ಮೈಸೂರು, ಆ. 2- ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ದಂಡದ ಮೊತ್ತ ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದು, ಇಂದು `ಸತ್ಯಮೇವ ಜಯತೆ’ ಸಂಘಟನೆ ವತಿಯಿಂದ ಅಗ್ರಹಾರ ಸುತ್ತಮುತ್ತ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರಗಳ ಪ್ರದರ್ಶನದ ಮೂಲಕ ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ ಸಂಚಾರ ನಿಯಮ ಹಾಗೂ ದಂಡದ ಬಗ್ಗೆ ಅರಿವು ಮೂಡಿಸಲಾಯಿತು. ಕೆ.ಆರ್. ಪೆÇಲೀಸ್ ಠಾಣೆಯ ಪೇದೆ ವಿಶ್ವನಾಥ್ ಈ ವೇಳೆ ಮಾತನಾಡಿ, ಶಾಲಾ ಶಿಕ್ಷಕರು, ಪೆÇಲೀಸರು, ವಕೀಲರು ಮತ್ತು ವಿದ್ಯಾವಂತರು ಹೆಲ್ಮೆಟ್ ಬಳಸಲು ಪ್ರಾರಂಭಿಸಿದರೆ, ಅವಿದ್ಯಾವಂತರು ಅದರಿಂದ ಪ್ರೇರಿತರಾಗುತ್ತಾರೆ. ಇದರಿಂದಾಗಿ ಅಪಘಾತ, ಅನಾಹುತಕ್ಕೆ ಕಡಿವಾಣ ಹಾಕಬಹುದು. ಜೊತೆಗೆ ಅನಗತ್ಯ ದಂಡ ತೆರುವುದು ತಪ್ಪುತ್ತದೆ ಎಂದರು.
ಹೊರ ದೇಶಗಳಲ್ಲಿ ಮಕ್ಕಳಿಗೆ ರಸ್ತೆ ಸುರಕ್ಷತಾ ಸಾಧನಗಳು, ಸಂಚಾರಿ ಫಲಕಗಳ ಬಗ್ಗೆ ಅರಿವು ಮೂಡಿಸಿ ಅನಾಹುತಗಳನ್ನು ಸಾಕಷ್ಟು ಕಡಿಮೆ ಮಾಡಲು ಪ್ರಯತ್ನಗಳು ನಡೆಯುತ್ತಿರುತ್ತವೆ. ಅಂತಹ ಪ್ರಯತ್ನಗಳು ನಮ್ಮ ದೇಶದ ಪ್ರತಿ ಮಗುವಿಗೂ ದೊರಕುವಂತಹ ವ್ಯವಸ್ಥೆ ಆಗಬೇಕು. ಅಮೂಲ್ಯ ಜೀವದ ಉಳಿವಿಗಾಗಿ ಪ್ರತಿ ಯೊಬ್ಬರೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಶಿಸ್ತುಬದ್ಧ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಹಕರಿಸುವ ಮೂಲಕ ಕಾನೂನು ಗೌರವಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತದಲ್ಲಿ ಅಪಾರ ಸಾವು ನೋವು ಸಂಭವಿಸುತ್ತಿವೆ. ಇದರ ಪೈಕಿ ಯುವಕರೇ ಹೆಚ್ಚು. ಸಾವು ಸಂಭವಿಸಿದಾಗ ಕೆಲ ದಿನ ಅಗತ್ಯ ಎಚ್ಚರಿಕಾ ಕ್ರಮ ಕೈಗೊಂಡು, ನಂತರ ನಮ್ಮ ಜವಬ್ದಾರಿ ಮರೆಯುತ್ತೇವೆ. ಅದು ಮತ್ತೆ ಅನಾಹುತಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಸಮಾಜ ಸೇವಕ ಜಯಸಿಂಹ ಶ್ರೀಧರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಾಹನ ಸವಾರರು ಬೇಕಾಬಿಟ್ಟಿ ಚಾಲನೆ ಮಾಡಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದರಿಂದ ಸಂಚಾರ ಪೆÇಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಸುಶಿಕ್ಷಿತ ಮತ್ತು ಯುವ ಸಮುದಾಯವೇ ಸಂಚಾರ ನಿಯಮಗಳ ಪಾಲನೆ ಮಾಡಲು ಮುಂದಾಗದೇ ಇರುವುದು ವಿಷಾದಕಾರಿ ಎಂದರು. ಈ ವೇಳೆ ಸತ್ಯ ಮೇವ ಜಯತೆಯ ಅಧ್ಯಕ್ಷರಾದ ಶ್ರೀನಿವಾಸ್ ರಾಕೇಶ್, ವಿನಯ್ ಕಣಗಾಲ್, ಹರೀಶ್ ನಾಯ್ಡು, ಷಡಾಕ್ಷರಿ, ಮಂಜು, ಗಿರೀಶ್, ಅಶೋಕ್ ಹಾಗೂ ಇನ್ನಿತರರು ಹಾಜರಿದ್ದರು.