ಸರ್ಕಾರಿ ಶಾಲೆಗಳ ಮೂಲ ಸೌಲಭ್ಯಕ್ಕೆ ಆದ್ಯತೆ: ಶತಮಾನ ತುಂಬಿದ ಶಾಲೆಗೆ ಸಚಿವ ಮಹೇಶ್ ಭೇಟಿ, ಪರಿಶೀಲನೆ
ಚಾಮರಾಜನಗರ

ಸರ್ಕಾರಿ ಶಾಲೆಗಳ ಮೂಲ ಸೌಲಭ್ಯಕ್ಕೆ ಆದ್ಯತೆ: ಶತಮಾನ ತುಂಬಿದ ಶಾಲೆಗೆ ಸಚಿವ ಮಹೇಶ್ ಭೇಟಿ, ಪರಿಶೀಲನೆ

July 15, 2018

ಯಳಂದೂರು:  ‘ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು.

ಪಟ್ಟಣದಲ್ಲಿರುವ ದಿವಾನ್ ಪೂರ್ಣಯ್ಯ ಅವರ ಕಾಲದಲ್ಲಿ ನಿರ್ಮಾಣಗೊಂಡಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಶತಮಾನ ತುಂಬಿದ ಪ್ರಾಚೀನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಯನ್ನು ಅದರ ಪ್ರಾಚೀನ ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಧಕ್ಕೆಯಾಗದ ರೀತಿ ದುರಸ್ತಿಗೊಳಿಸ ಲಾಗುವುದು. ಶೀಘ್ರದಲ್ಲಿಯೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಶಾಲಾ ದುರ ಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಸಾಕಷ್ಟು ಪ್ರಮಾಣದಲ್ಲಿ ಇದೆ. ಶೌಚಾಲಯ, ಕ್ರೀಡಾಂಗಣ, ಶಾಲಾ ಕಾಂಪೌಂಡ್, ಹೆಚ್ಚುವರಿ ಕೊಠಡಿ, ಗ್ರಂಥಾಲಯ ಸೇರಿದಂತೆ ಹಲವು ಸಮಸ್ಯೆಗಳು ಸಾಮಾನ್ಯವಾಗಿವೆ. ಇದನ್ನು ಬಗೆಹರಿಸಲು ಅಂದಾಜು 4,568 ಕೋಟಿ ರೂ. ಅನುದಾನದ ಅಗತ್ಯವಿದೆ ಎಂದರು.

ಶಾಲೆಗಳ ದುರಸ್ತಿಗಾಗಿ 2017-18 ಹಾಗೂ 2018-19ನೇ ಸಾಲಿನ ಬಜೆಟ್‍ಗಳಿಂದ 480 ಕೋಟಿ ರೂ. ಅನುದಾನ ಮಾತ್ರ ಲಭ್ಯವಿದೆ. ಆದ್ದರಿಂದ ತುರ್ತಾಗಿ ಆಗಬೇಕಾಗಿರುವ ಶಾಲೆಗಳ ದುರಸ್ತಿಗೆ ಮೊದಲ ಆದ್ಯತೆ ನೀಡ ಲಾಗುವುದು. ಉಳಿದ ಶಾಲೆಗಳನ್ನು ಹಂತ ಹಂತವಾಗಿ ಪ್ರತಿ ವರ್ಷ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವು ಎಂದು ತಿಳಿಸಿದರು.

ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಸರ್ಕಾರಿ ಶಾಲಾ ಕಟ್ಟಡಗಳು ಹದಗೆಟ್ಟಿದ್ದು ಅವುಗಳ ದುರಸ್ತಿಗಾಗಿ ಪ್ರತಿ ಶಾಸಕರು ಕೂಡ ವಿಧಾನಸಭಾ ಅಧಿವೇಶನಗಳಲ್ಲಿ ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ರಾಜ್ಯದ ಎಲ್ಲಾ ಶಾಸಕರು ತಮ್ಮ ಅನುದಾನದಲ್ಲಿ ಶೇ.50 ರಷ್ಟನ್ನು ಸರ್ಕಾರಿ ಶಾಲೆಗಳ ದುರಸ್ತಿಗಾಗಿ ಕಾಯ್ದಿರಿಸಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್ ಕೆ.ಚಂದ್ರಮೌಳಿ, ಜಿಲ್ಲಾ ಶಿಕ್ಷಣ ಸಮನ್ವಯಾಧಿಕಾರಿ ಗುರುಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ತಿರುಮಲಾಚಾರಿ, ಮುಖ್ಯಾ ಧಿಕಾರಿ ಎಸ್.ಉಮಾಶಂಕರ, ಸಿಪಿಐ ರಾಜೇಶ್, ಪಿಎಸ್‍ಐ ಶ್ರೀಧರ್, ಲೋಕೋಪಯೋಗಿ ಇಲಾಖೆ ಜೆಇ ಶಿವಕುಮಾರ್ ಮಾಜಿ ಧರ್ಮದರ್ಶಿ ಎನ್.ದೊರೆಸ್ವಾಮಿ ಹಾಜರಿದ್ದರು.

Translate »