ಮೈಸೂರು: ಭಗವಂತನ ಧ್ಯಾನದಿಂದ ಮಾನಸಿಕ ನೆಮ್ಮದಿ ಪಡೆದುಕೊಳ್ಳಬಹುದು. ಆದ್ದರಿಂದ ಪ್ರತಿ ಯೊಬ್ಬರೂ ಮಾನಸಿಕ ನೆಮ್ಮದಿಗಾಗಿ ಶ್ರೀ ಕೃಷ್ಣದೇವರನ್ನು ಪ್ರಾರ್ಥಿಸೋಣ ಎಂದು ಉಡುಪಿ ಅದಮಾರು ಮಠದ ಶ್ರೀ ವಿಶ್ವ ಪ್ರಿಯ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಮೈಸೂರು ಸರಸ್ವತಿಪುರಂ ಶ್ರೀಕೃಷ್ಣ ಧಾಮ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ರಜತ ಮಹೋತ್ಸವ ಸಂಭ್ರ ಮದ 3ನೇ ದಿನದ ವಿವಿಧ ಕ್ಷೇತ್ರದ ಸಾಧಕ ರಿಗೆ ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ 25 ವರ್ಷಗಳ ಹಿಂದೆ ಕರಾ ವಳಿಯ ಶ್ರೀ ಕೃಷ್ಣ ಭಕ್ತರು ಮೈಸೂರಿನಲ್ಲಿ ಶ್ರೀಕೃಷ್ಣಧಾಮವನ್ನು ಸ್ಥಾಪಿಸಿ, ಇಲ್ಲಿನ ಜನತೆ ಕೃಷ್ಣನನ್ನು ಮೈಸೂರಿಲ್ಲೂ ನೆನೆಯು ವಂತಾಯಿತು. ಶ್ರೀ ಕೃಷ್ಣದೇವರ ಚಿಂತನೆ ಲೋಕ ವ್ಯಾಪಿ, ಆತನ ದರ್ಶನವನ್ನು ಯಾವ ರೀತಿಯಲ್ಲಾದರೂ ಪಡೆದುಕೊಳ್ಳ ಬಹುದು ಎಂದರು.
ಭಗವಂತ ಎಂದಿಗೂ ಮಾತನಾಡುವು ದಿಲ್ಲ. ಆತ ಸದಾ ನಗು ಮೊಗದಲ್ಲಿರುತ್ತಾನೆ. ಹಾಗೆಯೇ ಸಾಧಕರು ಎಂದಿಗೂ ಮಾತ ನಾಡುವುದಿಲ್ಲ. ಅವರು ಸಾಧನೆ ಮೂಲಕ ಮಾತನಾಡುತ್ತಾರೆ. ನಂತರ ಎಲ್ಲರ ಮೆಚ್ಚು ಗೆಗೆ ಪಾತ್ರರಾಗುತ್ತಾರೆ. ಈ ಮೂಲಕ ಭಗ ವಂತನ ಕೃಪೆಗೆ ಪಾತ್ರರಾಗುತ್ತಾರೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕ ರಾದ ರಾಮಕೃಷ್ಣ ಉಪಾಧ್ಯಾಯ, ಪಿ.ಎಸ್.ಗೋಪಾಲ ಕೃಷ್ಣರಾವ್, ಬಿ.ಹಯ ವಧನಾಚಾರ್, ಕೆ.ರಾಮಕೃಷ್ಣ ಬಲ್ಲಾಳ, ಎಂ.ರಘುರಾಮರಾವ್ ಸೇರಿದಂತೆ ಇತರೆ ಗಣ್ಯರನ್ನು ಅಭಿನಂದಿಸಲಾಯಿತು. ವೇದಿಕೆ ಯಲ್ಲಿ ಶ್ರೀ ಕೃಷ್ಣಧಾಮ ಟ್ರಸ್ಟ್‍ನ ಅಧ್ಯಕ್ಷ ರವಿಶಾಸ್ತ್ರಿ, ಉಪಾಧ್ಯಕ್ಷ ಪಿ.ಜಯರಾಮಭಟ್ಟ, ಜೆ.ಎಲ್. ಅನಂತತಂತ್ರಿ, ಕಾರ್ಯದರ್ಶಿ ಹೆಚ್.ವಿ.ರಾಘವೇಂದ್ರ ಭಟ್, ಪಿ.ಜಿ. ಪ್ರವೀಣ್ ಉಪಸ್ಥಿತರಿದ್ದರು.