದರಿಂದ ಹಾಗೂ ವಾಹನ ನಿಲುಗಡೆ, ಔಷಧಿ ವಿತ ರಣೆ ಕೇಂದ್ರ ಮತ್ತು ಐಪಿಡಿ-ಓಪಿಡಿ (ಹೊಸ ಕಟ್ಟಡ) ಬಳಿಯಲ್ಲಿ ದಿನದ 24 ಗಂಟೆಯೂ ತಪ್ಪದೇ ಭದ್ರತಾ ಸಿಬ್ಬಂದಿ ಕಡ್ಡಾಯವಾಗಿ ಹಾಜರಿದ್ದು, ಅಹಿತಕರ ಘಟನೆಗೆ ಆಸ್ಪದ ಕೊಡದಂತೆ ಕಾರ್ಯ ನಿರ್ವಹಿಸಬೇಕೆಂದು ಇನ್ಸ್ಪೆಕ್ಟರ್ ಪ್ರಸನ್ನಕುಮಾರ್ ಸೂಚಿಸಿದರು.
ರೋಗಿ ಕಡೆಯವರು ಔಷಧಿ ತರಲು ಅಂಗಡಿಗೆ ಹೋಗುವಾಗ ಹಣ, ಮೊಬೈಲ್ ಕಿತ್ತು ಪರಾರಿಯಾಗುವುದು, ಚಿನ್ನದ ಸರ ಅಪಹರಣ, ವೈದ್ಯರ ನೆಪದಲ್ಲಿ ಒಳರೋಗಿ ಗಳಿಂದ ಹಣ-ಆಭರಣ ಕಸಿಯುವುದು, ಐಸಿಯು ಬಳಿ ಚಪ್ಪಲಿ, ಶೂ ಕಳವುಗಳ ಂತಹ ಪ್ರಕರಣಗಳು ವರದಿಯಾಗುತ್ತಿರು ವುದರಿಂದ ಭದ್ರತಾ ಸಿಬ್ಬಂದಿ ಎಚ್ಚರಿಕೆ ಯಿಂದಿರಬೇಕು ಎಂದು ಇನ್ಸ್ಪೆಕ್ಟರ್ ತಿಳಿಸಿದರು.
ರೋಗಿಗಳು, ಅವರ ಕಡೆಯವರು, ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರುಗಳೊಂದಿಗೆ ಒಳ್ಳೆ ರೀತಿಯಲ್ಲಿ ವರ್ತಿಸಬೇಕು, ಸಾರ್ವ ಜನಿಕರಿಗೆ ಸರಿಯಾದ ಮಾಹಿತಿ ನೀಡಿ, ಸಹಾಯ ಮಾಡಬೇಕು, ಅಹಿತಕರ ಘಟನೆ ಗಳು ನಡೆಯುವ ಸಂಭವಗಳು ಕಂಡು ಬಂದಲ್ಲಿ ಪೊಲೀಸ್ ಠಾಣೆಗೆ ಹಾಗೂ ಆಸ್ಪತ್ರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಪ್ರಸನ್ನಕುಮಾರ್ ಇದೇ ವೇಳೆ ಸಲಹೆ ನೀಡಿದರು. ಕೆ.ಆರ್. ಆಸ್ಪತ್ರೆ ವೈದ್ಯ ಕೀಯ ಅಧೀಕ್ಷಕ ಡಾ.ಬಿ.ಎಲ್.ನಂಜುಂಡ ಸ್ವಾಮಿ, ಸ್ಥಾನಿಕ ವೈದ್ಯಾಧಿಕಾರಿ ಡಾ.ಎಂ.ಎಸ್. ರಾಜೇಶ್ ಕುಮಾರ್, ಭದ್ರತಾ ಸೂಪರ್ ವೈಸರ್ ಮಹದೇವು, ಮಹದೇವಸ್ವಾಮಿ ಹಾಗೂ ಇತರರು ಪುನಶ್ಚೇತನಾ ಸಭೆ ಯಲ್ಲಿ ಪಾಲ್ಗೊಂಡಿದ್ದರು.