ಸಚಿವರಿಗೆ ಜಿಗಣೆ ಕಾಟ!
ಕೊಡಗು

ಸಚಿವರಿಗೆ ಜಿಗಣೆ ಕಾಟ!

July 15, 2018

ಮೈಸೂರು: ಕೊಡಗಿನ ವಿವಿಧ ಪ್ರವಾಸಿ ತಾಣಗಳಿಗೆ ಇಂದು ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಕಾಲಿನ ಮೇಲೆ ಜಿಗಣೆ ಹತ್ತಿದೆ. ಆದರೆ, ಅದರ ಅರಿವಿಲ್ಲದೆ ಸಚಿವರು ಮೈಸೂರಿಗೆ ಆಗಮಿಸಿದ್ದಾರೆ.

ಸಂಜೆ ಮೈಸೂರಿನ ಟೌನ್‍ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಆಗಮಿಸಿದಾಗ ಜಿಗಣೆ ಕಚ್ಚಿದ ನೋವಿನ ಅನುಭವ ಅವರಿಗಾಗಿದೆ. ತಕ್ಷಣವೇ ಅಧಿಕಾರಿಗಳು ಟೌನ್‍ಹಾಲ್‍ಗೆ ವೈದ್ಯರನ್ನು ಕರೆಯಿಸಿದರು. ಅಲ್ಲಿನ ಕಚೇರಿಯಲ್ಲಿ ವೈದ್ಯರು ಸಚಿವರ ಕಾಲಿನಲ್ಲಿ ಕಚ್ಚಿಕೊಂಡಿದ್ದ ಜಿಗಣೆಯನ್ನು ತೆಗೆದುಹಾಕಿ, ರಕ್ತ ಸೊರುವುದನ್ನು ನಿಲ್ಲಿಸಲು ತುರ್ತು ಚಿಕಿತ್ಸೆ ನೀಡಿದರು. ನಂತರ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Translate »