ಸಾಮಾನ್ಯವಾಗಿ ಕೆಟ್ಟದರತ್ತ ಮನಸ್ಸಾಗುತ್ತದೆ, ಅದಕ್ಕೇನು ಪರಿಹಾರ…
ಮೈಸೂರು

ಸಾಮಾನ್ಯವಾಗಿ ಕೆಟ್ಟದರತ್ತ ಮನಸ್ಸಾಗುತ್ತದೆ, ಅದಕ್ಕೇನು ಪರಿಹಾರ…

April 26, 2019

ಮೈಸೂರು: ಹೆಚ್ಚಾಗಿ ಟ್ಯಾಬ್, ಮೊಬೈಲ್ ಬಳಕೆಯಿಂದ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಂದೆ-ತಾಯಿ ಹೇಳುತ್ತಾರೆ. ಇದು ನಿಜವೆ?. ಕುರುಕಲು(ಜಂಕ್‍ಫುಡ್) ತಿಂಡಿ ಒಳ್ಳೆಯ ದಲ್ಲವೆಂದು ಗೊತ್ತಿದ್ದರೂ ಮನಸ್ಸು ಅದರೆ ಡೆಗೆ ಸೆಳೆಯುತ್ತದೆ. ಅದರಿಂದ ಹೊರ ಬರು ವುದು ಹೇಗೆ?. ನಿಮ್ಮ ಅನುಭವದಲ್ಲಿ ನೀವು ಕಂಡಿರುವ ವಿಚಿತ್ರವಾದ ಕೇಸು ಯಾವುದು?. ಬುದ್ಧಿ ಶಕ್ತಿ ಮತ್ತು ಮನಸಿಗೆ ಏನು ಸಂಬಂಧ ವಿದೆ?. ಕನಸು ಏಕೆ ಬಿಳುತ್ತೆ?. ಪರೀಕ್ಷೆಯ ವೇಳೆ ಉಂಟಾಗುವ ಭಯ ಒತ್ತಡದಿಂದ ಪಾರಾ ಗುವುದು, ಕೋಪವನ್ನು ಕಡಿಮೆ ಮಾಡಿ ಕೊಳ್ಳುವುದು ಹೇಗೆ? ಎಂಬಿತ್ಯಾದಿ ಪ್ರಶ್ನೆ ಗಳನ್ನು ಚಿಣ್ಣರು ಸುರಿಮಳೆಗೈದರು.

ರಂಗಾಯಣದ ಚಿಣ್ಣರ ಮೇಳದಲ್ಲಿ ಗುರು ವಾರ ಆಯೋಜಿಸಿದ್ದ ಚಿಣ್ಣರೊಂದಿಗೆ ಸಂವಾದದಲ್ಲಿ ಮನಶಾಸ್ತ್ರಜ್ಞ ಡಾ.ಅಭಿಜಿತ್ ಆರ್.ಹೊಸಗೋಡು ಅವರಿಗೆ ಚಿಣ್ಣರು, ತಮಗೆ ಅನಿಸಿದ್ದ ಪ್ರಶ್ನೆಗಳ ಸುರಿಮಳೆ ಗೈದರು. ನಂತರ ಡಾ.ಅಭಿಜಿತ್ ಮಾತ ನಾಡಿ, ದೈಹಿಕÀ ಆರೋಗ್ಯದ ಜತೆಗೆ ಮಾ£ Àಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ. ಕಲಿಕೆ ಹಾಗೂ ಶಿಕ್ಷಣಕ್ಕಿರುವ ವ್ಯತ್ಯಾಸ ಗಳೇನು? ಜೀವನ ಕ್ರಮ ಹೇಗಿರಬೇಕು? ಎಂಬುದರ ಬಗ್ಗೆ ವಿವರಿಸಿದರು.

