ಸಮರ್ಪಕ ಕುಡಿಯುವ ನೀರು ಪೂರೈಸಿ, ಕಸದ   ರಾಶಿ ತೆರವುಗೊಳಿಸಿ: ಶಾಸಕ ನಾಗೇಂದ್ರ ಸೂಚನೆ
ಮೈಸೂರು

ಸಮರ್ಪಕ ಕುಡಿಯುವ ನೀರು ಪೂರೈಸಿ, ಕಸದ  ರಾಶಿ ತೆರವುಗೊಳಿಸಿ: ಶಾಸಕ ನಾಗೇಂದ್ರ ಸೂಚನೆ

January 18, 2020

ಮೈಸೂರು, ಜ.17(ಆರ್‍ಕೆ)-ನಜರ್ ಬಾದ್ ಬಡಾವಣೆ ನಿವಾಸಿಗಳಿಗೆ ಸಮರ್ಪಕ ವಾಗಿ ಕುಡಿಯುವ ನೀರು ಪೂರೈಸಿ ಕಸದ ರಾಶಿಗಳನ್ನು ತೆಗೆಸಿ ಸ್ವಚ್ಛಗೊಳಿಸುವಂತೆ ಶಾಸಕ ಎಲ್.ನಾಗೇಂದ್ರ ಅವರು ಅಧಿ ಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪಾಲಿಕೆ 40ನೇ ವಾರ್ಡ್‍ನ ನಜರ್ ಬಾದ್‍ನಲ್ಲಿ ಇಂದು ಪಾದಯಾತ್ರೆ ಕೈಗೊಂಡು ಸಾರ್ವಜನಿಕ ಕುಂದು-ಕೊರತೆ ಪರಿಶೀಲಿ ಸಿದ ಅವರು, ಚಾಮುಂಡಿ ವಿಹಾರ ಕ್ರೀಡಾಂಗಣದ ರಸ್ತೆ ಬದಿ, ಪಾರ್ಕುಗಳಲ್ಲಿ ಸಂಗ್ರಹವಾಗಿರುವ ಘನ ತ್ಯಾಜ್ಯವನ್ನು 5 ದಿನದೊಳಗಾಗಿ ತೆರವುಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು.

20 ಲಕ್ಷ ರೂ. ನಗರೋತ್ಥಾನ ಯೋಜನೆ ಅನುದಾನದಲ್ಲಿ ಡೆಕ್ ನಿರ್ಮಿಸಿ ಪಾರ್ಕ್ ಅಭಿವೃದ್ಧಿಗೆ ಕ್ರಮ ವಹಿಸಬೇಕು. ಕೇಬಲ್ ಅಳವಡಿಸಲು ತೆಗೆದಿರುವ ಗುಂಡಿ ಮುಚ್ಚಿಸ ಬೇಕು. ನಜರ್‍ಬಾದಿನ ಎಲ್ಲಾ ಮನೆಗಳಿಗೆ ನಿತ್ಯ ಕುಡಿಯುವ ನೀರು ಸರಬರಾಜು ಮಾಡುವಂತೆ ಕ್ರಮ ವಹಿಸಬೇಕೆಂದು ಪಾಲಿಕೆ ವಲಯ ಕಚೇರಿ-6ರ ವಲಯಾಧಿಕಾರಿ ಗಳಿಗೆ ಶಾಸಕರು ಸೂಚಿಸಿದರು.

ಹಾಳಾಗಿರುವ ವಿದ್ಯುತ್ ಕಂಬಗಳನ್ನು ತೆಗೆಸಿ, ನಜರ್‍ಬಾದ್ ಠಾಣೆ ಪಕ್ಕದ ಸರ್ಕಾರಿ ಶಾಲಾ ಕಟ್ಟಡ ರಿಪೇರಿಗೆ ಕ್ರಮ ವಹಿಸಬೇಕು. ಅರ್ಧಕ್ಕೇ ನಿಂತಿರುವ ನಿರ್ಗತಿಕರ ಆಶ್ರಯ ಕೇಂದ್ರದ ಕಟ್ಟಡ ಪೂರ್ಣಗೊಳಿಸಿ ಒಂದು ವೇಳೆ ನಿರ್ಗತಿಕರಿಗೆ ಬಳಕೆ ಯಾಗದಿದ್ದರೆ, ಸಮುದಾಯ ಭವನವನ್ನಾಗಿ ಪರಿವರ್ತಿಸಿ ಸಾರ್ವಜನಿಕರಿಗೆ ಸಣ್ಣಪುಟ್ಟ ಕಾರ್ಯಕ್ರಮ ನಡೆಸಲು ಒದಗಿಸಬೇಕೆಂದು ತಿಳಿಸಿದರು.

