ಚಿತ್ರಕಲಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ
ಮೈಸೂರು

ಚಿತ್ರಕಲಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

January 17, 2020

ಮೈಸೂರು, ಜ.16(ಎಂಕೆ)- ಮೈಸೂ ರಿನ ಕುವೆಂಪುನಗರದಲ್ಲಿರುವ ಗಾನ ಭಾರತಿ ಸಭಾಂಗಣದಲ್ಲಿ ಕರ್ನಾಟಕ ನವೀ ಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ವತಿಯಿಂದ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧಾ ವಿಜೇತರಿಗೆ ಬಹು ಮಾನ ವಿತರಿಸಲಾಯಿತು.

‘ಇಂಧನ ಉಳಿತಾಯ’ ಕುರಿತು 4ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿ ಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ 170 ವಿದ್ಯಾರ್ಥಿಗಳಲ್ಲಿ ವಿವಿಧ ಶಾಲೆಯ 16 ವಿದ್ಯಾರ್ಥಿಗಳು ಬಹುಮಾನ ಪಡೆದು ಕೊಂಡರು. ಎರಡು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 4,5 ಮತ್ತು 6ನೇ ತರಗತಿ ವಿಭಾಗದಲ್ಲಿ ನೊಟ್ರೆ ಡೇಮ್ ಶಾಲೆಯ ವೈ. ದೀಕ್ಷಿತಾ ಪ್ರಥಮ ಸ್ಥಾನ, ಸೆಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್‍ನ ಶ್ರೇಯಸ್ ಜೋಷಿ ದ್ವಿತೀಯ ಮತ್ತು ಲಿತೀಶ್ ಗೌಡ ತೃತೀಯ ಸ್ಥಾನ ಪಡೆದುಕೊಂಡರು. ಸಮಾಧಾನಕರ ಬಹುಮಾನವನ್ನು ಮಹಾಜನ ಪಬ್ಲಿಕ್ ಸ್ಕೂಲ್‍ನ ಎಂ.ಬಿ.ಖುಷಿ, ಮೈಸೂರ್ ವೆಸ್ಟ್ ಲಯನ್ಸ್ ಸ್ಕೂಲ್‍ನ ಕೆ.ಅಭಿಜ್ಞ, ಪ್ರಮತಿ ಹಿಲ್‍ವ್ಯೂ ಶಾಲೆಯ ಶಿವಾನಿ, ರಾಮಕೃಷ್ಣ ವಿದ್ಯಾಕೇಂದ್ರದ ಎಂ.ವಿ.ಶ್ರೇಯಾ, ಆರ್‍ಸಿ ಐಎಸ್ ಸ್ಕೂಲ್‍ನ ಸಿ.ಸಂಕೇತ್ ಪಡೆದು ಕೊಂಡರು. 7,8 ಮತ್ತು 9ನೇ ತರಗತಿ ವಿಭಾಗದಲ್ಲಿ ಆರ್‍ಸಿಐಎಸ್ ಸ್ಕೂಲ್‍ನ ಸಾಕ್ಷಿ ಸಿ.ಶೆಟ್ಟಿ ಪ್ರಥಮ, ಸೆಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್‍ನ ಶಿವಾನಿ ಹರೀಶ್ ದ್ವಿತೀಯ ಹಾಗೂ ರಾಯಲ್ ಕಾನ್‍ಕಾರ್ಡ್ ಶಾಲೆಯ ಎಸ್. ಸನಿಕಾ ತೃತೀಯ ಸ್ಥಾನ ಪಡೆದರೆ, ಸಮಾ ಧಾನಕರ ಬಹುಮಾನವನ್ನು ಅಮೃತ ವಿದ್ಯಾ ಲಯದ ಎಸ್.ಸಂಜು, ಸದ್ವಿದ್ಯಾ ಶಾಲೆಯ ಶರಣ್ಯ ಎಸ್.ಕುಮಾರ್, ಬೇಡನ್ ಪೋವೆಲ್ ಸ್ಕೂಲ್‍ನ ತನ್ಯ ಚೌದರಿ, ಕೆಎನ್‍ಸಿ ಇನ್ನೋ ವೆಟೀವ್ ಗ್ಲೋಬಲ್ ಸ್ಕೂಲ್‍ನ ಎನ್. ಹರಿಣಿ ಮತ್ತು ಸಿಕೆಸಿಹೆಚ್ ಶಾಲೆಯ ಎಂ.ಸಿ.ಭಾರ್ಗವಿ ಪಡೆದರು.

ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಎಂ.ಎಸ್. ಜಯಂತ್ ಮಾತನಾಡಿ, ವಿದ್ಯಾರ್ಥಿಗಳು ಓದಿನೊಂದಿಗೆ ಚಿತ್ರಕಲೆಯಲ್ಲಿ ತೊಡಗಿಸಿ ಕೊಳ್ಳುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಸ್ಪರ್ಧಾಳುಗಳು ಹೆಚ್ಚಾದಷ್ಟು, ಫಲಿತಾಂಶ ಗುಣಮಟ್ಟದಿಂದ ಕೂಡಿರುತ್ತದೆ ಎಂಬು ದಕ್ಕೆ 170 ವಿದ್ಯಾರ್ಥಿಗಳಿಗೆ ನಡೆದ ಚಿತ್ರಕಲಾ ಸ್ಪರ್ಧೆ ಸಾಕ್ಷಿಯಾಗಿದೆ ಎಂದರು.

ಸ್ವಚ್ಛ ಸರ್ವೇಕ್ಷಣೆ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ಬೆಳಿಗ್ಗೆ ಯಿಂದ ಸಂಜೆವರೆಗೂ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಮೈಸೂರಿಗೆ ಸ್ವಚ್ಛತೆಯಲ್ಲಿ ಮತ್ತೆ ಮೊದಲ ಸ್ಥಾನ ಸಿಗಬೇಕಾದರೆ ಸಾರ್ವ ಜನಿಕರ ಸಹಕಾರ ಮತ್ತು ಪ್ರತಿಕ್ರಿಯೆ ಮುಖ್ಯವಾಗಿದೆ ಎಂದು ತಿಳಿಸಿದರು.

ದೇಶದಲ್ಲಿಯೇ ಮೈಸೂರು ಖ್ಯಾತಿ ಗಳಿ ಸಿದ್ದು ಸ್ವಚ್ಛತೆಯಿಂದ. ಈ ನಿಟ್ಟಿನಲ್ಲಿ ಮೈಸೂ ರನ್ನು ಮತ್ತೆ ಮೊದಲ ಸ್ಥಾನಕ್ಕೆ ತರಬೇಕಾ ಗಿದೆ. ಪ್ರಾರಂಭದಲ್ಲಿ ಸ್ವಚ್ಛ ನಗರ ಪಟ್ಟಕ್ಕಾಗಿ ಕಡಿಮೆ ನಗರಗಳು ಸ್ಪರ್ಧಿಸಿದ್ದವು. ನಂತ ರದ ವರ್ಷಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿ ಸುತ್ತಿರುವ ನಗರಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪೈಪೋಟಿ ಹೆಚ್ಚಾಗಿದ್ದು, ಇದರಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ ಎಂದರು.

ಮನೆಯಲ್ಲಿಯೇ ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಿ, ಪೌರಕಾರ್ಮಿ ಕರಿಗೆ ನೀಡಿ. ಹಸಿಕಸದಿಂದ ಮನೆಯಲ್ಲಿಯೇ ಗೊಬ್ಬರ ತಯಾರಿಕೆ ಮಾಡುವ ವಿದಾನವನ್ನು ತಿಳಿದುಕೊಳ್ಳಿ. ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ ವತಿಯಿಂದ ಮಾಹಿತಿ ನೀಡಲಾಗು ತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇಂಧನ ಇಲಾಖೆಯ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಅಂಗೀಕೃತ ಇಂಧನ ವ್ಯವಸ್ಥಾಪಕ ಅನಿಲ್ ಕುಮಾರ್, ಕೆಆರ್‍ಇಡಿಎಲ್ ಮೈಸೂರು ವಿಭಾಗದ ಯೋಜನಾ ಅಭಿಯಂತರ ಡಿ.ಕೆ. ದಿನೇಶ್ ಕುಮಾರ್, ಚಿತ್ರಕಲಾ ವಿದೆ ಸಂಗೀತ, ಸುಮರಾಜ್‍ಕುಮಾರ್ ಇದ್ದರು.

Translate »