ಗುಂಡ್ಲುಪೇಟೆ ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ
ಚಾಮರಾಜನಗರ

ಗುಂಡ್ಲುಪೇಟೆ ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ

October 10, 2018

ಗುಂಡ್ಲುಪೇಟೆ:  ನೆರೆ ರಾಜ್ಯ ಕೇರಳದ ಕಸಾಯಿಖಾನೆ ಮತ್ತು ಆಸ್ಪತ್ರೆ ತ್ಯಾಜ್ಯಗಳನ್ನು ತಂದು ಪಟ್ಟಣದ ವ್ಯಾಪ್ತಿಯಲ್ಲಿ ಸುರಿಯುತ್ತಿರುವುದನ್ನು ತಡೆ ಗಟ್ಟುವಲ್ಲಿ ತಾಲೂಕು ಆಡಳಿತ ವಿಫಲ ವಾಗಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಮಂಗಳ ವಾರ ಕÀರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಕಾವಲು ಪಡೆ ಸೇರಿ ದಂತೆ ವಿವಿಧ ಪ್ರಗತಿ ಪರ ಸಂಘಟನೆಗಳು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ದಲ್ಲಿ ಸಮಾವೇಶಗೊಂಡ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದರು.

ಕರವೇ ಅಧ್ಯಕ್ಷ ಸುರೇಶ್‍ನಾಯಕ್ ಮಾತನಾಡಿ, ಕೇರಳ ರಾಜ್ಯವು ಕರ್ನಾಟಕ ವನ್ನು ಕಸದ ತೊಟ್ಟಿಯನ್ನಾಗಿ ಮಾಡಿ ಕೊಂಡಿದೆ. ನಮ್ಮ ಊರಿನಿಂದ ಪ್ರತಿನಿತ್ಯ ಟನ್‍ಗಟ್ಟಲೇ ಹಣ್ಣು ತರಕಾರಿ ಮತ್ತಿತರೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹಲ ವಾರು ವಾಹನಗಳು ಹೋಗುತ್ತದೆ. ಆದರೆ, ಅಲ್ಲಿಂದ ವಾಪಸ್ ಬರುವಾಗ ಕೆಲವು ವಾಹನಗಳು ಕೇರಳದ ವಿವಿಧ ಭಾಗದ ಕಸಾಯಿಖಾನೆ, ಆಸ್ಪತ್ರೆ, ಕೈಗಾರಿಕಾ ವಲಯದ ಮತ್ತು ಹಣ್ಣು ತರಕಾರಿಗಳ ತ್ಯಾಜ್ಯವನ್ನು ತರುತ್ತಿವೆ. ಅವುಗಳನ್ನು ಕತ್ತಲಾಗುತ್ತಿದ್ದಂತೆಯೇ ತಂದು ಪಟ್ಟಣದ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡುತ್ತಿದೆ. ಇಂತಹ ಎರಡಕ್ಕೂ ಹೆಚ್ಚು ಪ್ರಕರಣಗಳನ್ನು ಕರವೇ ಪತ್ತೆ ಹಚ್ಚಿ ಪೆÇಲೀಸರ ವಶಕ್ಕೆ ನೀಡಿದೆ ಎಂದರು.

ಪಟ್ಟಣದ ಕಲ್ಯಾಣಿ ಕೊಳದ ಸಮೀಪದ ಜಮೀನಿನಲ್ಲಿ ತ್ಯಾಜ್ಯವನ್ನು ಹೂಳುತ್ತಿದ್ದಾಗಲೂ ದಾಳಿ ನಡೆಸಿ ಲಾರಿಗಳನ್ನು ಪೆÇಲೀಸ್ ವಶಕ್ಕೆ ನೀಡಿದ್ದೆವು. ರಾಜ್ಯದ ಗಡಿಗಳಲ್ಲಿ ನಾಲ್ಕು ಚೆಕ್‍ಪೆÇೀಸ್ಟ್‍ಗಳಿದ್ದು ಅರಣ್ಯ ಹಾಗೂ ಪೆÇಲೀಸ್ ಸಿಬ್ಬಂದಿ ಕಾರ್ಯನಿರ್ವ ಸುತ್ತಿದ್ದಾರೆ. ಬೇರೆ ವಾಹನಗಳನ್ನು ತನಿಖೆ ನಡೆಸುವ ಸಿಬ್ಬಂದಿಗಳು ಇಂತಹ ತ್ಯಾಜ್ಯ ತುಂಬಿದ ವಾಹನಗಳನ್ನು ಹಣ ಪಡೆದು ಬಿಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಸಿ.ಭಾರತಿ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಯನ್ನು ಆಲಿಸಿದರು. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಕರವೇ ಪದಾಧಿಕಾರಿ ಗಳಾದ ಸುರೇಶ್, ರಾಜೇಂದ್ರ, ನಾಗ ರಾಜು, ಜಗದೀಶ್, ರಮೇಶ್, ಚನ್ನ ನಾಯಕ್, ಸ್ವಾಮಿ ಸೇರಿದಂತೆ ಕರ್ನಾಟಕ ಕಾವಲು ಪಡೆ ಪದಾಧಿಕಾರಿಗಳು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿ ಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Translate »