ಕರ್ನಾಟಕ ಒನ್ ಕೇಂದ್ರವಿರುವ ಉದ್ಯಾನ ಅಭಿವೃದ್ಧಿಪಡಿಸಿ ಗಿಡಗಳನ್ನು ಬೆಳೆಸುವ ಮೂಲಕ ಅನೈತಿಕ ಚಟುವಟಿಕೆಗಳು ನಡೆಯದಂತೆ ಕ್ರಮ ವಹಿಸಿದರಲ್ಲದೆ, ನಿತ್ಯ ಬಡಾವಣೆಯ ಎಲ್ಲಾ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುವಂತೆ ಅವರು ಸ್ಥಳದ ಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಹಳ್ಳದ ಕೇರಿಯ ಸಬರ್ಬನ್ ಬಸ್ ನಿಲ್ದಾಣದ ಹಿಂಭಾಗ ಕಾಂಪೌಂಡ್‍ಗೆ ಸಾರ್ವಜನಿಕರು ಶೌಚ ಮಾಡುತ್ತಿರುವುದ ರಿಂದ ಗಬ್ಬು ವಾಸನೆ ಬೀರುತ್ತಿದೆ ಎಂದು ಅಲ್ಲಿನ ನಿವಾಸಿಗಳು ದೂರಿದರು. ಆ ಬಗ್ಗೆ ಪಾಲಿಕೆ ಆರೋಗ್ಯಾಧಿಕಾರಿಗಳು ಗಮನಿಸಿ ಪರ್ಯಾಯ ವ್ಯವಸ್ಥೆ ಮಾಡ ಬೇಕೆಂದೂ ಶಾಸಕರು ಹೇಳಿದರು.

ಅಶೋಕ ರಸ್ತೆ ಹಿಂಭಾಗದ ಮಹದೇ ಶ್ವರ ದೇವಸ್ಥಾನ ಮತ್ತು ಚಾಮುಂಡೇಶ್ವರಿ ದೇವಸ್ಥಾನದ ಗಲ್ಲಿಗಳಲ್ಲಿ ವಿದ್ಯುತ್ ಕಂಬ ಗಳು ವಾಲಿ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಚೆಸ್ಕಾಂ ಅಧಿಕಾರಿಗಳು ಕ್ರಮ ವಹಿಸಬೇಕು ಎಂದ ನಾಗೇಂದ್ರ, ಸಾರ್ವ ಜನಿಕರಿಗೆ ಮೂಲ ಸೌಲಭ್ಯ ಒದಗಿಸಲು ಅಧಿಕಾರಿಗಳು ವಿಳಂಬ ಮಾಡಬಾರ ದೆಂದು ತಾಕೀತು ಮಾಡಿದರು.

ನಗರ ಪಾಲಿಕೆ ಸದಸ್ಯ ಸತೀಶ, ಚಾಮ ರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮ ಶೇಖರ ರಾಜು, ಮುಖಂಡರಾದ ಪರ ಮೇಶ, ಸರಸ್ವತಿ, ವಾಣೀಶ ಕುಮಾರ್, ರವಿ, ರಶ್ಮಿ, ಪೆನ್ನಾಲಾಲ್, ಪಾಲಿಕೆ ವಲಯಾ ಧಿಕಾರಿ ಗೀತಾ ಹುಡೇದಾ, ಅಭಿವೃದ್ಧಿ ಅಧಿಕಾರಿ ನಾಗರಾಜು, ಆರೋಗ್ಯಾಧಿಕಾರಿ ಡಾ. ಜಯಂತ್ ಸೇರಿದಂತೆ ಚೆಸ್ಕಾಂ, ಕೆಎಸ್‍ಆರ್‍ಟಿಸಿ, ಮುಡಾ, ಪಶುಪಾಲನಾ ಇಲಾಖೆ ಅಧಿಕಾರಿಗಳು ಶಾಸಕರ ಪಾದ ಯಾತ್ರೆಯಲ್ಲಿ ಹಾಜರಿದ್ದರು.

 

Translate »