ಲ್ಯಾಪ್‍ಟಾಪ್‍ಗೆ ಆಗ್ರಹಿಸಿ ಮೈಸೂರಲ್ಲಿ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರ ದಿಢೀರ್ ಪ್ರತಿಭಟನೆ
ಮೈಸೂರು

ಲ್ಯಾಪ್‍ಟಾಪ್‍ಗೆ ಆಗ್ರಹಿಸಿ ಮೈಸೂರಲ್ಲಿ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರ ದಿಢೀರ್ ಪ್ರತಿಭಟನೆ

February 2, 2020

ಮೈಸೂರು,ಫೆ.1(ಆರ್‍ಕೆ)-ಲ್ಯಾಪ್‍ಟಾಪ್ ಕೊಡಿಸಬೇಕೆಂದು ಒತ್ತಾಯಿಸಿ ಮೈಸೂರಿನ ಮಹಾರಾಣಿ ಪದವಿ ಕಾಲೇಜು ವಿದ್ಯಾ ರ್ಥಿನಿಯರು ಡಿಸಿ ಕಚೇರಿ ಬಳಿ ದಿಢೀರ್ ಪ್ರತಿಭಟನೆ ನಡೆಸಿದರು. ಕಾಲೇಜು ಬಳಿ ಜಮಾಯಿಸಿದ ನೂರಾರು ಪದವಿ ವಿದ್ಯಾರ್ಥಿನಿಯರು, ಈ ಹಿಂದಿನ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಪದವಿ ವಿದ್ಯಾರ್ಥಿಗಳೆಲ್ಲರಿಗೂ ಲ್ಯಾಪ್‍ಟಾಪ್ ಕೊಡುವುದಾಗಿ ಘೋಷಿಸಿದ್ದರಾದರೂ ಒಬ್ಬರಿಗೂ ಕೊಡಿಸಲಿಲ್ಲ. ಈ ವರ್ಷ ಮೊದಲನೇ ವರ್ಷದವರಿಗೆ ಮಾತ್ರ ಲ್ಯಾಪ್‍ಟಾಪ್ ವಿತರಿಸುತ್ತಿದ್ದು, ತಮಗೂ ನೀಡಬೇಕೆಂದು ದ್ವಿತೀಯ ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯರು ಒತ್ತಾಯಿಸಿದರು.

ಪ್ರಸ್ತುತ ಪಠ್ಯಕ್ರಮಕ್ಕೆ ಲ್ಯಾಪ್‍ಟಾಪ್ ಅತ್ಯವಶ್ಯವಾಗಿದೆ. ಅದನ್ನು ಕೊಂಡುಕೊಳ್ಳುವಷ್ಟು ಸಾಮಥ್ರ್ಯ ನಮಗಿರುವುದಿಲ್ಲ. ಸರ್ಕಾರ ಯೋಜನೆ ರೂಪಿಸಿದೆಯಾದರೂ ಲ್ಯಾಪ್‍ಟಾಪ್ ವಿತರಿಸದಿರುವುದರಿಂದ ನಮ್ಮ ವ್ಯಾಸಂಗಕ್ಕೆ ತೊಂದರೆಯಾಗಿದೆ ಎಂದು ಆರೋಪಿಸು ತ್ತಿದ್ದ ಅವರು, ಮೆರವಣಿಗೆಯಲ್ಲಿ ಡಿಸಿ ಕಚೇರಿ ಬಳಿಗೆ ತೆರಳಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಡಿಸಿ ಕಚೇರಿ ಶಿರಸ್ತೇದಾರ್ ನರಗುಂದ ಅವರು ವಿದ್ಯಾರ್ಥಿಗಳ ಬಳಿಗೆ ಬಂದು, ಬೇಡಿಕೆ ಆಲಿಸಿ ಮನವಿಪತ್ರ ಸ್ವೀಕರಿಸಿ ತಮ್ಮ ಬೇಡಿಕೆಗಳ ಬಗ್ಗೆ ಸಲ್ಲಿಸಿರುವ ಮನವಿಪತ್ರವನ್ನು ಸರ್ಕಾರಕ್ಕೆ ರವಾನಿಸುವುದಾಗಿ ತಿಳಿಸಿದರು. ಈ ವೇಳೆ ಲಕ್ಷ್ಮಿಪುರಂ ಠಾಣೆ ಪೊಲೀಸರು ಭದ್ರತೆ ಒದಗಿಸಿದ್ದರು.

Translate »