ಮೈಸೂರು: ಮಂಗಳವಾರ ನಿಧನರಾದ ಜಿಲ್ಲಾ ಕನ್ನಡ ರಾಜ್ಯೋ ತ್ಸವ ಪ್ರಶಸ್ತಿ ಪುರಸ್ಕøತ ಜನಪದ ಹಾಗೂ ರಂಗಭೂಮಿ ಕಲಾವಿದೆ, ಏಕಲವ್ಯನಗರದ ನಿವಾಸಿ ಶತಾಯುಷಿ ಮುನಿಯಮ್ಮ ಅವರ ಪಾರ್ಥಿವ ಶರೀರ ಅಂತ್ಯಕ್ರಿಯೆಗೆ ಸ್ಥಳವಿಲ್ಲದ ಕಾರಣ ಬುಧವಾರ ಏಕಲವ್ಯನಗರದ ನಿವಾಸಿಗಳು ದಸಂಸ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಹಿರಿಯ ಕಲಾವಿದರೂ ಆಗಿದ್ದ ಮುನಿಯಮ್ಮ ಅಲೆಮಾರಿ ಸಮುದಾಯಕ್ಕೆ ಸೇರಿದ್ದು, ಏಕಲವ್ಯ ನಗರದಲ್ಲಿ ಕಳೆದ ಹಲವು ವರ್ಷಗಳಿಂದ ವಾಸಿಸುತ್ತಿದ್ದರು. ಮಂಗಳವಾರ (ಏ.23) ಬೆಳಿಗ್ಗೆ 7ಕ್ಕೆ ವಯೋಸಹಜವಾಗಿ ನಿಧನರಾಗಿದ್ದರು. ರಂಗಭೂಮಿ ಮತ್ತು ಜನಪದ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡಿದ್ದ ಮುನಿಯಮ್ಮ, ಹಲವು ಪ್ರಶಸ್ತಿಗೆ ಭಾಜನರಾಗಿ ದ್ದರು. ಮೃತರ ಅಂತ್ಯಕ್ರಿಯೆಗೆ ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ಅವರ ಸಂಬಂಧಿಗಳು ಹಾಗೂ ದಸಂಸ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮೃತದೇಹವನ್ನಿಟ್ಟು ಪ್ರತಿಭಟನೆ ಮಾಡಲು ನಿರ್ಧರಿಸಿದ್ದರಿಂದ ಏಕಲವ್ಯನಗರ ದಲ್ಲಿ ಪರಿಸ್ಥಿತಿ ಪ್ರಕ್ಷುಬ್ದವಾಗಿತ್ತು. ಪ್ರತಿಭಟನೆಗೆ ಶವದೊಂದಿಗೆ ಬರುತ್ತಿದ್ದವರನ್ನು ಮೇಟ ಗಳ್ಳಿ ಠಾಣೆ ಇನ್ಸ್‍ಪೆಕ್ಟರ್ ರಾಘವೇಂದ್ರಗೌಡ ತಡೆದು, ಅವರ ಸಮಸ್ಯೆ ಆಲಿಸಿದರು.
