ಹಿಂದೂ ಭಕ್ತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಕೊಡಗು

ಹಿಂದೂ ಭಕ್ತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

November 28, 2018

ಕುಶಾಲನಗರ: ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಹಿಂದೂ ಧರ್ಮದ ಪರವಾಗಿ ಹೋರಾಟ ನಡೆಸುತ್ತಿರುವ ಹಿಂದೂ ಭಕ್ತರ ಮೇಲೆ ಕೇರಳ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಿಂದೂ ಜನಜಾಗೃತಿ ಸಮಿತಿ ಹಾಗೂ ವಿವಿಧ ಹಿಂದೂಪರ ಸಂಘಟನೆಯ ಕಾರ್ಯ ಕರ್ತರು ಇಲ್ಲಿನ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿ ಹಿಂದೂ ಭಕ್ತರ ಮೇಲೆ ಪೊಲೀ ಸರು ಲಾಠಿ ಪ್ರಹಾರ ಮಾಡುತ್ತಿದ್ದಾರೆ. ಧರ್ಮವಿರೋಧಿಗಳ ರಕ್ಷಣೆಯನ್ನು ಕೇರಳ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಿಲು ಯತ್ನಿ ಸುತ್ತಿರುವ ಧರ್ಮವಿರೋಧಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾ ರರು, ಈಗಾಗಲೇ ಎರಡು ಸಾವಿರ ಹಿಂದೂ ಭಕ್ತರ ಮೇಲೆ ದಾಖಲಿಸಿರುವ ಮೊಕದ್ದಮೆ ಯನ್ನು ಕೇರಳ ಸರ್ಕಾರ ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಹಿಂದೂ ರಾಷ್ಟ್ರಕ್ಕೆ ಜಯವಾಗಲಿ, ಹರ ಹರ ಮಹಾದೇವ, ಜೈ ಜೈ ಹಿಂದೂ ರಾಷ್ಟ್ರ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಅಶ್ಲೀಲತೆಯನ್ನು ಹರಡುವ ಸನೀ ಲಿಯೊನ್‍ಗೆ ವೀರಮಾದೇವಿಯ ಭೂಮಿಕೆಯನ್ನು ನೀಡುವ ನಿರ್ದೇಶಕರಿಗೆ ಧಿಕ್ಕಾರ ಎಂದು ಕೂಗಿದ ಅವರು ಕೂಡಲೇ ಈ ಚಲನಚಿತ್ರವನ್ನು ನಿಬರ್ಂಧಿಸಬೇಕು ಎಂದು ಆಗ್ರಹಿಸಿದರು. ಅದೇ ರೀತಿ ಕೇರಳ ಪಾದ್ರಿ ಸಾವಿನ ಹಿಂದಿನ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

ಹಿಂದೂ ಜನಜಾಗೃತಿ ಸಂಯೋಜಕ ಮೈಸೂರಿನ ಶಿವರಾಮ್ ಮಾತನಾಡಿ, ಹಿಂದೂ ರಾಷ್ಟ್ರ ಹಾಗೂ ಧರ್ಮ ಸಂಕಟದಲ್ಲಿದೆ. ಆದ್ದರಿಂದ ಪ್ರತಿಯೊಬ್ಬ ಹಿಂದೂ ಬಾಂಧವರು ಒಂದಾಗುವ ಮೂಲಕ ಕಾನೂನಾತ್ಮಕ ಹೋರಾಟ ನಡೆಬೇಕಾಗಿದೆ ಎಂದು ಹೇಳಿದರು. ಹಿಂದೂ ಜಾಗರಣ ವೇದಿಕೆ ಮುಖಂಡ ಬಿ.ಅಮೃತ್ ರಾಜ್ ಮಾತನಾಡಿ, ಪಾರ್ನ್ ಸ್ಟಾರ್ ಸನೀಲಿಯೋನ್ ಗೆ ವೀರಮಾದೇವಿಯ ಭೂಮಿಕೆಯಲ್ಲಿ ತೋರಿಸುವುದು. ಇದು ವೀರಮಾದೇವಿಗೆ ಮಾಡುವ ಘೋರ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಹಿಂದೂ ಜನಜಾಗೃತಿ ಸಮಿತಿ ಶ್ರೀಲಕ್ಷ್ಮಿರವಿಚಂದ್ರ, ಉಮಾ, ಶ್ರೀನಾಥ್, ರವಿಂದ್ರ, ಲಕ್ಷ್ನಿಹರಿಶ್, ಎಬಿವಿಪಿ ನವನೀತ್, ಹಿಂದಝಜಾಗರಣ ವೇದಿಕೆ ಸಂಚಾಲಕ ಮಂಜುನಾಥ್, ಮುಖಂಡ ಬೋಷ್ ಮೊಣ್ಣಪ್ಪ, ಎಂ.ಡಿ.ಕೃಷ್ಣಪ್ಪ, ಶಶಿಕುಮಾರ್, ರಾಮದಾಸ್ ಮತ್ತಿತರರು ಇದ್ದರು.

Translate »