ಮೊಬೈಲ್, ಟ್ಯಾಬ್‍ಗಳನ್ನು ಹೆಚ್ಚು ಬಳ ಸುವುದರಿಂದ ಮನಸ್ಸಿನ ಮೇಲೆ ಕೆಟ್ಟ ಪರಿ ಣಾಮ ಬಿರುತ್ತದೆ ಎಂದು ತಂದೆ ತಾಯಿ ಹೇಳು ತ್ತಾರೆ. ಇದು ನಿಜವೇ ಎಂಬ ಪ್ರಶ್ನೆಗೆ ಡಾ. ಅಭಿಜಿತ್ ಪ್ರತಿಕ್ರಿಯಿಸಿ, ಒಂದು ಅಥವಾ 2 ವರ್ಷ ಹೆಚ್ಚಾಗಿ ಟ್ಯಾಬ್, ಮೊಬೈಲ್ ಪೆÇೀನ್, ಕಂಪ್ಯೂಟರ್ ಬಳಸುವುದರಿಂದ ಆರೋ ಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಮಕ್ಕಳು ಇವುಗಳಿಂದ ದೂರ ಇರುವುದು ಒಳಿತು ಎಂದು ಉತ್ತರಿಸಿದರು.

ಕನಸು ಏಕೆ ಬೀಳುತ್ತದೆ ಎಂಬ ಪ್ರಕೃತ್ ಪ್ರಶ್ನೆಗೆ ಡಾ.ಅಭಿಜಿತ್ ಪ್ರತಿಕ್ರಿಯಿಸಿ, “ಹಗ ಲಿನ ವೇಳೆ ಯಾವುದಾದರೂ ಘಟನೆ ಮನಸ್ಸಿನ ಮೇಲೆ ಗಾಢÀ ಪರಿಣಾಮ ಬೀರು ತ್ತದೆ. ಆದ ಮನಸ್ಸಿನ ಕಾಡುವ ವಿಷಯ ಗಳು ಕನಸ್ಸಿನ ಮೂಲಕ ಹೊರ ಬರುತ್ತವೆ ಎಂದು ಉತ್ತರಿಸಿದರು.

ಮಕ್ಕಳನ್ನು ನೋಡಿ ಇಂಥಹುದೇ ಸಮಸ್ಯೆಯಿದೆ ಎಂದು ಕಂಡು ಹಿಡಿದು ಪರಿ ಹರಿಸುತ್ತೀರಾ? ಎಂಬ ಸನ್ನದ್ ಪ್ರಶ್ನೆಗೆ ಅಭಿ ಜಿತ್ ಪ್ರತಿಕ್ರಿಯಿಸಿ, ದೊಡ್ಡವರಾದರೆ ನಿಮ್ಮ ಸಮಸ್ಯೆ ಏನು? ಮನಸ್ಸಿನಲ್ಲಿ ಏನನಿಸುತ್ತಿದೆ ಎಂದು ಕೇಳುತ್ತೇವೆ. ಆದರೆ, ಚಿಕ್ಕ ಮಗು ವಿಗೆ ಹಾಗೆ ಕೇಳಲು ಸಾಧ್ಯವಿಲ್ಲ. ಹಾಗಾ ಗಿಯೇ ಮಕ್ಕಳಲ್ಲಿರುವ ನ್ಯೂನ್ಯತೆ ಅಥವಾ ಸಮಸ್ಯೆ ಗುರುತಿಸಲು ಪ್ಲೇ ಥೆರಪಿ ಮಾಡ ಲಾಗುತ್ತದೆ. ವೈದ್ಯರು ಮಗುವಿನೊಂದಿಗೆ ಆಟವಾಡುವ ಮೂಲಕ ಮಗುವಿನ ಸಮಸ್ಯೆ ಅರಿಯಲಾಗುತ್ತದೆ. ಜತೆಗೆ ಚಿತ್ರಣ ಮತ್ತು ಚಿತ್ರಕಲೆ ತೋರಿಸಿದಾಗ ಮಗು ಅಭಿವ್ಯಕ್ತಿ ಗೊಳಿಸುವ ಭಾವಗಳ ಆಧಾರದ ಮೇಲೆ ಸಮಸ್ಯೆಯನ್ನು ತಿಳಿದು ಚಿಕಿತ್ಸೆ ನೀಡಲಾಗು ತ್ತದೆ ಎಂದರು. ರಂಗಾಯಣ ಜಂಟಿ ನಿರ್ದೇ ಶಕ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

Translate »