ಹೋಂ ಸ್ಟೇಗಳ ನೋಂದಣಿಗೆ ಆ.2ರ ಗಡುವು
ಕೊಡಗು

ಹೋಂ ಸ್ಟೇಗಳ ನೋಂದಣಿಗೆ ಆ.2ರ ಗಡುವು

July 15, 2018

ಮಡಿಕೇರಿ: ಜಿಲ್ಲೆಯ ವಿವಿದೆಢೆ ಗಳಲ್ಲಿರುವ ಹೋಂಸ್ಟೇಗಳನ್ನು ಆ. 2 ರೊಳ ಗಾಗಿ ನೋಂದಣಿ ಮಾಡಿಕೊಳ್ಳದಿದ್ದಲ್ಲಿ ಅಂತಹ ಹೋಂಸ್ಟೇಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಎಚ್ಚರಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಅವರು, ಕೊಡಗಿನಲ್ಲಿ ನೂರಾರು ಹೋಂಸ್ಟೇಗಳಿದ್ದರೂ ಈವರೆಗೆ ಕೇವಲ 200 ಹೋಂಸ್ಟೇಗಳು ಮಾತ್ರ ಅಧಿಕೃತವಾಗಿ ನೋಂದಣಿಯಾಗಿದೆ. ಆಗಸ್ಟ್ 2 ರೊಳಗಾಗಿ ನೋಂದಾಯಿಸಲ್ಪಡದ ಹೋಂಸ್ಟೇಗಳು ಪ್ರವಾಸೋ ದ್ಯಮ ಇಲಾಖೆಯಲ್ಲಿ ನೋಂದಣಿಯಾಗಬೇಕೆಂದು ಆದೇಶಿಸಿದರು.

ಕೊಡಗಿನ ಹೋಂಸ್ಟೇಗಳು ಭದ್ರತೆ ಮತ್ತು ನೈಸರ್ಗಿಕ ಸ್ವಚ್ಚತೆ ದೃಷ್ಟಿಯಿಂದ ಕಡ್ಡಾಯ ವಾಗಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿಕೊಂಡಿರ ಬೇಕು. ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳುವುದಾ ಗಿಯೂ ಎಚ್ಚರಿಸಿದರು. ಮಡಿಕೇರಿಯಲ್ಲಿ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‍ನ ನೂತನ ರೆಸಾರ್ಟ್ ಪ್ರಾರಂಭಿಸುವ ಯೋಜ ನೆಯಿದೆ ಎಂದೂ ಹೇಳಿದ ಸಚಿವರು, ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಖಾಯಂ ಅಧಿಕಾರಿಯನ್ನು ನೇಮಕ ಮಾಡಲಾಗು ತ್ತದೆ ಎಂದು ಭರವಸೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಎಂ.ಪಿ.ಸುನೀಲ್ ಸುಬ್ರಹ್ಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಜಿಲ್ಲಾಧಿಕಾರಿ ಶ್ರೀವಿದ್ಯಾ ಉಪಸ್ಥಿತರಿದ್ದರು.

Translate »