ಮೈಸೂರು: ರಾಜ್ಯದಲ್ಲಿನ ಬಡ್ತಿ ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಮೈಸೂರು ವಿಭಾಗೀಯ ಎಸ್‍ಸಿ, ಎಸ್‍ಟಿ ನೌಕರರು, ಅಧಿಕಾರಿ ಗಳ ಪರಿಷತ್ ಸ್ವಾಗತಿಸಿದೆ. ಇದೇ ವೇಳೆ ಅದಕ್ಕೆ ತಡೆಯಾಜ್ಞೆ ದೊರೆಯದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ಕೂಡಲೇ ಆದೇಶ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ.
ಪರಿಷತ್ ಗೌರವಾಧ್ಯಕ್ಷ ಶಾಂತರಾಜು ಅವರು ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1947ರ ಹಿಂದೆ ಎಸ್‍ಸಿ, ಎಸ್‍ಟಿ ವರ್ಗದವರಿಗೆ ಇದ್ದ ಪರಿಸ್ಥಿತಿ ಕೇವಲ 1950ರ ನಂತರ ಸ್ವಲ್ಪಮಟ್ಟಿಗೆ ಬದ ಲಾಗಿದೆ. ಅದನ್ನು ಸಹಿಸದವರು ಮೀಸಲಾತಿ ಕೇವಲ ಎಸ್‍ಸಿ, ಎಸ್‍ಟಿ ವರ್ಗ ದವರಿಗೆ ಮಾತ್ರ ಎಂದು ಅಸಮಾಧಾನಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಆದರೆ ಅವರೆಲ್ಲರೂ ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಮೀಸಲಾತಿ ಸಿಗುತ್ತಿರುವು ದನ್ನು ಮರೆತಿದ್ದಾರೆ. ಆದರೆ ಇದೇ ವೇಳೆ ಮೇಲ್ವರ್ಗದವರಿಗೆ ಶೇ. 10 ಮೀಸಲಾತಿ ನೀಡಿಕೆ ಸಂಸತ್‍ನಲ್ಲಿ ಯಾವುದೇ ಚರ್ಚೆ ಅಂಗೀಕಾರವಾದರೂ ಆ ಬಗ್ಗೆ ಯಾರೂ ಚಕಾರ ಎತ್ತಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಮುಖ ಸಾಹಿತಿಯೊಬ್ಬರು ದೇಶದಲ್ಲಿ ಮನುಧರ್ಮ ಶಾಸ್ತ್ರವನ್ನು ಅನುಸರಿಸಬೇಕೆನ್ನುತ್ತಾರೆ. ಅವರು ಅನುಸರಿಸಲಿ, ಅದಕ್ಕೆ ತಮ್ಮ ಅಭ್ಯಂತರವಿಲ್ಲ. ಆದರೆ ವಿವಿಧತೆಯಲ್ಲಿ ಏಕತೆ ಹಿಡಿದಿಡುವ ಸಂವಿಧಾನಕ್ಕೆ ಧಕ್ಕೆ ಬರು ವಂತಾದರೆ ತಾವೆಂದೂ ಸಹಿಸುವುದಿಲ್ಲ. ಅದರ ವಿರುದ್ಧ ಹಾಗೂ ಸಚಿವ ಅನಂತ ಕುಮಾರ್ ಅವರ ಸಂವಿಧಾನ ಬದಲಿಕೆ ಮಾಡಲಾಗುವುದೆಂಬ ಮಾತುಗಳ ವಿರುದ್ಧ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಿದ್ದಸ್ವಾಮಿ, ಮಹೇಶ್, ಚಿಕ್ಕಂದಾನಿ, ಶಿವಪ್ಪ, ಶಿವಸ್ವಾಮಿ ಉಪಸ್ಥಿತರಿದ್ದರು.