ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿರೇಬೇಗೂರಿ ನಲ್ಲಿ ಶ್ರೀ ಭಗೀರಥ ಮಹರ್ಷಿಯ ಭಾವಚಿತ್ರಕ್ಕೆ ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ, ಗಡಿಪಾರು ಮಾಡುವಂತೆ ಆಗ್ರಹಿಸಿ ನಗರದಲ್ಲಿ ಶನಿವಾರ ಶ್ರೀ ಭಗೀರಥ ಯುವಸೇನೆಯಿಂದ ಪ್ರತಿಭಟನೆ ನಡೆಯಿತು.
ಶ್ರೀಚಾಮರಾಜೇಶ್ವರ ಸ್ವಾಮಿ ದೇವಾಲಯ ದಲ್ಲಿ ಆವರಣದಲ್ಲಿ ಸಂಘದ ಅಧ್ಯಕ್ಷ ಮಂಜು ನಾಥ್ ಅವರ ನೇತೃತ್ವದಲ್ಲಿ ಸಮಾವೇಶ ಗೊಂಡ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಾವೇರಿ ಅವರಿಗೆ ಮನವಿ ಸಲ್ಲಿಸಿದರು.
ಹಿರೇಬೇಗೂರಿನಲ್ಲಿ ಭಗೀರಥ ಮಹರ್ಷಿಯ ಭಾವಚಿತ್ರಕ್ಕೆ ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ, ಗಡಿಪಾರು ಮಾಡಬೇಕು. ಆ ಸ್ಥಳದಲ್ಲಿಯೇ ಸರ್ಕಾರ ಹಾಗೂ ಜಿಲ್ಲಾಡಳಿತ ವತಿಯಿಂದ ಶ್ರೀಭಗೀರಥರ ಪ್ರತಿಮೆ ನಿರ್ಮಿಸಬೇಕು. ಘಟನೆಯಲ್ಲಿ ರಾಜಕೀಯ ಷಡ್ಯಂತ್ರ ಅಡಗಿರುವುದರಿಂದ ಸಿಓಡಿ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.
ಕಠಿಣ ತಪಸ್ಸು ಮಾಡಿ ಧರೆಗೆ ಗಂಗೆಯನ್ನು ತಂದು ಕೊಟ್ಟಂತಹ ಉಪ್ಪಾರ ಸಮುದಾಯದ ಧಾರ್ಮಿಕ ಗುರು ಭಗೀರಥರ ಭಾವಚಿತ್ರಕ್ಕೆ ಅವಮಾನ ಮಾಡಿರುವುದು ಉಪ್ಪಾರ ಸಮುದಾಯಕ್ಕೆ ತೀವ್ರ ನೋವಾಗಿದೆ. ಇಂತಹ ಘಟನೆಗಳು ಮರು ಕಳಿಸದಂತೆ ಮುಂಜಾಗ್ರತಾ ಕ್ರಮವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಎಸ್‍ಸಿ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಬಾಗಳಿ ರೇವಣ್ಣ, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಲಿಂಗರಾಜು, ಮುಖಂಡರಾದ ನಾಗ ಶೆಟ್ಟಿ, ಮಸಣಶೆಟ್ಟಿ, ಚೆನ್ನಿಗಶೆಟ್ಟಿ, ಮಂಗಲ ಕೃಷ್ಣ, ಶ್ರೀನಿವಾಸ, ಸಿದ್ದರಾಜು, ಜಿ.ಎಂ. ಗಾಡ್ಕರ್, ಮಹದೇವಸ್ವಾಮಿ, ಸುರೇಶ್ ವಾಜಪೇಯಿ, ರಾಜೇಂದ್ರ, ಸಿ.ಬಿ.ಕೃಷ್ಣ, ತಾವರಕಟ್ಟೆ ಮಹೇಶ್, ಕೋಡಿಮೋಳೆ ಗೋವಿಂದಶೆಟ್ಟಿ, ಸಿ.ಎನ್.ಬಸವಣ್ಣ, ಶಿವಣ್ಣ ಶೆಟ್ಟಿ, ಮಂಗಲಶಿವಣ್ಣ, ಕುಮಾರ್, ವೆಂಕಟೇಶ್, ನಟ, ಮಾಕಟ, ಆನಂದ ಭಗೀ ರಥ, ಗಾರೆಗೋಪಾಲ್, ಜವರಶೆಟ್ಟಿ, ಹನುಮ ಶೆಟ್ಟಿ, ಮಹೇಶ್, ವಿವೇಕ್ ಸೇರಿ ದಂತೆ ತಾಲೂಕಿನ ಎಲ್ಲಾ ಗ್ರಾಮದ ಉಪ್ಪಾರ ಸಮುದಾಯದ ಸಂಘ-ಸಂಸ್ಥೆ ಗಳ ಪದಾಧಿಕಾರಿಗಳು ಹಾಗೂ ಯಜ ಮಾನರು ಪಾಲ್ಗೊಂಡಿದ್ದರು.