ಕೂಡಲೇ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ತಹಶೀಲ್ದಾರ್ ಮಹೇಶ್ ಅವರಿಗೆ ವಿಷಯ ತಿಳಿಸಿದರಲ್ಲದೆ, ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿ ಮೃತದೇಹವನ್ನು ಮತ್ತೆ ಏಕಲವ್ಯನಗರಕ್ಕೆ ವಾಪಸ್ಸು ಕೊಂಡೊಯ್ಯುವಂತೆ ಮಾಡಿದರು. ಅಲ್ಲದೆ ಜೊತೆಯ ಲ್ಲಿಯೇ ಏಕಲವ್ಯನಗರಕ್ಕೆ ತೆರಳಿ ಅವರ ಸಮಸ್ಯೆ ಆಲಿಸಿದರು. ಈ ವೇಳೆ ದಲಿತ ಸಂಘರ್ಷ ಸಮಿತಿ ಮುಖಂಡ ಚೋರ್ನಹಳ್ಳಿ ಶಿವಣ್ಣ ಮಾತನಾಡಿ, ಶಾದನಹಳ್ಳಿ ಸರ್ವೆ ನಂ.64ರಲ್ಲಿ 1.11 ಎಕರೆ ಭೂಮಿ ಸ್ಮಶಾನಕ್ಕೆ ಮಂಜೂರು ಮಾಡಲಾಗಿದೆ. ಆದರೆ ಈ ಭೂಮಿ ಕಲ್ಲು ಬಂಡೆಗಳಿಂದ ಕೂಡಿದೆ. ಇದರ ಪಕ್ಕದಲ್ಲಿಯೇ ಸರ್ವೆ ನಂ.134ರ ಭೂಮಿಗೆ ಹೊಂದಿಹೊಂಡಂತೆ 30 ಗುಂಟೆ ಸರ್ಕಾರಿ ಖರಾಬು ಭೂಮಿಯಿದ್ದು, ಇಲ್ಲಿ ಹಲವು ವರ್ಷಗಳಿಂದ ಅಂತ್ಯಸಂಸ್ಕಾರ ಮಾಡುತ್ತಾ ಬರಲಾಗಿದೆ. ಆದರೆ ಇದೀಗ ಈ ಭೂಮಿ ಯನ್ನು ಸೇರಿಸಿ ರಾತ್ರೋರಾತ್ರಿ ಬೇಲಿ ಹಾಕಲಾಗಿದೆ. ಇದರಿಂದ ದೇಹಗಳ ಅಂತ್ಯಕ್ರಿಯೆ ಮಾಡಲು ಸ್ಥಳವಿಲ್ಲದೆ ಪರದಾಡುತ್ತಿದ್ದೇವೆ ಎಂದು ವಿವರಿಸಿದರು.
ತಹಶೀಲ್ದಾರ್ ಭೇಟಿ: ಜಿಲ್ಲಾಧಿಕಾರಿ ನೀಡಿದ ಸೂಚನೆ ಮೇರೆಗೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಮಹೇಶ್ ಅಸಮಾಧಾನಗೊಂಡಿದ್ದ ಏಕಲವ್ಯನಗರದ ನಿವಾಸಿಗಳ ಸಮಾಧಾನಪಡಿಸಿದರು. ಅಲ್ಲದೆ ಸರ್ವೇಯರನ್ನು ಸ್ಥಳಕ್ಕೆ ಕರೆಸಿ, ಸರ್ವೆ ನಂ 134ರ ಭೂಮಿಯನ್ನು ಅಳತೆ ಮಾಡಿಸಿ 20 ಗುಂಟೆ ಸರ್ಕಾರಿ ಭೂಮಿ ಒತ್ತುವರಿಯಾಗಿರುವು ದನ್ನು ತೆರವು ಮಾಡಿಸಿದರು. ಕಾಂಪೌಂಡನ್ನು ಜೆಸಿಬಿಯಿಂದ ನೆಲಸಮ ಮಾಡಿ ಅಂತ್ಯಕ್ರಿಯೆ ನಡೆಸಲು ಅನುವು ಮಾಡಿಕೊಟ್ಟರು. ಮುನಿಯಮ್ಮ ಅವರ ಪಾರ್ಥಿವ ಶರೀರಕ್ಕೆ ಜಿಲ್ಲಾಡಳಿತದ ವತಿಯಿಂದ ತಹಶೀಲ್ದಾರ್, ಮೇಟಗಳ್ಳಿ ಠಾಣೆ ಇನ್ಸ್‍ಪೆಕ್ಟರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗೌರವ ಸಲ್ಲಿಸಿದರು. ಬಳಿಕ ಸಂಜೆ ಯಾವುದೇ ಗೊಂದಲವಿಲ್ಲದೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.